More

    ಕೆ.ದೇವರಹಳ್ಳಿಯಲ್ಲಿ ಜಮೀನು ಸಮಸ್ಯೆ ಶೀಘ್ರ ಇತ್ಯರ್ಥ

    ಯಳಂದೂರು: ಸೋಲಿಗರು ವಾಸಿಸುವ ಕಾಡಂಚಿನ ಗ್ರಾಮವಾದ ಕೆ.ದೇವರಹಳ್ಳಿ ಗ್ರಾಮದಲ್ಲಿ ಕಾಡಿಗೆ ಸೇರಿಕೊಂಡಿರುವ ರೈತರ ಜಮೀನುಗಳ ಸಮಸ್ಯೆಯನ್ನು ಶೀಘ್ರದಲ್ಲೇ ಬಗೆಹರಿಸಲು ಸಂಬಂಧಪಟ್ಟ ಅರಣ್ಯ ಇಲಾಖೆ ಉನ್ನತ ಅಧಿಕಾರಿಗಳ ಸಭೆ ನಡೆಸಿ, ಪರಿಹಾರ ದೊರಕಿಸಿಕೊಡುವ ಭವರಸೆಯನ್ನು ಜಿಲ್ಲಾಧಿಕಾರಿ ಶಿಲ್ಪಾನಾಗ್ ನೀಡಿದರು.

    ಕೆ.ದೇವರಹಳ್ಳಿ ಗ್ರಾಮದ ಪಕ್ಕದಲ್ಲಿರುವ ಬಿಆರ್‌ಟಿ ಹುಲಿ ರಕ್ಷಿತ ಅರಣ್ಯಕ್ಕೆ ಸೇರಿರುವ ಜಮೀನುಗಳಿಗೆ ಗುರುವಾರ ಭೇಟಿ ನೀಡಿ ಮಾತನಾಡಿದರು.
    1964ರಲ್ಲೇ ಇಲ್ಲಿ ಕೆಲವು ರೈತರಿಗೆ ಜಮೀನನ್ನು ದರಖಾಸ್ತು ಮೂಲಕ ನೀಡಲಾಗಿದೆ. ಸರ್ವೇ ನಂ.4ರಲ್ಲಿ 392 ಎಕರೆ ಜಮೀನು ಸರ್ಕಾರಿ ಗುಡ್ಡವಾಗಿದು,್ದ ಇದರಲ್ಲಿ 181.8 ಎಕರೆ ಜಮೀನನ್ನು 70 ರೈತರಿಗೆ ನೀಡಲಾಗಿದೆ. ಸರ್ವೇ ನಂ.5ರಲ್ಲಿ 540 ಎಕರೆ ಜಮೀನಿನದ್ದು, ಇದರಲ್ಲಿ 99 ಎಕರೆ ಜಮೀನನ್ನು 22 ರೈತರಿಗೆ ನೀಡಲಾಗಿದೆ. ಸರ್ವೇ ನಂ.6ರಲ್ಲಿ ಒಟ್ಟು 606.33 ಎಕರೆ ಜಮೀನಿದೆ ಎಂದರು.

    ಆದರೆ ಅರಣ್ಯ ಇಲಾಖೆಯ ಕಾಯ್ದೆ ಜಾರಿಯಾದ ನಂತರ ಇಲ್ಲಿ ವ್ಯವಸಾಯ ಮಾಡಲು ಅರಣ್ಯ ಇಲಾಖೆ ಅನುಮತಿ ನೀಡುತ್ತಿಲ್ಲ. ಅಲ್ಲದೇ, ಇದರ ಹಕ್ಕುಪತ್ರ, ಆರ್‌ಟಿಸಿಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಜಮೀನಿದ್ದರೂ ಇದು ರೈತರ ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಇವರಿಗೆ ಪರ್ಯಾಯ ಜಮೀನು ನೀಡುವುದು ಅಥವಾ ಪರಿಹಾರ ನೀಡುವುದೋ ಎಂಬುದಾಗಿ ಸಭೆ ನಡೆಸಿ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.

    ಸೋಲಿಗ ಜನಾಂಗದ ವಿದ್ಯಾರ್ಥಿಗಳೇ ಹೆಚ್ಚು ವ್ಯಾಸಂಗ ಮಾಡುವ ಕಾಡಂಚಿನ ಕೆ.ದೇವರಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಗುರುವಾರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಭೇಟಿ ನೀಡಿ, ಲೆಕ್ಕ ಹೇಳಿಕೊಡುವ ಮೂಲಕ ಮಕ್ಕಳಿಗೆ ಪಾಠ ಮಾಡಿದರು. ಇಲ್ಲಿನ ಮಕ್ಕಳಿಗೆ ಪ್ರಶ್ನೆಗಳನ್ನು ಕೇಳುವ ಮೂಲಕ ಅವರ ಬುದ್ಧಿಮತ್ತೆಯನ್ನು ಪರೀಕ್ಷಿಸಿದರು. ಯಾವುದೇ ಕಾರಣಕ್ಕೂ ವ್ಯಾಸಂಗವನ್ನು ನಿಲ್ಲಿಸಬಾರದು ಎಂದು ಬುದ್ಧಿವಾದ ಹೇಳಿದರು.
    ಈ ಮಕ್ಕಳಿಗೆ ಸರ್ಕಾರದಿಂದ ದೊರೆಯುವ ಊಟ, ಬಟ್ಟೆ, ಶೂ ಸೇರಿದಂತೆ ಇತರ ಸೌಲಭ್ಯಗಳನ್ನು ನೀಡಬೇಕು ಎಂದು ಶಿಕ್ಷಕರಿಗೆ ಮನದಟ್ಟು ಮಾಡಿದರು.
    ತಹಸೀಲ್ದಾರ್ ಜಯಪ್ರಕಾಶ್, ಆರ್‌ಐ ಯದುಗಿರಿ, ಆರ್‌ಎಫ್‌ಒ ನಾಗೇಂದ್ರ ನಾಯಕ್, ಶಿಕ್ಷಕ ರವಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts