More

    ಒಂದೇ ಒಂದು ಲೈಕ್…20 ಲಕ್ಷ ರೂ.ಸೈಬರ್‌ ವಂಚಕರ ಪಾಲು, ಇದು ಮೋಸಕ್ಕೊಳಗಾದ ಇಂಜಿನಿಯರ್ ಕಥೆ-ವ್ಯಥೆ

    ಮುಂಬೈ: ಸೈಬರ್ ಕ್ರೈಮ್‌ನ ಅನೇಕ ಪ್ರಕರಣಗಳನ್ನು ನೀವು ಕೇಳಿರಬೇಕು. ಈಗ ಸಾಮಾಜಿಕ ಜಾಲತಾಣಗಳ ಮೂಲಕವೂ ವಂಚನೆಗಳು ನಡೆಯಲಾರಂಭಿಸಿವೆ. ಇದೀಗ ಪುಣೆಯ ಇಂಜಿನಿಯರ್ ಒಬ್ಬರು ಸೈಬರ್ ವಂಚನೆಗೆ ಬಲಿಯಾದ ಪ್ರಕರಣ ಬೆಳಕಿಗೆ ಬಂದಿದೆ. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್​​​ಗೆ ಲೈಕ್​​ ಕೊಟ್ಟ ಮರುಕ್ಷಣವೇ ಮೋಸದಾಟ ಶುರುವಾಗಿದೆ. ಇಂಜಿನಿಯರ್ ತಮ್ಮ ಖಾತೆಯಿಂದ ಸುಮಾರು 20.32 ಲಕ್ಷ ರೂ. ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಈ ಕುರಿತು ಸ್ಥಳೀಯ ವಾಕಾಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಏನಿದು ವಿಷಯ?
    ವರದಿಗಳ ಪ್ರಕಾರ, ಉದ್ಯೋಗದ ಅನಿಶ್ಚಿತತೆ ಮತ್ತು ಹಿನ್ನಡೆಯ ಒತ್ತಡದ ನಡುವೆ, ಪುಣೆಯ ಇಂಜಿನಿಯರ್ ಮಾರ್ಚ್ 2023 ರಲ್ಲಿ ಸೈಬರ್ ವಂಚನೆಗೆ ಬಲಿಯಾದರು. 2023 ರಲ್ಲಿ, ಪುಣೆಯ ಎಂಜಿನಿಯರ್ ಅವಿನಾಶ್ ಕೃಷ್ಣನ್‌ಕುಟ್ಟಿ ಕುನ್ನುಬರಮ್ (40) ಅವರು ಅಪರಿಚಿತ ಸಂಖ್ಯೆಯಿಂದ ಸಂದೇಶವನ್ನು ಸ್ವೀಕರಿಸಿದರು, ಅದರಲ್ಲಿ ಅವಿನಾಶ್‌ಗೆ ಆಕರ್ಷಕ ಆಫರ್​​​ ನೀಡಲಾಯಿತು. ಆನ್‌ಲೈನ್ ಕಾರ್ಯಗಳನ್ನು ಪೂರ್ಣಗೊಳಿಸುವ ಮೂಲಕ ಅವರು ಸುಲಭವಾಗಿ ಹಣವನ್ನು ಗಳಿಸಬಹುದು ಎಂದು ಅವರಿಗೆ ತಿಳಿಸಲಾಯಿತು. ಹಣ ಸಂಪಾದಿಸುವುದು ಸುಲಭವಾದಾಗ ಯಾವುದೇ ವ್ಯಕ್ತಿ ಆ ಕೆಲಸವನ್ನು ಮಾಡಲು ಮುಂದೆ ಬರುತ್ತಾನೆ ಅಲ್ಲವೇ, ಅವಿನಾಶ್ ವಿಷಯದಲ್ಲೂ ಇದೇ ರೀತಿಯ ಘಟನೆ ನಡೆದಿದೆ. ವಿಶೇಷವಾಗಿ ಇಂತಹ ಅನಿಶ್ಚಿತ ಕಾಲದಲ್ಲಿ ಹೆಚ್ಚು ಹಣವನ್ನು ಗಳಿಸುವ ಭರವಸೆಯು ಅವರಿಗೆ ಪ್ರಸ್ತಾಪವನ್ನು ಒಪ್ಪಿಕೊಳ್ಳುವಂತೆ ಮಾಡಿತು. ಪ್ರಸ್ತಾಪವನ್ನು ಸ್ವೀಕರಿಸಿದ ನಂತರ, ವಂಚಕರು ಈ ಕೆಲಸವನ್ನು ಹೇಗೆ ಮಾಡಬೇಕೆಂದು ಹೇಳಿದರು.

    ಬಲೆಯಲ್ಲಿ ಸಿಕ್ಕಿಬಿದ್ದ ಅವಿನಾಶ್
    ಮೊದಲಿಗೆ ಸೋಷಿಯಲ್ ಮೀಡಿಯಾದಲ್ಲಿ ಹಾಕಿರುವ ಪೋಸ್ಟ್ ಗೆ ‘ಲೈಕ್’ ಮಾಡಿದ್ದಕ್ಕೆ ಅವಿನಾಶ್ ಗೆ ಹಣ ನೀಡುವುದಾಗಿ ಭರವಸೆ ನೀಡಲಾಯಿತು. ಪ್ರತಿ ಲೈಕ್‌ಗೆ ಅವಿನಾಶ್ ಉತ್ತಮ ಮೊತ್ತವನ್ನು ಪಡೆದರು. ಆರಂಭದಲ್ಲಿ ಅವಿನಾಶ್‌ಗೆ ಇದರಿಂದ ಯಾವುದೇ ಹಾನಿಯಾಗಬಹುದೆಂದು ಅನುಮಾನಿಸಲಿಲ್ಲ. ಇದರಿಂದಾಗಿ ಅವರ ಆತ್ಮವಿಶ್ವಾಸ ಹೆಚ್ಚುತ್ತಲೇ ಇತ್ತು. ಇದಾದ ನಂತರ ದುಷ್ಕರ್ಮಿಗಳು ಅವಿನಾಶ್‌ಗೆ ಟಾಸ್ಕ್ ಗ್ರೂಪ್‌ಗೆ ಸೇರಲು ಆಫರ್ ನೀಡಿದ್ದು, ಅದರಲ್ಲಿ ದೊಡ್ಡ ಮೊತ್ತ ಗಳಿಸುವ ಆಮಿಷವಿತ್ತು. ಆದರೆ ಇದಕ್ಕೆ ಪ್ರತಿಯಾಗಿ ಅವಿನಾಶ್ ಕೂಡ ಹೂಡಿಕೆ ಮಾಡುವಂತೆ ಕೇಳಿಕೊಂಡಿದ್ದರು. ಅವಿನಾಶ್ ಈ ಪ್ರಸ್ತಾಪವನ್ನು ಒಪ್ಪಿಕೊಂಡರು ಮತ್ತು ಡಿಸೆಂಬರ್ 2023 ರ ವೇಳೆಗೆ ಅವರು ಗುಂಪಿನ ಮೂಲಕ 20.32 ಲಕ್ಷ ರೂ. ಕಳೆದುಕೊಂಡರು. ಆಗ ತಾನು ಆನ್‌ಲೈನ್‌ನಲ್ಲಿ ಮೋಸ ಹೋಗಿರುವುದು ಅವಿನಾಶ್‌ಗೆ ಅರಿವಾಯಿತು. ಈ ವರ್ಷ ಜನವರಿ 03 ರಂದು ಅವಿನಾಶ್ ವಾಕಾಡ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದರು. ಕಳೆದ ಹಲವು ತಿಂಗಳುಗಳಲ್ಲಿ ಇಂತಹ ಹಲವು ಪ್ರಕರಣಗಳು ಬೆಳಕಿಗೆ ಬಂದಿದ್ದು, ಇಂತಹ ಆನ್‌ಲೈನ್ ವಂಚನೆಯಲ್ಲಿ ಜನರು ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ.

    ಲಕ್ಷದ್ವೀಪಕ್ಕೆ ಮೋದಿ ಭೇಟಿ; ‘ಮಾಲ್ಡೀವ್ಸ್​​​​​​ಗೆ ದೊಡ್ಡ ಹೊಡೆತ…’ ವಿಭಿನ್ನ ಕಾಮೆಂಟ್ ಮಾಡಿದ ಬಳಕೆದಾರರು

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts