More

    ಸಾಧಕರಿಗೆ ಪುನೀತ್ ರಾಜ್‌ಕುಮಾರ್ ಪ್ರಶಸ್ತಿ ಪ್ರದಾನ

    ಬೆಂಗಳೂರು: ಬಿಬಿಎಂಪಿ ನೌಕರರ ಕನ್ನಡ ಸಂಘದ ವತಿಯಿಂದ ಶನಿವಾರ ಆಯೋಜಿಸಿದ್ದ 68ನೇ ಕರ್ನಾಟಕ ರಾಜ್ಯೋತ್ಸವ ಹಾಗೂ ಡಾ. ಪುನೀತ್ ರಾಜ್‌ಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಪುರಸ್ಕರಿಸಲಾಯಿತು.

    ಪಾಲಿಕೆಯ ಕೇಂದ್ರ ಕಚೇರಿ ಅವರಣದಲ್ಲಿ ನಡೆದ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಪ್ರಶಸ್ತಿ ವಿತರಿಸಿ ಸನ್ಮಾನಿಸಲಾಯಿತು. ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹಾಗೂ ನಟ ರಮೇಶ್ ಅರವಿಂದ್ ಅವರು ಪುರಸ್ಕೃತರನ್ನು ಗೌರವಿಸಿದರು.

    ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನ:

    ಕರ್ನಾಟಕ ವಿಕಾಸ ವೇದಿಕೆ ಅಧ್ಯಕ್ಷ ಪಾಲನೇತ್ರ, ಕನ್ನಡ ಚಳವಳಿ ಕೇಂದ್ರ ಸಮಿತಿ ಅಧ್ಯಕ್ಷ ಗುರುದತ್ತ, ಚಲನಚಿತ್ರರಂಗದ ಸುಂದರ್ ರಾಜ್, ಶಿವಕುಮಾರ್, ರಿಷಿಗೌಡ, ಪ್ರೇಮಗೌಡ, ಕು.ರಕ್ಷಾ ಅಪೂರ್ವ, ಪ್ರತಿಭಾ ಮತ್ತು ಪತ್ರಿಕಾರಂಗದಲ್ಲಿ ರಕ್ಷಾ, ಮಾಲತೇಶ್, ವಸಂತ್ ಕುಮಾರ್, ಸ್ಮಿತಾ ರಂಗನಾಥ್, ಶೀತಲ್ ಶೆಟ್ಟಿ, ಮಂಜುನಾಥ್, ಅಲ್ಲಾವುದ್ದಿನ್, ಪುರುಷೋತ್ತಮ್, ಕೊಂಡಯ್ಯ, ಪುಟ್ಟರಾಜು, ಪಿಆರ್‌ಒ ಸುಚಿತ್ರಾ ಮತ್ತು ಡೊಳ್ಳು ಕುಣಿತ ಕಲಾವಿದ ಡೊಳ್ಳು ಚಂದ್ರು, ಯೋಗ ಕ್ರೀಡಾ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ಅವರಿಗೆ ಪ್ರಶಸ್ತಿ ವಿತರಿಸಲಾಯಿತು.

    ಜತೆಗೆ ಬಿಬಿಎಂಪಿ ಕಾರ್ಯನಿರ್ವಹಿಸುತ್ತಿರುವ 20 ಅಧಿಕಾರಿ, ನೌಕರರಿಗೆ ಡಾ. ಪುನೀತ್ ರಾಜ್‌ಕುಮಾರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    ಲಾಂಛನ ಬಿಡುಗಡೆ:

    ಇದೇ ವೇಳೆ ನೇಪಾಳದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಲಾಂಛನವನ್ನು ಬಿಡುಗಡೆ ಮಾಡಲಾಯಿತು. ಖ್ಯಾತ ಹಿನ್ನಲೆ ಗಾಯಕಿ ಅನುರಾಧ ಭಟ್ ಅವರಿಂದ ಸಂಗೀತ ಸಂಜೆ ಮತ್ತು ಎಂ.ಎಸ್.ಮೂಸಿಕಲ್ಸ್ ಇವೆಂಟ್ಸ್ ಮತ್ತು ಶಿವಂ ನೃತ್ಯ ಶಾಲೆ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

    ಸಮಾರಂಭದಲ್ಲಿ ಚಿತ್ರ ಕಲಾವಿದರಾದ ರಮೇಶ್ ಅರವಿಂದ್, ಭವ್ಯ, ಮಾಜಿ ಮಹಾಪೌರ ಜೆ.ಹುಚ್ಚಪ್ಪ, ವಿಶೇಷ ಆಯುಕ್ತರುಗಳು, ಪ್ರಧಾನ ಅಭಿಯಂತರರು, ಜಂಟಿ ಆಯುಕ್ತರು, ಪಾಲಿಕೆ ಕನ್ನಡ ಸಂಘದ ಅಧ್ಯಕ್ಷರಾದ ಸಾಯಿಶಂಕರ್, ಪ್ರಧಾನ ಕಾರ್ಯದರ್ಶಿ ಎ.ಅಮೃತ್ ರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts