More

    ರೈತರ ಮೊಗದಲ್ಲಿ ಮಂದಹಾಸ ತಂದ ಪುಷ್ಯ ಮಳೆ

    ಗದಗ: ಕಳೆದೆರೆಡು ದಿನಗಳಿಂದ ಜಿಲ್ಲೆಯಲ್ಲಿ ಜಿಟಿ ಜಿಟಿ ಮಳೆ ಸುರಿಯುತ್ತಿದ್ದು, ರೈತರ ಮೊಗದಲ್ಲಿ ಸಿಹಿ-ಕಹಿ ಭಾವನೆ ವ್ಯಕ್ತವಾಗುತ್ತಿದೆ.


    ಮಳೆ ಅಭಾವದಿಂದ ಹೆಸರು ಬೆಳೆ ಇಳುವರಿ ಸಂಪೂರ್ಣ ನೆಲಕಚ್ಚಿದ ಪರಿಣಾಮ ರೈತರಿಗೆ ನಷ್ಟವಾಗಿದ್ದು, ಇನ್ನೊಂದೆಡೆ, ಮುಂಗಾರಿನಲ್ಲಿ ಈಗಾಗಲೇ ಬಿತ್ತನೆ ಮಾಡಿದ ಹತ್ತಿ, ಶೇಂಗಾ, ಮೆಕ್ಕೆಜೋಳ, ತೊಗರಿ ಸೇರಿ ಇತರ ಬೆಳೆಗಳಿಗೆ ಮಳೆ ಅನಿವಾರ್ಯವಾಗಿದೆ.


    ಕೆಲ ದಿನಗಳಿಂದ ಅಧಿಕ ಉಷ್ಣಾಂಶದಿಂದ ಕಂಗಾಲಾಗಿದ್ದ ಜನರು, ರೈತ ವರ್ಗಕ್ಕೆ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆ ಸ್ವಲ್ಪ ಸಮಾಧಾನ ತಂದಿದೆ.

    ಜೂನ್ ತಿಂಗಳ ಅಂತ್ಯದವರೆಗೂ ಶೇ. 43ರಷ್ಟು ಮಳೆ ಕೊರತೆಯಾಗಿತ್ತು. ಜುಲೈ ತಿಂಗಳ ಆರಂಭದಲ್ಲೂ ಮಳೆ ಅಭಾವ ತೀವ್ರವಾಗಿ ಕಾಡಿತ್ತು. ಈ ಹಿನ್ನೆಲೆ ಜಿಲ್ಲೆಯಲ್ಲಿ ಹೆಸರು ಬೆಳೆ ಸಂಪೂರ್ಣ ನಾಶವಾಗಿತ್ತು. ಕಳೆದೆರೆಡು ದಿನಗಳಿಂದ ಮಳೆ ಚೇತರಿಕೆ ಕಂಡಿದೆ. ಜುಲೈ ತಿಂಗಳ ಈವರೆಗೆ ಶೇ. 23.08 ರಷ್ಟು ಮಳೆ ಆಗಿದೆ.


    ಬುಧವಾರ ಬೆಳಗ್ಗೆ ಗದಗ ವ್ಯಾಪ್ತಿಯಲ್ಲಿ ಎರಡೂ ಗಂಟೆಗೂ ಅಧಿಕ ಕಾಲ ಮಳೆ ಸುರಿದಿದೆ. ಮಳೆ ದಿಢೀರ್ ಹೆಚ್ಚಾದ ಕಾರಣ ಚರಂಡಿಗಳು ತುಂಬಿ ನೀರು ರಸ್ತೆಗೆ ನುಗ್ಗುತ್ತಿದೆ. ಬೈಕ್ ಸವಾರರು ಹಾಗೂ ಪಾದಚಾರಿಗಳಿಗೆ ಕಿರಿಕಿರಿ ಉಂಟಾಗುತ್ತಿದೆ. ಇನ್ನೊಂದೆಡೆ ಗ್ರಾಮೀಣ ಪ್ರದೇಶದಲ್ಲಿ ಮಳೆಯಿಂದಾಗಿ ಕೃಷಿ ಚಟುವಟಿಕೆಗಳು ವೇಗ ಪಡೆದುಕೊಂಡಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts