More

    ಸಂಸ್ಕೃತಿ ರಕ್ಷಣೆಗೆ ಸಂಶೋಧನೆ ಅಗತ್ಯ, ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಪುತ್ತೂರು ಪ್ರಿಯದರ್ಶಿನಿ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ

    ಪುತ್ತೂರು: ದೇಶದಲ್ಲಿ ನೂರಾರು ಸಂಸ್ಕೃತಿಯನ್ನು ಅನುಸರಿಸುವ ಜನಾಗಂಗಳಿದ್ದು, ಹೊಸ ಸಂಶೋಧನೆಯ ಮೂಲಕ ಸಂಸ್ಕೃತಿಯ ರಕ್ಷಣೆ ನಡೆಸಬೇಕಾಗಿದೆ ಎಂದು ಪುತ್ತೂರು ಪ್ರಿಯದರ್ಶಿನಿ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ ಹೇಳಿದರು.
    ಬಲ್ನಾಡು ಒಕ್ಕಲಿಗ ಗೌಡ ಸ್ವ-ಸಹಾಯ ಟ್ರಸ್ಟ್, ಪುತ್ತೂರು ಮಾದರಿ ಗ್ರಾಮ ಸಮಿತಿ ಬಲ್ನಾಡು, ಒಕ್ಕಲಿಗ ಗೌಡ ಸಂಘ ಬಲ್ನಾಡು ಗ್ರಾಮ ಸಮಿತಿ, ಯುವ ಒಕ್ಕಲಿಗ ಗೌಡ ಸೇವಾ ಸಂಘ, ಮಹಿಳಾ ಘಟಕ ಬಲ್ನಾಡು ಗ್ರಾಮ ಸಮಿತಿ ಮತ್ತು ಒಕ್ಕಲಿಗ ಗೌಡ ಸ್ವ-ಸಹಾಯ ಗುಂಪುಗಳ ಒಕ್ಕೂಟ ಬಲ್ನಾಡು ಇದರ ಸಹಯೋಗದಲ್ಲಿ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
    ನಮ್ಮ ಸಂಸ್ಕೃತಿ ನಮ್ಮ ಸಮುದಾಯ ನಮಗೆ ಹೆಮ್ಮ ನಾನು ಗೌಡ ಸಮುದಾಯದಲ್ಲಿ ಹುಟ್ಟಿದಕ್ಕೆ ಧನ್ಯಳಾಗಿದ್ದೇನೆ. ನಮ್ಮ ಸಮುದಾಯವು ಬಹಳ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಸಮುದಾಯವಾಗಿದೆ ಎಂಬುದಕ್ಕೆ ನನಗೆ ಬಹಳ ಸಂತೋಷವಾಗಿದೆ ಎಂದರು.
    ಧಾರ್ಮಿಕ ಮುಂದಾಳು ವೆಂಕಟ್ರಮಣ ಗೌಡ ಕಳುವಾಜೆ ಮಾತನಾಡಿ, ಬಲ್ನಾಡು ಗ್ರಾಮದಲ್ಲಿರುವ ಕಟ್ಟೆಮನೆಯನ್ನು ನಾವೆಲ್ಲರೂ ಸೇರಿ ಅಭಿವೃದ್ಧಿಪಡಿಸುವ ಕೆಲಸ ಆಗಬೇಕು ಇದಕ್ಕೆ ಎಲ್ಲರ ಸಹಾಯವು ಅತ್ಯಗತ್ಯ ಕಟ್ಟೆಮನೆಗೆ ಬಹಳ ಪುರಾಣದ ಇತಿಹಾಸವಿದೆ. ಒಕ್ಕಲಿಗ ಸ್ವ-ಸಹಾಯ ಸಂಘಗಳ ಮೂಲಕ ಬಲ್ನಾಡು ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡಿ ಇಲ್ಲಿ ಪ್ರತಿ ಶನಿವಾರ ಗೌಡ ಸಮುದಾಯದ ಮನೆಯಲ್ಲಿ ಭಜನೆ ಸೇವೆ ನಡೆಯುತ್ತಿದೆ ಎಂದರು.
    ಬಲ್ನಾಡು ಶ್ರೀಭಟ್ಟಿವಿನಾಯಕ ದೇವಸ್ಥಾನದ ಆಡಳಿತ ಮೊಕ್ತೇಸರ ಮಾಧವ ಗೌಡ ಕಾಂತಿಲ ಅಧ್ಯಕ್ಷತೆ ವಹಿಸಿದ್ದರು.
    ಒಕ್ಕಲಿಗ ಸ್ವಸಹಾಯ ಟ್ರಸ್ಟ್‌ನ ಕಾರ್ಯದರ್ಶಿ ದಿವ್ಯ ಪ್ರಸಾದ್, ಮಾದರಿ ಗ್ರಾಮ ಸಮಿತಿಯ ಅಧ್ಯಕ್ಷನಾರಾಯಣ ಗೌಡ ಕುಕ್ಕುತಡ್ಡಿ, ಬಲ್ನಾಡು ಸ್ವಸಹಾಯ ಸಂಘದ ಒಕ್ಕೂಟದ ಅಧ್ಯಕ್ಷೆ ಗೀತಾ ಒಳಗುಡ್ಡೆ, ಮಹಿಳಾ ಘಟಕದ ಅಧ್ಯಕ್ಷೆ ಚಂದ್ರಾವತಿ ಮುದಲಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಒಕ್ಕಲಿಗ ಗೌಡ ಸ್ವ-ಸಹಾಯ ಗುಂಪುಗಳ ಒಕ್ಕೂಟ ಬಲ್ನಾಡು ಇದರ ಸಹಯೋಗದಲ್ಲಿ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಚೆನ್ನೆಮನೆ ಆಟ, ಪುರುಷರಿಗೆ ಮತ್ತು ಮಹಿಳೆಯರಿಗೆ ಸಂಗೀತ ಕುರ್ಚಿ ಲಕ್ಕಿ ಗೇಮ್, ಅಂಗನವಾಡಿ ಮಕ್ಕಳಿಗೆ ಕಪ್ಪೆ ಜಿಗಿತ, ಕಾಳು ಹೆಕ್ಕುವ ಸ್ಪರ್ಧೆ, 1 ರಿಂದ 5ನೇ ತರಗತಿ ಮಕ್ಕಳಿಗೆ ಬಾಲ್ ಪಾಸ್, ಬಾಟ್ಲಿಗೆ ನೀರು ತುಂಬಿಸುವುದು 6ರಿಂದ 10ನೇ ತರಗತಿ ಮಕ್ಕಳಿಗೆ ಲಕ್ಕಿ ಗೇಮ್, ಸಂಗೀತ ಕುರ್ಚಿ ಹಾಗೂ ಮಹಿಳೆಯರಿಗೆ ಶೋಭನೆ ಹೇಳುವುದು, ತಿಂಡಿ-ತಿನಸು ಸ್ಪರ್ಧೆ ನೆರವೇರಿತು.
    ಪ್ರೇಮ ತಿಮ್ಮಪ್ಪಗೌಡ ವಂದಿಸಿದರು. ಮೇಲ್ವಿಚಾರಕಿ ಸುಮಲತಾ ಕಾರ್ಯಕ್ರಮ ನಿರೂಪಿಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts