More

    ಅಕ್ಷಯ ಕುಮಾರನಿಗಾಗಿ ಟೆರೇಸ್​ ಮೇಲೆ ಕಾದು ಕುಳಿತು ಸುಸ್ತಾದ ಮದುಮಗಳು!

    ಜೈಪುರ: ಲಾಕ್​ಡೌನ್​ ಸಮಯವಾದ್ದರಿಂದ ಅದೆಷ್ಟೋ ಮದುವೆಗಳು ಮುಂದೂಡಲ್ಪಟ್ಟಿವೆ. ಆದರೂ ಅಲ್ಲಲ್ಲಿ ಲಾಕ್​ಡೌನ್​ ನಿಯಮ ಮೀರಿ ಮದುವೆ ನಡೆಯುತ್ತಿದ್ದರೂ, ಕೆಲವರು ನಿಯಮದ ಪ್ರಕಾರವೇ ಕೆಲವೇ ಜನ ಸೇರಿಕೊಂಡು ಮದುವೆಯಾಗುತ್ತಿದ್ದಾರೆ.

    ಇಲ್ಲಿ ಹೇಳಹೊರಟಿರುವುದು ಲಾಕ್​ಡೌನ್​ ನಿಯಮಾನುಸಾರವೇ ಮದುವೆಯಾಗಬಯಸಿದ ವಧು-ವರರ ಪೇಚಾಟದ ಘಟನೆ. ಇದು ನಡೆದಿರುವುದು ಪಂಜಾಬ್​ನಲ್ಲಿ. ಪಂಜಾಬ್​ನ ಯುವಕ ಅಕ್ಷಯ ಕುಮಾರನ ಮದುವೆ ರಾಜಸ್ಥಾನದ ಜೈಪುರದ ಹುಡುಗಿಯ ಜತೆ ನಿಶ್ಚಯವಾಗಿತ್ತು. ಏಪ್ರಿಲ್​ 7ರಂದು ಮದುವೆ ಮುಹೂರ್ತವೂ ಫಿಕ್ಸ್​ ಆಗಿತ್ತು. ಆದರೇನು ಮಾಡುವುದು? ಲಾಕ್​ಡೌನ್​ ಜಾರಿಯಾಗಿ ಹೋಯಿತು.

    ಇದನ್ನೂ ಓದಿ: ಪಿಯುಸಿವರೆಗಿನ ಪಾಠ ಇನ್ಮುಂದೆ ಮನೆಯಲ್ಲಿಯೇ ಉಚಿತವಾಗಿ ಕಲಿಯಬಹುದು!

    ಮದುವೆಯನ್ನು ಮುಂದಕ್ಕೆ ಹಾಕುವ ಮಾತುಕತೆಗೆ ಎರಡೂ ಕುಟುಂಗಳು ಮುಂದಾದವು. ಆದರೆ ಮದುವೆ ತೀರಾ ವಿಳಂಬ ಮಾಡುವುದು ಬೇಡ ಎಂದುಕೊಂಡು, ನಿಗದಿತ ಮುಹೂರ್ತದಲ್ಲಿಯೇ ಲಾಕ್​ಡೌನ್​ ನಿಯಮಾನುಸಾರವೇ ಮದುವೆ ಮಾಡುವ ನಿರ್ಧಾರಕ್ಕೆ ಬಂದರು. ಮದುವೆಯು ಮದುಮಗಳ ಮನೆಯ ಟೆರೇಸ್​ ಮೇಲೆ ನಿಗದಿಯಾಗಿತ್ತು.

    ಸರಿ. ಅದರಂತೆ ಪಂಜಾಬ್​ ಸರ್ಕಾರದ ಅನುಮತಿ ಪಡೆದುಕೊಂಡು ವಧು ಮತ್ತು ಆತನ ತಾಯಿ ಇಬ್ಬರೂ ಮದುವೆಯ ದಿನ ಸಿದ್ಧತೆ ನಡೆಸಿಕೊಂಡು ಹೊರಟರು. ಅವರು ಮದುವೆ ಮಂಟಪಕ್ಕೆ ಬರಬೇಕೆಂದರೆ ರಾಜಸ್ಥಾನದ ಗಡಿಯಾಗಿರುವ ಸಾಧುವಾಲಿ ಪ್ರದೇಶವನ್ನು ದಾಟಿ ಬರಬೇಕಿತ್ತು. ಗಡಿ ದಾಟುವ ಅನುಮತಿಯನ್ನೂ ಸರ್ಕಾರ ನೀಡಿತ್ತು.

    ಇದನ್ನೂ ಓದಿ: ಪರ ರಾಜ್ಯಗಳಿಂದ ಹೊತ್ತು ತಂದರು ವೈರಸ್​: ಗ್ರೀನ್​ ಝೋನ್​ ಶಿವಮೊಗ್ಗದಲ್ಲಿ ಕರೊನಾ ಶಿಕಾರಿ!

    ಅಕ್ಷಯ ಕುಮಾರ ತನ್ನ ವಧುವಿನ ಕನಸು ಕಾಣುತ್ತಲಿದ್ದ. ಇನ್ನೇನು ಗಡಿಯ ಹತ್ತಿರ ಹೋಗಬೇಕು ಎನ್ನುವಷ್ಟರದಲ್ಲಿಯೇ ರಾಜಸ್ಥಾನ ಸರ್ಕಾರ ಲಾಕ್​ಡೌನ್​ ಹಿನ್ನೆಲೆಯಲ್ಲಿ ಅಂತಾರಾಜ್ಯ ಗಡಿಯನ್ನು ಮುಚ್ಚಿಬಿಟ್ಟಿತು. ಆದ್ದರಿಂದ ವರ ಮತ್ತು ಆತನ ತಾಯಿಯನ್ನು ಅಲ್ಲಿಯೇ ತಡೆಹಿಡಿಯಲಾಯಿತು. ಪಂಜಾಬ್​ ಸರ್ಕಾರದ ಅನುಮತಿಯ ಪತ್ರ ತೋರಿಸಿದರೂ ಅದು ಬೇರೆ ರಾಜ್ಯ ಆಗಿರುವ ಕಾರಣ, ಏನೂ ಮಾಡಲು ಸಾಧ್ಯವಿಲ್ಲ ಎಂದರು.

    ಅಲ್ಲಿರುವ ಎಲ್ಲಾ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಅವರು ಸುತರಾಂ ಒಪ್ಪಲಿಲ್ಲ. ಅದಾಗಲೇ ಅಲ್ಲಿ ನಾಲ್ಕೈದು ಗಂಟೆ ಕಳೆದುಹೋಯಿತು. ಕೊನೆಗೆ ವರನ ದುಃಖ ನೋಡಲಾಗದೇ ಅಧಿಕಾರಿಗಳು ಗಡಿ ದಾಟಲು ಅನುಮತಿ ನೀಡಿದರು. ಆದರೆ ನಿಯಮಾನುಸಾರ ಆರೋಗ್ಯ ತಪಾಸಣೆ ಕಡ್ಡಾಯವಾಗಿತ್ತು. ಆರೋಗ್ಯ ಇಲಾಖೆ ಸಿಬ್ಬಂದಿ ಬಂದು ತಪಾಸಣೆ ಮಾಡುವಷ್ಟರಲ್ಲಿ ಇನ್ನೊಂದು ಗಂಟೆ ಕಳೆಯಿತು.

    ಇದನ್ನೂ ಓದಿ: ಅಮ್ಮನ ದಿನಕ್ಕೊಂದು ವಿಶೇಷ- ಕ್ಲಿಕ್​ ಮಾಡಿ, ಸುಂದರ ಗಿಫ್ಟ್​ ನೀಡಿ

    ಎಲ್ಲವೂ ಓಕೆ, ಹೋಗಬಹುದು ಎನ್ನುತ್ತಿದ್ದಂತೆಯೇ ತಹಶೀಲ್ದಾರರಿಂದ ಕರೆ ಬಂದು ಗಡಿ ದಾಟುವ ಅನುಮತಿ ರದ್ದುಪಡಿಸಲಾಗಿದೆ ಎಂದು ಹೇಳಲಾಯಿತು! ನಂತರ ಸ್ಥಳಕ್ಕೆ ಪತ್ರಕರ್ತರು ಬಂದರು. ಅವರಿಗೆ ಈ ವರ ತನ್ನ ನೋವು ತೋಡಿಕೊಂಡ. ಪತ್ರಕರ್ತರು ಆತನನ್ನು ಜಿಲ್ಲಾಧಿಕಾರಿಗಳ ಬಳಿಗೆ ಕರೆದೊಯ್ದು ವಿವರಣೆ ನೀಡಿದ ನಂತರ ಅಂತೂ ಗಡಿ ದಾಟುವ ಅನುಮತಿ ಸಿಕ್ಕಿತು. ಅದಾಗಲೇ ಬರೋಬ್ಬರಿ ಎಂಟು ಗಂಟೆ ವಿಳಂಬವಾಯಿತು!

    ಅಷ್ಟೊತ್ತಿಗಾಗಲೇ ವರ ಅಕ್ಷಯಕುಮಾರ್​ಗೆ ಕಾದೂ ಕಾದೂ ಮದುಮಗಳು ಹಾಗೂ ಆತನ ಮನೆಯವರು ಸೋತು ಹೋಗಿದ್ದರು, ಕೊನೆಗೂ ವರ ಮಹಾಶಯನ ಆಗಮನವಾಗಿ ಇರುವ ಮುಹೂರ್ತಕ್ಕಿಂತ ಎಂಟು ಗಂಟೆ ವಿಳಂಬವಾಗಿ ಮದುವೆ ಕಾರ್ಯ ನೆರವೇರಿತು. ಮದುಮಗಳ ಮನೆಯ ಟೆರೇಸ್​ ಮೇಲೆ ಮದುವೆಯನ್ನು ಸರಳವಾಗಿ ನಡೆಸಲಾಯಿತು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts