More

    ಟಿವಿ ಸ್ವಿಚ್​ ಆಫ್​ ಮಾಡದ ಅಪ್ಪನನ್ನೇ ಗುಂಡಿಟ್ಟು ಕೊಂದ ಮಾಜಿ ಯೋಧ

    ಖಾನ್ಪುರ: ರಾತ್ರಿ ಎಷ್ಟು ಹೊತ್ತಾದರೂ ಟಿವಿ ಆಫ್​ ಮಾಡದೇ ಇದ್ದ ತಂದೆ ವಿರುದ್ಧ ಸಿಟ್ಟಾದ ಮಾಜಿ ಯೋಧ, ಅವರನ್ನು ಶೂಟ್​ ಮಾಡಿ ಕೊಂದು ಹಾಕಿದ್ದಾನೆ. ಪರಿಣಾಮ 80 ವರ್ಷ ವಯಸ್ಸಿನ ಲಾಲಾ ರಾಮ್​​ ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

    ಉತ್ತರ ಪ್ರದೇಶದ ನಾಸೀರ್​ಪುರ್ ಗ್ರಾಮದಲ್ಲಿ ಗುರುವಾರ ರಾತ್ರಿ ಈ ಪ್ರಕರಣ ನಡೆದಿದೆ. ಪುತ್ರ, ಮಾಜಿ ಯೋಧ ಅಶೋಕ್​ ಕಟಿಯಾರ್ ಈ ಕೃತ್ಯ ಎಸಗಿದ್ದಾನೆ. ಟಿವಿ ಆಫ್​ ಮಾಡುವ ವಿಚಾರಕ್ಕೆ ತಂದೆ-ಮಗನ ನಡುವೆ ವಾಗ್ವಾದ ನಡೆದಿದೆ. ಟಿವಿ ಆಫ್​ ಮಾಡಿ ಎಂದರೂ ತಂದೆ ಇನ್ನೂ ಟಿವಿ ನೋಡುತ್ತಲೇ ಇದ್ದಿದ್ದರಿಂದ ಸಿಟ್ಟಾದ ಪುತ್ರ ಮೊದಲಿಗೆ ತಂದೆಯನ್ನು ತಳ್ಳಿದ್ದಾನೆ. ನಂತರ ತನ್ನ ಬಳಿ ಇರುವ ಡಬಲ್ ಬ್ಯಾರೆಲ್​ ಗನ್​ನಿಂದ ಶೂಟ್​ ಮಾಡಿದ್ದಾನೆ. ಗಂಭೀರ ಗಾಯಕ್ಕೊಳಗಾದ ತಂದೆ ಮೃತಪಟ್ಟಿದ್ದಾರೆ ಎಂದು ಎಎಸ್​ಪಿ ಅನೂಪ್​ ಕುಮಾರ್ ತಿಳಿಸಿದ್ದಾರೆ.

    ಮಾಜಿ ಯೋಧ ಅಶೋಕ್​ ಕುಟುಂಬದ ಜತೆ ನಾಸೀರ್​ಪುರದಲ್ಲಿ ನೆಲೆಸಿದ್ದು, ಮದ್ಯವ್ಯಸನಿ ಆಗಿದ್ದು ಚಿಕ್ಕ ಚಿಕ್ಕ ವಿಷಯಕ್ಕೂ ಜಗಳ ಮಾಡುತ್ತಿದ್ದ. ಆತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts