More

    ಪುತಿನ್ ಆದೇಶ ಜನರ ಆತಂಕ

    ಮಾಸ್ಕೊ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಸೇನೆ ಸಜ್ಜುಗೊಳಿಸುವಿಗೆ ಆದೇಶಿಸಿದ ಬೆನ್ನಲ್ಲೇ ಅಲ್ಲಿನ ಜನರು ಆತಂಕಗೊಂಡಿದ್ದಾರೆ. ರಷ್ಯಾವನ್ನು ತೊರೆಯುವುದು ಹೇಗೆ? ಮನೆಯಲ್ಲಿ ಸ್ವಯಂ ಗಾಯ ಮಾಡಿಕೊಳ್ಳುವುದು ಹೇಗೆ? ಎಂಬ ಬಗ್ಗೆ ಗೂಗಲ್​ನಲ್ಲಿ ಹೆಚ್ಚು ಹುಡುಕಾಟ ನಡೆಸಿದ್ದಾರೆ.

    ಪುತಿನ್ ಆದೇಶವು ರಷ್ಯಾ ಜನರಲ್ಲಿ ಅಸಮಾಧಾನದ ಭಾವನೆಯನ್ನು ಹುಟ್ಟುಹಾಕಿದ್ದು, ಅದು ಗೂಗಲ್ ಹುಡುಕಾಟದಲ್ಲಿ ಸ್ಪಷ್ಟವಾಗಿ ಪ್ರತಿಫಲಿಸಿದೆ. ರಷ್ಯಾದಲ್ಲಿ 35 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪುರುಷರನ್ನು ಮೀಸಲು ಸೈನಿಕರಾಗಿ ನೇಮಿಸಿಕೊಳ್ಳಲು ಆದೇಶಿಸಲಾಗಿದೆ. ಹಾಗಾಗಿ ಅವರಿಗೆ ಆರೋಗ್ಯ ತಪಾಸಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಇದರಿಂದ ಆತಂಕಗೊಂಡಿರುವ ಅವರ ಸಂಬಂಧಿಕರು ಹಾಗೂ ಜನರು ದೇಶವನ್ನು ತೊರೆಯುವ ಬಗ್ಗೆ ಹಾಗೂ ಯುದ್ಧದಿಂದ ತಪ್ಪಿಸಿಕೊಳ್ಳಲು ಸ್ವಯಂ ಗಾಯ ಮಾಡಿಕೊಳ್ಳುವ ಬಗ್ಗೆ ಗೂಗಲ್​ನಲ್ಲಿ ಹುಡುಕಾಟ ನಡೆಸಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

    ರಷ್ಯಾದಲ್ಲೇ ವಿರೋಧ: ಸೇನೆ ಸಜ್ಜುಗೊಳಿಸುವಿಕೆ ಆದೇಶಕ್ಕೆ ರಷ್ಯಾದ ಯುದ್ಧ ವಿರೋಧಿ ಸಂಘಟನೆ ‘ವೆಸ್ನಾ’ ವಿರೋಧ ವ್ಯಕ್ತಪಡಿಸಿದೆ. ಸೇನೆ ಸಜ್ಜುಗೊಳಿಸುವಿಕೆ ವಿರೋಧಿಸಿ ಪುತಿನ್ ಅವರ ತವರು ನಗರವಾದ ಮಾಸ್ಕೊ ಮತ್ತು ಸೇಂಟ್ ಪೀಟರ್ಸ್ ಬರ್ಗ್​ನಲ್ಲಿ ತೀವ್ರ ಪ್ರತಿಭಟನೆ ನಡೆದಿದ್ದು, ಹಲವರನ್ನು ಬಂಧಿಸಲಾಗಿದೆ. ಅನಧಿಕೃತ ಪ್ರತಿಭಟನೆಗಳಲ್ಲಿ ಭಾಗವಹಿಸಿದ ವರಿಗೆ 15 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಮಾಸ್ಕೊ ಪ್ರಾಸಿಕ್ಯೂಟರ್ ಕಚೇರಿ ತಿಳಿಸಿದೆ.

    ವಿಮಾನ ಟಿಕೆಟ್ ಮಾರಾಟ ಸ್ಥಗಿತ: 18ರಿಂದ 65 ವರ್ಷ ವಯಸ್ಸಿನ ಪುರುಷರಿಗೆ ಏರ್ ಟಿಕೆಟ್ ಮಾರಾಟ ಮಾಡದಂತೆ ರಷ್ಯಾದ ವಿಮಾನಯಾನ ಸಂಸ್ಥೆಗಳಿಗೆ ಆದೇಶಿಸಲಾಗಿದೆ. ಯೂಕ್ರೇನ್ ವಿರುದ್ಧ ಹೋರಾಡಲು ಮೀಸಲು ಸೈನಿಕರನ್ನು ಸಜ್ಜುಗೊಳಿಸಲಾಗುತ್ತದೆ ಎಂದು ಪುತಿನ್ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪುರುಷರಿಗೆ ಟಿಕೆಟ್ ಮಾರಾಟ ಮಾಡದಂತೆ ಏರ್​ಲೈನ್ಸ್​ಗಳಿಗೆ ಸೂಚಿಸಲಾಗಿದೆ. ಏರ್​ಲೈನ್ಸ್​ಗಳು ಕೂಡ ಸೇನಾ ವಿಚಾರಣೆ ಎದುರಿಸಬೇಕಾಗುತ್ತದೆ ಎಂಬ ಭಯದಲ್ಲಿ ಟಿಕೆಟ್ ಮಾರಾಟ ಮಾಡುವುದನ್ನು ನಿಲ್ಲಿಸಿವೆ.

    ಮೋಹನ್​ ಭಾಗವತ್​ ‘ರಾಷ್ಟ್ರಪಿತ, ರಾಷ್ಟ್ರ ಋಷಿ’ ಇದ್ದಂತೆ: ಇಮಾಮ್​ ಮುಖ್ಯಸ್ಥ ಅಹ್ಮದ್ ಇಲ್ಯಾಸಿ ಬಣ್ಣನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts