More

    ಗುಣಮಟ್ಟ ನೆಪ, ತೊಗರಿ ಖರೀದಿಗೆ ಹಿಂದೇಟು

    ಹನುಮಸಾಗರ: ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ತೊಗರಿ ಖರೀದಿ ಕೇಂದ್ರದಲ್ಲಿ ಅಧಿಕಾರಿಗಳು ಗುಣಮಟ್ಟದ ನೆಪ ಹೇಳಿ ಖರೀದಿಗೆ ಹಿಂದೇಟು ಹಾಕುತ್ತಿದ್ದು, ಬೆಳೆಗಾರರು ಸಂದಿಗ್ಧಸ್ಥಿತಿಗೆ ಸಿಲುಕಿದ್ದಾರೆ.

    ಮೂರು ದಿನಗಳಿಂದ ಖರೀದಿ ಕೇಂದ್ರ ಪ್ರಾರಂಭವಾಗಿದ್ದು, ಪಟ್ಟಣ ಸೇರಿ ಸುತ್ತಮುತ್ತಲಿನ ಗ್ರಾಮಗಳ ರೈತರು ತೊಗರಿ ಮಾರಾಟ ಮಾಡಲು ಖರೀದಿ ಕೇಂದ್ರದ ಮುಂದೆ ಚೀಲಗಳೊಂದಿಗೆ ಕಾಯುತ್ತಿದ್ದಾರೆ. ಶುಕ್ರವಾರ ಟ್ರಾೃಕ್ಟರ್ ಸೇರಿ ವಿವಿಧ ವಾಹನಗಳಲ್ಲಿ ಸುಮಾರು 500ಕ್ಕೂ ಹೆಚ್ಚು ಚೀಲಗಳೊಂದಿಗೆ ರೈತರು ಖರೀದಿ ಕೇಂದ್ರದ ಮುಂದೆ ಮಾರಾಟಕ್ಕೆ ಕಾಯುತ್ತಿದ್ದಾರೆ. ಆದರೆ, ಅಧಿಕಾರಿಗಳು ಗುಣಮಟ್ಟದ ಕುಂಟು ನೆಪ ಹೇಳಿ ಕೆಲ ರೈತರ ತೊಗರಿಗಳನ್ನು ಖರೀದಿಸುತ್ತಿಲ್ಲ. ಇದರಿಂದ ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

    ನಮ್ಮ ತೊಗರಿಗಳು ಗುಣಮಟ್ಟದಲ್ಲಿವೆ. ಒಂದು ಚೀಲದಲ್ಲಿ ಒಂದು ಕೆಜಿಯಷ್ಟು ಕಾಳುಗಳು ಮಾತ್ರ ಕಪ್ಪಾಗಿರಬಹುದು. ಆದರೆ, ಅಧಿಕಾರಿಗಳು ಗುಣಮಟ್ಟ ಇಲ್ಲ ಎಂದು ತೊಗರಿ ಖರೀದಿಸುತ್ತಿಲ್ಲ. ಇದರಿಂದ ಕೆಲ ರೈತರು ಕಡಿಮೆ ಬೆಲೆಗೆ ಬೆರೆಡೆ ತೊಗರಿ ಮಾರಾಟ ಮಾಡುತ್ತಿದ್ದಾರೆ. ನಾವು ಮೂರು ದಿನಗಳಿಂದ ತೊಗರಿ ಖರೀದಿ ಕೇಂದ್ರದ ಮುಂದೆ ಕಾಯುತ್ತಿದ್ದೇವೆ. ಖರೀದಿಗೆ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಸಂಕಷ್ಟಕ್ಕೆ ಸಿಲುಕಿದ್ದು, ಸಂಬಂಧಪಟ್ಟ ಮೇಲಧಿಕಾರಿಗಳು ಇತ್ತ ಗಮನ ಹರಿಸಿ ಅನ್ಯಾಯ ತಡೆಯಬೇಕೆಂದು ಹಸಿರು ಸೇನೆ ಹಾಗೂ ರೈತ ಸಂಘದ ಸ್ಥಳೀಯ ಘಟಕದ ಅಧ್ಯಕ್ಷ ಮುತ್ತಣ್ಣ ಹಲಕುಲಿ, ರೈತರಾದ ಚಂದ್ರಶೇಖರ ಹಳ್ಳಿಗುಡಿ, ಯಲ್ಲಪ್ಪ, ಮೈಬುಬಸಾಬ ದಗ್ವಾಲ್, ಶರಣಪ್ಪ ಬಿಲ್ಕಾರ್, ಶಿವಾನಂದ, ರಾಮಣ್ಣ ಹುಲ್ಲೂರು, ಸಿದ್ದಪ್ಪ ಕೊಪ್ಪಳ, ಶಿವಕಾಂತಪ್ಪ ಹಾದಿಮನಿ ಒತ್ತಾಯಿಸಿದ್ದಾರೆ.

    ಗ್ರೇಡಿಂಗ್ ಕಡಿಮೆ ಬಂದಿದ್ದರಿಂದ ಗ್ರೇಡರ್‌ಗಳು ರಿಜೆಕ್ಟ್ ಮಾಡಿದ್ದಾರೆ. ಈ ವರ್ಷ ಪ್ರತಿ ಬ್ಯಾಗ್‌ಗಳಿಗೆ ಬಾರ್‌ಕೋಡ್ ಹಾಕುತ್ತಿದ್ದರಿಂದ ಖರೀದಿ ಮಾಡುವುದು ತಡವಾಗುತ್ತಿದೆ. ಗ್ರೇಡ್ ಬರದಿರುವ ರೈತರು ತಕರಾರು ಮಾಡುತ್ತಿದ್ದರಿಂದ ಬೇರೆ ರೈತರ ತೊಗರಿ ಖರೀದಿಸಲು ತಡವಾಗಿದೆ. ರೈತರು ಹಾಗೂ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ಖರೀದಿ ಮಾಡಲಾಗುವುದು. ಸುರೇಶ ಪಟೇದ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯದರ್ಶಿ ಹನುಮಸಾಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts