More

    ಹತ್ತೂರ ಸಂತೆಗೆ ವಿಘ್ನ

    ಪುತ್ತೂರು: ಪುತ್ತೂರಿನ ವಾರದ ಸಂತೆಗೆ ಶಾಶ್ವತ ಮಾರುಕಟ್ಟೆ ನಿರ್ಮಾಣ ಕನಸು ಕಮರಿದೆ. 3 ವರ್ಷದ ಹಿಂದೆ ಪುತ್ತೂರ ಸಂತೆಗೆ ಸ್ಥಳ ನಿಗದಿಪಡಿಸಿ ನಗರೋತ್ಥಾನ ಯೋಜನೆಯಡಿ 1 ಕೋಟಿ ರೂಪಾಯಿ ಮೀಸಲಿರಿಸಲಾಗಿತ್ತು. ಆದರೆ ಈಗ ಸಂತೆ ಜಮೀನು ರೂಪಾಂತರಗೊಂಡಿದ್ದು, ಸಂತೆಕಟ್ಟೆ ನಿರ್ಮಾಣಕ್ಕಿಟ್ಟಿದ್ದ ಅನುದಾನ ಬೇರೆ ಯೋಜನೆಗೆ ಬಳಕೆ ಮಾಡಲಾಗುತ್ತಿದೆ.

    ಮಿನಿ ವಿಧಾನಸೌಧದ ಪಕ್ಕದ ಹಳೇ ಪುರಸಭಾ ಕಚೇರಿ ಸ್ಥಳದಲ್ಲಿ ಸಂತೆ ಮಾರುಕಟ್ಟೆ ನಿರ್ಮಿಸಲು ಹಿಂದಿನ ಜಯಂತಿ ಬಲ್ನಾಡ್ ಅಧ್ಯಕ್ಷತೆಯ ನಗರಸಭಾ ಆಡಳಿತ ನಿರ್ಧಾರ ಕೈಗೊಂಡಿತ್ತು. ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ ನಗರೋತ್ಥಾನ ಯೋಜನೆಯಲ್ಲಿ ಪುತ್ತೂರಿಗೆ ಮಂಜೂರಾಗಿದ್ದ 25 ಕೋಟಿ ರೂ.ಗಳಲ್ಲಿ 1 ಕೋಟಿ ರೂ.ಗಳನ್ನು ಮಾರುಕಟ್ಟೆ ನಿರ್ಮಾಣಕ್ಕೆಂದೇ ಮೀಸಲಿರಿಸಲಾಗಿತ್ತು. ಕಿಲ್ಲೆ ಮೈದಾನದಲ್ಲಿ 18 ವರ್ಷಗಳಿಂದ ತಾತ್ಕಾಲಿಕ ನೆಲೆಯಲ್ಲಿ ನಡೆಯುತ್ತಿರುವ ವಾರದ ಸಂತೆಯನ್ನು ಹೊಸ ಮಾರುಕಟ್ಟೆಯಲ್ಲಿ ಮಾಡುವುದು ಯೋಜನೆಯ ಉದ್ದೇಶ. 2002ಕ್ಕಿಂತ ಮುಂಚೆ ವಾರದ ಸಂತೆ ಕೋರ್ಟ್ ಕಟ್ಟಡದ ಪಕ್ಕದ ಸ್ಥಳದಲ್ಲಿ ನಡೆಯುತ್ತಿತ್ತು. 100 ವರ್ಷಗಳಿಂದ ನಡೆಯುತ್ತಿದ್ದ ಸಂತೆಯ ಸ್ಥಳದಲ್ಲಿ 2002ರ ಬಳಿಕ ಅಂದಿನ ಪುರಭೆೆಗೆ ನೂತನ ಆಡಳಿತ ಕಟ್ಟಡ ಕಟ್ಟಲು ಆರಂಭಿಸಿದ ಕಾರಣ ಸಂತೆಯನ್ನು ತಾತ್ಕಾಲಿಕವಾಗಿ ಮೈದಾನಕ್ಕೆ ಸ್ಥಳಾಂತರಿಸಲಾಯಿತು. ಕಟ್ಟಡ ನಿರ್ಮಾಣಗೊಂಡ ಬಳಿಕ ಪುರಸಭೆಯ ಆಡಳಿತ ಕಚೇರಿ ಅಲ್ಲಿ ನಡೆಯಲಾರಂಭಿಸಿದ್ದು, ಸಂತೆ ಮೈದಾನದಲ್ಲೇ ಉಳಿಯಿತು.
    2016ರ ಆಗಸ್ಟ್ 11ರಂದು ಅಂದಿನ ಎ.ಸಿ. ಅವರ ಆದೇಶದಂತೆ ಸಂತೆಯನ್ನು ಎಪಿಎಂಸಿ ಯಾರ್ಡ್‌ಗೆ ಸ್ಥಳಾಂತರಿಸಲಾಗಿತ್ತು. ಇದರ ವಿರುದ್ಧ ನಡೆದ ನಿರಂತರ ಹೋರಾಟದ ಲವಾಗಿ ಐದೇ ತಿಂಗಳಲ್ಲಿ ಮತ್ತೆ ಸಂತೆ ಕಿಲ್ಲೆ ಮೈದಾನಕ್ಕೆ ಮರಳಿತ್ತು. ಈ ಸಂದರ್ಭ ಸಂತೆಗೊಂದು ಶಾಶ್ವತ ನೆಲೆ ಒದಗಿಸುವ ಉದ್ದೇಶದಿಂದ ನಗರಸಭಾ ಆಡಳಿತ ಸಾಕಷ್ಟು ಜಮೀನು ಶೋಧ ನಡೆಸಿದ ಬಳಿಕ ಕೊನೆಗೂ ಹಳೇ ಪುರಸಭಾ ಕಚೇರಿ ಸ್ಥಳ ಆರಿಸಿ 1 ಕೋಟಿ ರೂ. ಮೀಸಲಿಟ್ಟಿತು. ಕಾಮಗಾರಿ ಆರಂಭಗೊಳ್ಳುವ ಮುನ್ನ 2018ರ ಆಗಸ್ಟ್ 31ರಂದು ನಗರಸಭೆಗೆ ಚುನಾವಣೆ ನಡೆದಿತ್ತು.

    ಸಂತೆ ಜಮೀನು ರೂಪಾಂತರ
    ನಗರೋತ್ಥಾನದ ಹಣದಲ್ಲಿ ಕಿಲ್ಲೆ ಮೈದಾನ ನವೀಕರಣವೂ ಕಳೆದ ಜನವರಿ ವೇಳೆಗೆ ಪೂರ್ಣಗೊಂಡಿದ್ದು, ಭವಿಷ್ಯದಲ್ಲಿ ಇಲ್ಲಿ ಸಂತೆ ನಡೆಸುವುದು ಕಷ್ಟ ಎಂಬ ಭಾವನೆ ಇರುವಾಗಲೇ ಲಾಕ್‌ಡೌನ್ ಅಸ ಸಂತೆಗೆ ಬರೆ ಎಳೆದಿತ್ತು. ಈ ನಡುವೆ ಸಂತೆಗೆಂದು ಯೋಜಿಸಿದ್ದ ಸ್ಥಳದಲ್ಲಿ ಈಗ ನಗರಸಭೆಗೆ ಹೊಸ ಆಡಳಿತ ಕಟ್ಟಡ ನಿರ್ಮಿಸಲು ಶಂಕುಸ್ಥಾಪನೆ ನೆರವೇರಿಸಲಾಗಿದೆ. ಸಂತೆಗೆಂದು ತೆಗೆದಿರಿಸಿದ್ದ 1 ಕೋಟಿಯನ್ನೂ ಈ ಕಟ್ಟಡಕ್ಕೆಂದು ಬಳಸಲಾಗುತ್ತಿದೆ.

    ಪುತ್ತೂರಿನ ಐತಿಹಾಸಿಕ ಸೋಮವಾರದ ಸಂತೆಯನ್ನೇ ಶಾಶ್ವತವಾಗಿ ಇಲ್ಲವಾಗಿಸುವ ಷಡ್ಯಂತ್ರವಿದೆ. ಹಿಂದೆ ಸಂತೆಯನ್ನು ಎಪಿಎಂಸಿಗೆ ಸ್ಥಳಾಂತರಿಸಿದಾಗ ಉಗ್ರ ಹೋರಾಟ ಮಾಡಿದವರು ಈಗ ಚಕಾರ ಎತ್ತುವುದಿಲ್ಲ ಯಾಕೆ ಎಂಬ ಅನುಮಾನ ಮೂಡುತ್ತಿದೆ. ಈ ಬಗ್ಗೆ ಹೋರಾಟ ನಡೆಸಲಾಗುವುದು.
    ಎಚ್.ಮಹಮ್ಮದ್ ಆಲಿ, ನಗರಸಭೆ ವಿಪಕ್ಷ ಮಾಜಿ ನಾಯಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts