More

    ಊರಿಗೆ ಬಂದ್ರು ಇಕ್ಕಟ್ಟಿಗೆ ಸಿಲುಕಿದ್ರು: ಸ್ವಗ್ರಾಮಕ್ಕೆ ವಾಪಸಾದ ಆರು ಜನರಿಗೆ ನೋ ಎಂಟ್ರಿ; ಶಾಲೆಯಲ್ಲಿ ಕ್ವಾರಂಟೈನ್!

    ಹುಮನಾಬಾದ್: ದುಡಿಯಲು ಮಹಾರಾಷ್ಟ್ರಕ್ಕೆ ಗುಳೆ ಹೋಗಿದ್ದ 10 ಜನ ಲಾಕ್ಡೌನ್ ಹಿನ್ನೆಲೆಯಲ್ಲಿ ತಾಲೂಕಿಗೆ ಆಗಮಿಸಿದ್ದಾರೆ. ಎಲ್ಲೆಡೆ ಕರೊನಾ ಆತಂಕ ಮೂಡಿದ್ದರಿಂದ ಗ್ರಾಮಸ್ಥರು 6 ಜನರನ್ನು ವಾಪಸ್ ಕಳುಹಿಸಿದರೆ, ದಂಪತಿ ಹಾಗೂ ಇಬ್ಬರು ಮಕ್ಕಳನ್ನು ಹಿಂದಕ್ಕೆ ಕಳಿಸಲು ಪ್ರಯತ್ನಿಸಿ, ಕೊನೆಗೆ ಹೋಮ್ ಕ್ವಾರಂಟೈನ್ಗೆ ಅಟ್ಟಿದ ಪ್ರಸಂಗ ಸೋಮವಾರ ಜರುಗಿದೆ.

    ಉದ್ಯೋಗ ಅರಸಿ ಮುಂಬೈಗೆ ಹೋಗಿದ್ದ ಸಿಂದಬಂದಗಿಯ ಕೂಲಿ ಕಾರ್ಮಿಕ ದಂಪತಿ ಹಾಗೂ ಇಬ್ಬರು ಚಿಕ್ಕ ಮಕ್ಕಳು ಗ್ರಾಮಕ್ಕೆ ಭಾನುವಾರ ಬಂದಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಪುನಃ ಮುಂಬೈಗೆ ತೆರಳುವಂತೆ ಸೂಚಿಸಿದ ಅಧಿಕಾರಿಗಳು, ಸೋಮವಾರ ಮಹಾರಾಷ್ಟ್ರ ಗಡಿ ಭಾಗದ ಚಂಡಕಾಪುರವರೆಗೆ ಕರೆದೊಯ್ದು ಬಿಟ್ಟಿದ್ದಾರೆ.

    ಆದರೆ ಮಹಾರಾಷ್ಟ್ರದವರು ಸಹ ಅವರ ಪ್ರವೇಶಕ್ಕೆ ಅವಕಾಶ ನೀಡಲಿಲ್ಲ. ಇದರಿಂದ ತ್ರಿಶಂಕು ಸ್ಥಿತಿಗೆ ಸಿಲುಕಿದ ಈ ಕುಟುಂಬದ ಬಗ್ಗೆ ತಾಲೂಕಿನ ಅಧಿಕಾರಿಗಳು ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಂತಿಮವಾಗಿ ತಹಸೀಲ್ದಾರ್ ಮಾನವೀಯತೆ ಆಧರಿಸಿ ಈ ಕುಟುಂಬವನ್ನು ಊರಿನ ಶಾಲೆಯಲ್ಲಿ ಕ್ವಾರಂಟೈನ್ನಲ್ಲಿ ಇಡುವ ವ್ಯವಸ್ಥೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಇನ್ನೊಂದೆಡೆ ಮಹಾರಾಷ್ಟ್ರದಿಂದ ಕಠಳ್ಳಿ ಗ್ರಾಮಕ್ಕೆ ವಾಹನವೊಂದರಲ್ಲಿ ಬಂದಿದ್ದ 6 ಜನರನ್ನು ಅದೇ ವಾಹನದಲ್ಲಿ ಸೋಮವಾರ ವಾಪಸ್ ಕಳುಹಿಸಿಕೊಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕರೊನಾದಂಥ ಕಷ್ಟ ಕಾಲದಲ್ಲೂ ಲಿವರ್ ಕಸಿಗೆ ಒಳಗಾದ ಬಾಲಕಿಗೆ ಔಷಧ ಪೂರೈಕೆ: ನೆರವು ಬಂದಿದ್ದು ಎಲ್ಲಿಂದ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts