More

    18 ಸಾವಿರ ಕ್ವಿಂಟಾಲ್ ರಾಗಿ ಖರೀದಿ

    ಬೆಟ್ಟದಪುರ: ಬೆಟ್ಟದಪುರದಲ್ಲಿ ಆರಂಭಗೊಂಡ ರಾಗಿ ಖರೀದಿ ಕೇಂದ್ರದಲ್ಲಿ ಇದುವರೆಗೆ ಸುಮಾರು 18,120 ಕ್ವಿಂಟಾಲ್ ರಾಗಿ ಖರೀದಿ ಮಾಡಲಾಗಿದ್ದು, ಖರೀದಿ ಪ್ರಕ್ರಿಯೆ ಮುಂದುವರಿದಿದೆ.


    ಪಿರಿಯಾಪಟ್ಟಣ ತಾಲೂಕಿನ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಬೆಟ್ಟದಪುರದ ಎಪಿಎಂಸಿ ಆವರಣದಲ್ಲಿ ಮಾ.18ರಿಂದ ರಾಗಿ ಖರೀದಿ ಪ್ರಕ್ರಿಯೆ ಆರಂಭಗೊಂಡಿತ್ತು. ಈ ಖರೀದಿ ಕೇಂದ್ರದಲ್ಲಿ ಸುಮಾರು 7357 ರೈತರು ನೋಂದಣಿ ಮಾಡಿಸಿಕೊಂಡು, ಒಟ್ಟು 1,75,022 ಕ್ವಿಂಟಾಲ್ ರಾಗಿ ಖರೀದಿಗೆ ಅವಕಾಶ ಸಿಕ್ಕಿತ್ತು. ಕಳೆದ ಹತ್ತು ದಿನಗಳಿಂದ ಆರಂಭಗೊಂಡ ಖರೀದಿ ಪ್ರಕ್ರಿಯೆಯಲ್ಲಿ 844 ರೈತರು ಒಟ್ಟು 18,120 ಕ್ವಿಂಟಾಲ್ ರಾಗಿ ಮಾರಾಟ ಮಾಡಿದ್ದಾರ


    ಬೆಂಬಲ ಬೆಲೆ ಯೋಜನೆಯಡಿ ಸರ್ಕಾರ ರಾಗಿ ಖರೀದಿ ಆರಂಭ ಮಾಡಿರುವುದರಿಂದ ರೈತರಿಗೆ ಆರ್ಥಿಕವಾಗಿ ಸಾಕಷ್ಟು ಸಹಕಾರಿಯಾಗಿದೆ. ರೈತರು ಗುಣಮಟ್ಟದ ರಾಗಿ ಪೂರೈಕೆ ಮಾಡುವ ಮೂಲಕ ಸಹಕಾರ ನೀಡಬೇಕು. ಈಗಾಗಲೇ ನೋಂದಣಿ ಮಾಡಿಕೊಂಡಿರುವ ರೈತರು ರಾಗಿ ಖರೀದಿಗೆ ನೀಡಿರುವ ಟೋಕನ್ ದಿನಾಂಕದಂದು ಬಂದು ರಾಗಿ ಮಾರಾಟ ಮಾಡಬೇಕು. ಯಾವುದೇ ಕಾರಣಕ್ಕೂ ಗೊಂದಲ ಹಾಗೂ ಘರ್ಷಣೆ ಮಾಡಿಕೊಳ್ಳದೆ ಸಹಕಾರ ನೀಡಬೇಕು. ಯಾವುದೇ ಸಮಸ್ಯೆ ಇದ್ದಲ್ಲಿ ಹಾಗೂ ಟೋಕನ್ ಪಡೆಯುವ ವಿಚಾರದಲ್ಲಿ ಮಾಹಿತಿಗಾಗಿ ಮೊ: 9353443424 ಸಂಪರ್ಕಿಸಬಹುದು ಎಂದು ಕೇಂದ್ರದ ಖರೀದಿ ಅಧಿಕಾರಿ ಅಕ್ಷಯ್ ವಿಜಯವಾಣಿಗೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts