More

    ಮತ್ತೊಂದು ಕಟೌಟ್​​ ಜಾತ್ರೆಗೆ ಅಭಿಮಾನಿಗಳು ಸಜ್ಜು: 75 ಕಟೌಟ್​ಗಳಲ್ಲಿ ಪುನೀತ್ ದರ್ಶನ..

    ಬೆಂಗಳೂರು: ಸಾಹಸಸಿಂಹ ವಿಷ್ಣುವರ್ಧನ್ ಜನ್ಮದಿನ ಸಂದರ್ಭದಲ್ಲಿ ಸೆ. 18ರಂದು ಅಭಿಮಾನ್ ಸ್ಟುಡಿಯೊದಲ್ಲಿ ಅಭಿಮಾನಿಗಳು ವಿಷ್ಣುವರ್ಧನ್ ಅಭಿನಯದ ಸಿನಿಮಾಗಳ ಕಟೌಟ್​ಗಳನ್ನು ನಿಲ್ಲಿಸಿ ಅಭಿಮಾನ ಮೆರೆದಿದ್ದರು. ಇದೀಗ ಅಂಥದ್ದೇ ಒಂದು ಕಟೌಟ್​ ಜಾತ್ರೆಗೆ, ಅಭಿಮಾನದ ಅಭಿವ್ಯಕ್ತಿಗೆ ಪವರ್​ಸ್ಟಾರ್ ಪುನೀತ್ ರಾಜಕುಮಾರ್ ಅಭಿಮಾನಿಗಳು ಮುಂದಾಗಿದ್ದಾರೆ.

    ಕರ್ನಾಟಕದ ಪ್ರವಾಸಿ ಹಾಗೂ ಪ್ರೇಕ್ಷಣೀಯ ಸ್ಥಳಗಳ ಅನಾವರಣಗೊಳಿಸುವಂಥ ಸಾಕ್ಷ್ಯಚಿತ್ರ, ಪುನೀತ್ ರಾಜಕುಮಾರ್ ಅವರ ಮಹತ್ವಾಕಾಂಕ್ಷೆಯ ‘ಗಂಧದಗುಡಿ’ ಅ. 28ರಂದು ಬಿಡುಗಡೆ ಆಗಲಿರುವುದರಿಂದ ಹಾಗೂ ನ. 1ರಂದು ಕರ್ನಾಟಕ ಸರ್ಕಾರ ಅಪ್ಪುಗೆ ಘೋಷಿಸಿದ್ದ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಿರುವುದರಿಂದ ಅಭಿಮಾನಿಗಳು ಈ ಕಟೌಟ್ ಜಾತ್ರೆ ಹಮ್ಮಿಕೊಂಡಿದ್ದಾರೆ.

    ಈ ಹಿನ್ನೆಲೆಯಲ್ಲಿ ಅ. 26ರ ಬುಧವಾರ ಡಾ.ಪುನೀತ್ ರಾಜಕುಮಾರ್‌ ಅವರ 75 ಕಟೌಟ್​​ಗಳನ್ನು ವಿಶ್ವದಾಖಲೆಯ ಮಟ್ಟದಲ್ಲಿ ನಿಲ್ಲಿಸಲು ಅಭಿಮಾನಿಗಳು ಸಜ್ಜಾಗಿದ್ದಾರೆ. ಅ. 27ರ ಗುರುವಾರ ಮಧ್ಯಾಹ್ನ 1.00ಕ್ಕೆ 75 ಕಟೌಟ್​​ಗಳಿಗೆ ಭಾರಿ ಹೂವಿನ ಹಾರ ಹಾಕಲು ಹಾಗೂ ಸಂಜೆ 7.00ಕ್ಕೆ ಸ್ಮಾರಕದ ಸುತ್ತಲು 1 ಕಿ.ಮೀ. ದಸರಾ ರೀತಿಯಲ್ಲಿ ಲೈಟಿಂಗ್ಸ್ ಅಳವಡಿಸಲು ಅಭಿಮಾನಿಗಳು ಯೋಜನೆ ಹಾಕಿಕೊಂಡಿದ್ದಾರೆ.

    ಇದನ್ನೂ ಓದಿ: ವಿಷ್ಣುವರ್ಧನ್​ ಜನ್ಮದಿನಂದು ‘ಯಜಮಾನೋತ್ಸವ’; ನಡೆಯಲಿದೆ ದಾಖಲೆಯ ಕಟೌಟ್​​ ಜಾತ್ರೆ..

    ಅ.28ರ ಶುಕ್ರವಾರ ‘ಗಂಧದಗುಡಿ’ ಚಿತ್ರದ ಬಿಡುಗಡೆ ಪ್ರಯುಕ್ತ ಕೆ.ಜಿ.ರಸ್ತೆಯ ಮುಖ್ಯ ಚಿತ್ರಮಂದಿರ ಹಾಗೂ ಮಾಗಡಿರಸ್ತೆಯ ಚಿತ್ರಮಂದಿರದಲ್ಲಿ ಸಂಭ್ರಮಾಚರಣೆಯನ್ನೂ ಅಭಿಮಾನಿಗಳು ನಡೆಸಲಿದ್ದಾರೆ.

    ಅ. 29ರನ ಶನಿವಾರ ಪುನೀತ್ ರಾಜಕುಮಾರ್‌ ಅವರ ಒಂದನೇ ವರ್ಷದ ಪುಣ್ಯಸ್ಮರಣೆ ಪ್ರಯುಕ್ತ ಸ್ಮಾರಕಕ್ಕೆ ಭೇಟಿ ನೀಡುವ ಲಕ್ಷಾಂತರ ಅಭಿಮಾನಿಗಳಿಗೆ ಬೆಳಗ್ಗೆ 8 ರಿಂದ ಸಂಜೆ 6 ರವರೆಗೂ ನಿರಂತರ ಅನ್ನದಾಸೋಹ ಕೂಡ ನಡೆಸಲಿದ್ದಾರೆ.

    ಮತ್ತೊಂದು ಕಟೌಟ್​​ ಜಾತ್ರೆಗೆ ಅಭಿಮಾನಿಗಳು ಸಜ್ಜು: 75 ಕಟೌಟ್​ಗಳಲ್ಲಿ ಪುನೀತ್ ದರ್ಶನ..

    ಪುನೀತ್​ ಅಭಿಮಾನಿಗಳಿಗೆ ಮತ್ತೊಂದು ಸಂತಸದ ಸಂಗತಿ: ‘ಗಂಧದಗುಡಿ’ ಜೊತೆಗೇ ‘ಅಪ್ಪು ಕಪ್’ ಸಂಭ್ರಮ

    ‘ಕಾಂತಾರ’ ಮತ್ತೊಂದು ದಾಖಲೆ; ಉತ್ತರಭಾರತದಲ್ಲಿ ಈ ಸಾಧನೆ ಮಾಡಿದ ಮೊದಲ ಕನ್ನಡ ಚಿತ್ರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts