More

    ಗಾಜಿನಮನೆಯಲ್ಲಿ ಪಜಲ್ ಪಾರ್ಕಿಂಗ್

    ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ಇಂದಿರಾ ಗಾಜಿನಮನೆ ಉದ್ಯಾನದಲ್ಲಿ ಕಾರುಗಳ ನಿಲುಗಡೆಗೆ ಪಜಲ್ ರ್ಪಾಂಗ್ ವ್ಯವಸ್ಥೆ ರೂಪಿಸಲಾಗುತ್ತಿದೆ. ಕಾಮಗಾರಿ ಬಹುತೇಕ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದ್ದು, ವಾರದಲ್ಲಿ ಟ್ರಯಲ್ ರನ್ ನಡೆಸಲು ಅಧಿಕಾರಿಗಳು ಅಣಿಯಾಗಿದ್ದಾರೆ.

    180 ಚದರ ಮೀಟರ್ ವಿಸ್ತೀರ್ಣದ ಸ್ಥಳದಲ್ಲಿ ಜಿ ಪ್ಲಸ್ 5 ಲೆವಲ್ ಮಾದರಿಯಲ್ಲಿ ಏಕಕಾಲಕ್ಕೆ 37 ಕಾರುಗಳನ್ನು ರ್ಪಾಂಗ್ ಮಾಡಬಹುದಾಗಿದೆ. ಯಾವುದೇ ಲೆವೆಲ್​ನಲ್ಲಿ ಕಾರ್ ನಿಲುಗಡೆ ಮಾಡಿದರೂ ಅತ್ತಿಂದಿತ್ತ ಚಲನವಲನ ಮಾಡಬಹುದು. ಸುಲಭದಲ್ಲಿ ಮೇಲಕ್ಕೆ- ಕೆಳಕ್ಕೆ ಒಯ್ಯಬಹುದು ಹಾಗೂ ಹೊರ ತೆಗೆಯಬಹುದು. ಇಲೆಕ್ಟ್ರೋ-ಮೆಕ್ಯಾನಿಕಲ್ ತಂತ್ರಜ್ಞಾನದಡಿ ಇದು ಕಾರ್ಯನಿರ್ವಹಿಸಲಿದೆ.

    4.59 ಕೋಟಿ ರೂ. ವೆಚ್ಚದಲ್ಲಿ ಪಜಲ್ ರ್ಪಾಂಗ್ ನಿರ್ವಿುಸಲಾಗುತ್ತಿದೆ. ದೆಹಲಿ ಮೂಲದ ರಾಮರತನ್ ಇನ್​ಫ್ರಾಸ್ಟ್ರಕ್ಚರ್ ಪ್ರೖೆವೇಟ್ ಲಿಮಿಟೆಡ್ ಕಂಪನಿ ಗುತ್ತಿಗೆ ಪಡೆದಿದ್ದು, ಮುಂದಿನ 5 ವರ್ಷಗಳ ಕಾಲ ನಿರ್ವಹಣೆ ಹೊಣೆ ಸಹ ಅವರಿಗೆ ವಹಿಸಲಾಗಿದೆ. ಬೆಂಗಳೂರಿನ ಕೆಂಪೇಗೌಡ ವೃತ್ತ, ಇಂದಿರಾ ನಗರದಲ್ಲಿ ಬಹು ವಾಹನಗಳ ರ್ಪಾಂಗ್ ವ್ಯವಸ್ಥೆ ಇದೆ. ಆದರೆ, ಈ ರೀತಿಯ ಪಜಲ್ ರ್ಪಾಂಗ್ ವ್ಯವಸ್ಥೆ ರಾಜ್ಯದಲ್ಲಿ ಬೇರೆಲ್ಲೂ ಇಲ್ಲ. ಹುಬ್ಬಳ್ಳಿಯ ಹಳೇ ಕೋರ್ಟ್ ವೃತ್ತದ ಬಳಿ 40 ಕೋಟಿ ರೂ. ವೆಚ್ಚದಲ್ಲಿ ನಿರ್ವಣವಾಗುತ್ತಿರುವ ಬಹು ಮಹಡಿ ವಾಹನ ನಿಲುಗಡೆ ವ್ಯವಸ್ಥೆಗಿಂತ ಇದು ಭಿನ್ನವಾದುದು.

    ನೋ ರ್ಪಾಂಗ್ ಪ್ರದೇಶ: ಇಂದಿರಾ ಗಾಜಿನಮನೆ ಸುತ್ತಲಿನ ಪ್ರದೇಶದಲ್ಲಿ ಸೂಕ್ತ ರ್ಪಾಂಗ್ ವ್ಯವಸ್ಥೆಯೇ ಇಲ್ಲ. ಬೃಹತ್ ಐಟಿ ಪಾರ್ಕ್ ಕಟ್ಟಡದ ನೆಲಮಹಡಿಯಲ್ಲೂ ವಾಹನಗಳ ರ್ಪಾಂಗ್​ಗೆ ಸಾಕಷ್ಟು ಸ್ಥಳಾವಕಾಶವಿಲ್ಲ. ಎದುರಿಗೆ ರಸ್ತೆ ಮೇಲೆ ಸಾಲು ಸಾಲು ವಾಹನಗಳು ನಿಂತಿರುತ್ತವೆ. ಸಮೀಪದ ಸುಜಾತಾ ಟಾಕೀಸ್, ಹೊಸೂರಿನ ಗಾಳಿ ದುರ್ಗಮ್ಮ ದೇವಸ್ಥಾನದ ಅಕ್ಕ ಪಕ್ಕ ವಾಹನಗಳನ್ನು ನಿಲ್ಲಿಸಲಾಗುತ್ತದೆ. ಈ ಪ್ರದೇಶಗಳನ್ನು ನೋ ರ್ಪಾಂಗ್ ಪ್ರದೇಶವೆಂದು ಹು-ಧಾ ಪೊಲೀಸ್ ಕಮಿಷನರೇಟ್ ಘೊಷಿಸಬೇಕೆಂದು ಸ್ಮಾರ್ಟ್ ಸಿಟಿ ಲಿಮಿಟೆಡ್ ಕಂಪನಿ ಬಯಸಿದೆ. ಹಾಗಾದಲ್ಲಿ ಮಾತ್ರ ಪಜಲ್ ರ್ಪಾಂಗ್ ಯಶಸ್ಸು ಕಾಣಲಿದೆ.

    ‘ಕೆಲ ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ನಡೆದ ಟೈಕಾನ್ ಸಮ್ಮೇಳನದಲ್ಲಿ ರಾಮರತನ್ ಇನ್​ಫ್ರಾಸ್ಟ್ರಕ್ಚರ್ ಪ್ರೖೆವೇಟ್ ಲಿಮಿಟೆಡ್ ಕಂಪನಿಯ ಮಾಲೀಕ ಸುಮಿತ ಕಾಬ್ರಾ ಅವರು ಪಾಲ್ಗೊಂಡಿದ್ದರು. ಆಗ ಅವರು ಪಜಲ್ ರ್ಪಾಂಗ್ ಬಗ್ಗೆ ಪ್ರಸ್ತಾಪಿಸಿದ್ದರು. ಹುಬ್ಬಳ್ಳಿಯಲ್ಲೂ ಇದೇ ರೀತಿಯ ರ್ಪಾಂಗ್ ವ್ಯವಸ್ಥೆ ರೂಪಿಸುವ ಬಗ್ಗೆ ಸ್ಮಾರ್ಟ್ ಸಿಟಿ ಯೋಜನೆಯ ಅಧಿಕಾರಿಗಳು ಹಾಗೂ ಕಂಪನಿಯ ಜತೆ ನಾವು ಕೊಂಡಿಯಾಗಿ ಕೆಲಸ ಮಾಡಿದ್ದೇವು’ ಎಂದು ಟೈ ಹುಬ್ಬಳ್ಳಿ ಸಂಸ್ಥೆ ಮಾಜಿ ಅಧ್ಯಕ್ಷ ಶಶಿಧರ ಶೆಟ್ಟರ್ ನೆನಪಿಸಿಕೊಂಡಿದ್ದಾರೆ.

    ಪಜಲ್ ರ್ಪಾಂಗ್ ವ್ಯವಸ್ಥೆ ರಾಜ್ಯದಲ್ಲಿ ಬೇರೆಲ್ಲೂ ಇಲ್ಲ. ಇದರ ಪರೀಕ್ಷಾರ್ಥ ಬಳಕೆ ಶೀಘ್ರದಲ್ಲೇ ನಡೆಯಲಿದೆ. ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುವ ನಗರ ಮಟ್ಟದ ಸಲಹಾ ಸಮಿತಿಯು ರ್ಪಾಂಗ್ ಶುಲ್ಕವನ್ನು ನಿರ್ಧರಿಸಲಿದೆ.
    | ಎಸ್.ಎಚ್. ನರೇಗಲ್, ವಿಶೇಷಾಧಿಕಾರಿ, ಹು- ಧಾ ಸ್ಮಾರ್ಟ್ ಸಿಟಿ ಲಿಮಿಟೆಡ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts