More

    ಮನೆಯಲ್ಲೇ ಹೆರಿಗೆ ಮಾಡಿಸಿದ ಪುತ್ತೂರು ಆಸ್ಪತ್ರೆ ಸಿಬ್ಬಂದಿ

    ಪುತ್ತೂರು/ಕಾಸರಗೋಡು: ಕರೊನಾ ಸೋಂಕಿನ ಭಯದಿಂದ ಆಸ್ಪತ್ರೆಗೆ ತೆರಳದೆ ತವರು ಮನೆಯಲ್ಲಿ ಆರೈಕೆಯಲ್ಲಿದ್ದ ಗರ್ಭಿಣಿಗೆ ಮಧ್ಯರಾತ್ರಿ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಪಂದಿಸಿದ ಪುತ್ತೂರು ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಆಂಬುಲೆನ್ಸ್‌ನಲ್ಲಿ ತೆರಳಿ ಹೆರಿಗೆ ಮಾಡಿಸಿದ್ದಾರೆ.
    ಮುಳ್ಳೇರಿಯಾ ನಿವಾಸಿ ವಿನಯ ಅವರ ಪತ್ನಿ ಸಾವಿತ್ರಿ ಮುಕ್ವೆಯ ತನ್ನ ತವರು ಮನೆಯಲ್ಲಿದ್ದು, ಮಾ.25ರಂದು ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರ ಸಹೋದರಿ 108 ಆಂಬುಲೆನ್ಸ್‌ಗೆ ಕರೆ ಮಾಡಿದರೂ ಸ್ವೀಕರಿಸದೆ ಇದ್ದಾಗ ಆಸ್ಪತ್ರೆಗೆ ಕರೆ ಮಾಡಿದ್ದರು. ಸ್ಪಂದಿಸಿದ ಆಸ್ಪತ್ರೆಯ ಆಂಬುಲೆನ್ಸ್ ಚಾಲಕ ದಯಾನಂದ್, ಆರೋಗ್ಯ ವಿಭಾಗದ ಲಕ್ಷ್ಮೀ ಹಾಗೂ ಭವಾನಿ ಸಹಾಯಕರೊಂದಿಗೆ ತೆರಳಿ ಯಶಸ್ವಿ ಹೆರಿಗೆ ಮಾಡಿಸಿದ್ದಾರೆ.

     ಆಂಬುಲೆನ್ಸ್‌ನಲ್ಲೇ ಹೆರಿಗೆ: ಮಂಗಳೂರು ಖಾಸಗಿ ಆಸ್ಪತ್ರೆಗೆ ಗರ್ಭಿಣಿಯನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್‌ಗೆ ತಲಪಾಡಿಯಲ್ಲಿ ಪೊಲೀಸರು ಅನುಮತಿ ನಿರಾಕರಿಸಿದ್ದರಿಂದ ವಾಪಸ್ ಕಾಸರಗೋಡಿಗೆ ತೆರಳುವ ದಾರಿಯಲ್ಲಿ ಮಂಜೇಶ್ವರ ಸಮೀಪ ವಾಹನದಲ್ಲೇ ಹೆರಿಗೆಯಾಗಿದೆ.
    ಕುಂಜತ್ತೂರಿನಲ್ಲಿ ನೆಲೆಸಿರುವ ಬಿಹಾರ ಪಾಟ್ನಾ ಮೂಲದ ಗೌರೀದೇವಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಎಷ್ಟೇ ಮನವಿ ಮಾಡಿದರೂ ತಲಪಾಡಿಯಲ್ಲಿ ಪೊಲೀಸರು ಆಂಬುಲೆನ್ಸ್ ತೆರಳಲು ಅವಕಾಶ ನೀಡಿರಲಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts