More

    ನರೇಂದ್ರ ಮೋದಿ ಓರ್ವ ರಾಷ್ಟ್ರಭಕ್ತ, ಭಾರತಕ್ಕಿದೆ ಉತ್ತಮ ಭವಿಷ್ಯ: ರಷ್ಯಾ ಅಧ್ಯಕ್ಷ

    ಮಾಸ್ಕೊ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುಣಗಾನ ಮಾಡಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್​​ ಪುಟಿನ್​, ‘ಮೋದಿ ಒಬ್ಬ ರಾಷ್ಟ್ರಭಕ್ತ. ಭಾರತ ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಸಾಧಿಸಲಿದೆ. ಈ ದೇಶಕ್ಕೆ ಉತ್ತಮ ಭವಿಷ್ಯವಿದೆ’ ಎಂದಿದ್ದಾರೆ.

    ಮಾಸ್ಕೋದಲ್ಲಿ ನಡೆದ ವ್ಲಾದಾಯ್​ ಸಂವಾದ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಅವರ ಸ್ವತಂತ್ರ ವಿದೇಶಾಂಗ ನೀತಿಯನ್ನು ಹೊಗಳಿದ ಪುಟಿನ್​ ‘ಮೇಕ್​ ಇನ್​ ಇಂಡಿಯಾ ಕಾರ್ಯಕ್ರಮ ಆರ್ಥಿಕವಾಗಿ ಹಾಗೂ ನೈತಿಕವಾಗಿ ಒಂದು ಉತ್ತಮ ನಡೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

    ‘ಬ್ರಿಟಿಷರ ಕಾಲನಿಯಾಗಿದ್ದ ಭಾರತ, ಸ್ವತಂತ್ರ ದೇಶವಾಗಿ ಇಷ್ಟು ಅಭಿವೃದ್ಧಿಯನ್ನು ಸಾಧಿಸಿದ್ದು ಎಲ್ಲರೂ ಗೌರವಿಸಬೇಕು. ಭಾರತ 1.5 ಬಿಲಿಯನ್​ ಜನರನ್ನು ಹೊಂದಿದ್ದು ಸಮಗ್ರ ಅಭಿವದ್ಧಿ ಹೊಂದಿರುವುದು ದೊಡ್ಡ ಸಾಧನೆ’ ಎಂದು ಪುಟಿನ್ ಹೇಳಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts