More

    ಗೂಗಲ್​​ನಲ್ಲಿ ‘ಪುನೀತ್’ ಅವರದ್ದೇ ಗಮ್ಮತ್ತು! ಗೂಗಲ್ ನಕ್ಷೆಯಲ್ಲೂ ‘ಅಪ್ಪು’ ಅವರದ್ದೇ ಗುರುತು!

    ಬೆಂಗಳೂರು: ಅಪ್ಪುಇದು ಕೇವಲ ಹೆಸರಲ್ಲಬದಲಿಗೆ ಬಹಳಷ್ಟು ಭಾವನೆಗಳ ಸಂಕೇತವಾಗಿದೆ. ಕಾರಣ, ಹೆಸರಿಲ್ಲದೆ ಭೂಮಿಗೆ ಬಂದ ಉಸಿರನ್ನು, ಉಸಿರು ಬಿಡುವಾಗ ಅಸಂಖ್ಯಾತ ಅಭಿಮಾನಿಗಳು ನೆನಪಿನಲ್ಲಿಟ್ಟು ಕೊಳ್ಳುವಷ್ಟು ಹೆಸರು ಮಾಡಿ ಹೋಗಿದ್ದಾರೆ ಅಪ್ಪು. ಜೊತೆಗೆ, ಅವರಂತೆ ಒಳ್ಳೆಯ ಹೆಸರು ಮಾಡಿ ಉಸಿರು ಬಿಡಬೇಕು ಎಂದು ಪರಿತಪಿಸುವ ಪ್ರತಿಯೊಬ್ಬರಿಗೂ ಕರುನಾಡ ಪವರ್ ಸ್ಟಾರ್ ನಟ ಪುನೀತ್ ರಾಜ್​​ಕುಮಾರ್ ಎಂಬ ಹೆಸರೇ ಸಾಕು ಸ್ಪೂರ್ತಿ ತುಂಬಲು. ಅಂತಹ ಹೆಸರಿನ ಬೆಲೆ ಎಷ್ಟು ಗೊತ್ತಾ? ಹೌದು, ಗೂಗಲ್​​ನಲ್ಲಿ ಪುನೀತ್ಅವರದ್ದೇ ಗಮ್ಮತ್ತು! ಗೂಗಲ್ ನಕ್ಷೆಯಲ್ಲೂ ಅಪ್ಪುಅವರದ್ದೇ ಗುರುತು!…
    ಅಪ್ಪು ತಮ್ಮ ಅಭಿಮಾನಿಗಳನ್ನು, ಸ್ನೇಹಿತರನ್ನು, ಕುಟುಂಬವನ್ನು ದೈಹಿಕವಾಗಿ ಅಗಲಿದ್ದಾರೆ. ಆದರೆ, ಅವರು ಎಲ್ಲರ ಮನದಲ್ಲಿ ಚಿರಸ್ಥಾಯಿ. ಏಕೆಂದರೆ, ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೇ ನಿಜ ಜೀವನದಲ್ಲೂ ಅಪ್ಪು ಒಬ್ಬ ಆದರ್ಶ ವ್ಯಕ್ತಿ. ಅವರ ಸಮಾಜ ಸೇವೆಯ ಬಗ್ಗೆ ಎಷ್ಟು ಹೇಳಿದರೂ ಕಡಿಮೆ. ಅದರಲ್ಲೂ ಅವರ ವ್ಯಕ್ತಿತ್ವವನ್ನು ಎಷ್ಟು ವರ್ಣಿಸಿದರು ಕಡಿಮೆ. ಅಪ್ಪು ಮಾಡಿದ ಸಮಾಜ ಸೇವೆಯ ಬಗ್ಗೆ ಅವರ ನಿಧನದ ನಂತರವೇ ತಿಳಿದುಬಂತು. ಒಂದು ಕೈಯಿಂದ ಕೊಟ್ಟಿದ್ದು ಮತ್ತೊಂದು ಕೈಗೆ ತಿಳಿಯ ಬಾರದು ಎಂಬ ಆದರ್ಶವನ್ನು ಇವರು ಹೊಂದಿದ್ದರು
    ಗೂಗಲ್​​ನಲ್ಲಿ 'ಪುನೀತ್' ಅವರದ್ದೇ ಗಮ್ಮತ್ತು! ಗೂಗಲ್ ನಕ್ಷೆಯಲ್ಲೂ 'ಅಪ್ಪು' ಅವರದ್ದೇ ಗುರುತು!
    ಪುನೀತ್ ಬದುಕಿದ್ದಾಗ ಅವರ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ದಾಖಲೆಗಳನ್ನು ಬರೆಯುತ್ತಿದ್ದವು . ಆದರೆ, ಅವರ ನಿಧನದ ಬಳಿಕ ಸಹ ಅಪ್ಪು ದಾಖಲೆಗಳನ್ನು ಬರೆಯುವುದು ಮುಂದುವರಿಸಿದ್ದಾರೆ. ಗೂಗಲ್ ಸರ್ಚ್ ಲಿಸ್ಟ್ ನಲ್ಲಿ 2021ರಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಅಪ್ಪು ಕಾಲವಾದ ದಿನ ಅಂದರೆ ಅಕ್ಟೋಬರ್ 29ರಂದು ಅವರ ಹೆಸರು ಒಂದು ಪ್ರಮುಖ ದಾಖಲೆಯನ್ನು ಬರೆದಿತ್ತು. ಕೇವಲ 8 ಗಂಟೆಗಳಲ್ಲಿ 10 ಮಿಲಿಯನ್​ಗೂ ಹೆಚ್ಚು ಜನ ಅವರ ಹೆಸರನ್ನು ಗೂಗಲ್​ನಲ್ಲಿ ಹುಡುಕಿದ್ದಾರೆ. ಜೊತೆಗೆ, ಅಷ್ಟೇ ಸರ್ಚ್ ಅಪ್ಪು ಬಗ್ಗೆ ಇಂದಿಗೂ ನಡೆಯುತ್ತಿದೆ ಎನ್ನಲಾಗಿದೆ. ಕೇವಲ ಕರ್ನಾಟಕದಲ್ಲಿ, ಭಾರತದಲ್ಲಿ ಮಾತ್ರ ಅಲ್ಲ, ಬದಲಿಗೆ ಬೇರೆ ಬೇರೆ ದೇಶಗಳಲ್ಲೂ ನೆಟ್ಟಿಗರು ಅಪ್ಪು ಅವರ ಬಗ್ಗೆ ಹುಡುಕುತ್ತಿದ್ದಾರೆ ಎನ್ನಲಾಗಿದೆ. ಇದಿಷ್ಷು ಸಾಲದು ಎಂಬಂತೆ ಗೂಗಲ್ ನಕ್ಷೆಯಲ್ಲೂ ಅಪ್ಪು ಅವರ ಹೆಸರಿನದ್ದೇ ಗುರುತು

    ಗೂಗಲ್​​ನಲ್ಲಿ 'ಪುನೀತ್' ಅವರದ್ದೇ ಗಮ್ಮತ್ತು! ಗೂಗಲ್ ನಕ್ಷೆಯಲ್ಲೂ 'ಅಪ್ಪು' ಅವರದ್ದೇ ಗುರುತು!

    ಪುನೀತ್ ನಿಧನದ ನಂತರ ಅವರ ಕಟ್ಟಾ ಅಭಿಮಾನಿಗಳು ತಮ್ಮ ಬೀದಿಗಳಿಗೆ, ಹಲವು ವೃತ್ತಗಳಿಗೆ, ಬೇರೆ ಬೇರೆ ಪ್ರದೇಶಗಳಿಗೂ ಇದ್ದ ಹೆಸರನ್ನು ಬದಲಾಯಿಸಿ ಅಪ್ಪು ಹೆಸರನ್ನು ನಾಮಕರಣ ಮಾಡಿದ್ದಾರೆ. ಅದೆಷ್ಟೂ ಸಿನಿಮಾಗಳು ಮಾಡಿದ ನಂತರ ಮತ್ತು ಬಹಳಷ್ಟು ಖ್ಯಾತಿ ಪಡೆದ ನಂತರವೂ ಹಲವು ಆದರ್ಶ ವ್ಯಕ್ತಿಗಳ ಹೆಸರು, ಒಂದೋ ಅಥವಾ ಎರಡೋ ಸ್ಥಳಗಳ ಹೆಸರುಗಳಾಗುತ್ತವೆ. ಆದರೆ, ಅಪ್ಪು ಹೆಸರನ್ನು ಗೂಗಲ್ ನಕ್ಷೆಯಲ್ಲಿ ಹೊಡೆದರೆ 500ಕ್ಕೂ ಹೆಚ್ಚು ಲೊಕೇಶನ್​ಗಳು ಕಾಣಿಸುತ್ತವೆ ಎನ್ನಲಾಗಿದೆ. ಇದೆಲ್ಲವನ್ನು ನೋಡಿದರೆ, ”ಅಪ್ಪು ಹೆಸರೊಂದೇ ಸಾಕು ದಾಖಲೆಗಳು ಬರೆಯಲುಎಂದು ಅನಿಸುತ್ತಿದೆ. ಕೆಲವರಿಗಂತು, ಒಬ್ಬ ಮನುಷ್ಯ ಬದುಕಿದರೆ ಹೀಗೆ ಬದುಕಬೇಕು ಭೂಮಿಯ ಮೇಲೆ ಎಂದನಿಸಿದೆ.

    2ನೇ ಕನ್ನಡ ಚಿತ್ರಕ್ಕೆ ಸಹಿ ಹಾಕಿದ ‘ಅಧೀರ’; ಯಾವ ನಟನ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ ಸಂಜಯ್ ದತ್?

    ಕನ್ನಡ ಚಿತ್ರಗಳಿಗೆ ಡಬ್ಬಿಂಗ್ ಚಿತ್ರಗಳು ಅಪಾಯಕಾರಿ: ರೋರಿಂಗ್ ಸ್ಟಾರ್ ಶ್ರೀ ಮುರಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts