More

    ಬೇಳೆ-ಕಾಳು ಬೆಳೆಯುವ ಪ್ರದೇಶ ಹೆಚ್ಚಲಿ

    ರಾಯಚೂರು: ದ್ವಿದಳ ಧಾನ್ಯಗಳ ಉತ್ಪಾದಕತೆ ಹೆಚ್ಚಳ ಮಾಡಲು ತಂತ್ರಜ್ಞಾನ ಬಳಕೆ ಮಾಡಿಕೊಳ್ಳುವುದು ಅಗತ್ಯವಾಗಿದ್ದು, ಬೀಜೋತ್ಪಾದಕ ಬೆಳೆಗಾರರು ತಂತ್ರಜ್ಞಾನ ಬಳಸಲು ಮುಂದಾಗಬೇಕು ಎಂದು ಕೃಷಿ ವಿಜ್ಞಾನಗಳ ವಿವಿ ಸಂಶೋಧನಾ ನಿರ್ದೇಶಕ ಡಾ.ಬಿ.ಕೆ.ದೇಸಾಯಿ ಹೇಳಿದರು.

    ಕೃಷಿ ವಿಜ್ಞಾನಗಳ ವಿವಿಯ ಬೀಜ ಘಟಕದಲ್ಲಿ ಪ್ರಮಾಣಿತ ತೊಗರಿ ಬೀಜೋತ್ಪಾದನೆ ಮಾಡುವ ರೈತರಿಗಾಗಿ ಏರ್ಪಡಿಸಿದ್ದ ತೊಗರಿ ಬೀಜೋತ್ಪಾದನಾ ತಾಂತ್ರಿಕತೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಗುರುವಾರ ಮಾತನಾಡಿದರು. ದ್ವಿದಳ ಧಾನ್ಯಗಳ ಉತ್ಪಾದನೆಯಲ್ಲಿ ದೇಶ ಸ್ವಾವಲಂಬಿಯಾಗಲು ಬೇಳೆ-ಕಾಳುಗಳನ್ನು ಬೆಳೆಯುವ ಪ್ರದೇಶದ ವಿಸ್ತೀರ್ಣ ಹೆಚ್ಚಿಸಬೇಕಾಗಿದೆ ಎಂದರು.

    ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಎಸ್.ಎಂ.ಸಿದ್ದಾರೆಡ್ಡಿ ಮಾತನಾಡಿ, ಜಿಲ್ಲೆಯಲ್ಲಿ ತೊಗರಿ ಉತ್ಪಾದಕತೆ ಕಡಿಮೆಯಿದ್ದು, ಉತ್ಪಾದನೆ ಹೆಚ್ಚಿಸಲು ಹೊಸ ತಾಂತ್ರಿಕತೆಗಳನ್ನು ಬೀಜೋತ್ಪಾದಕರಿಗೆ ನೀಡಲು ಕೃಷಿ ವಿವಿ ಮುಂದೆ ಬರಬೇಕು ಎಂದು ಹೇಳಿದರು. ಬೀಜ ಕೇಂದ್ರದ ವಿಶೇಷಾಧಿಕಾರಿ ಡಾ.ಅರುಣಕುಮಾರ ಹೊಸಮನಿ ಮಾತನಾಡಿ, ಜಿಲ್ಲೆಯಲ್ಲಿ ತೊಗರಿ ಬೆಳೆ ಉತ್ಪಾದನೆ ಹೆಚ್ಚಿಸಲು ಉತ್ತಮ ಬಿತ್ತನೆ ಬೀಜ ಪೂರೈಕೆ ಮಾಡುವುದು ಅವಶ್ಯವಾಗಿದೆ. ಬೀಜೋತ್ಪಾದಕರು ಉತ್ತಮ ಬೀಜೋತ್ಪಾದನೆಗೆ ಒತ್ತು ನೀಡಬೇಕು ಎಂದು ತಿಳಿಸಿದರು.

    ಕಲಬುರಗಿಯ ಡಾ.ಎಚ್.ರಾಚಪ್ಪ ತೊಗರಿಯಲ್ಲಿ ಸಮಗ್ರ ಕೀಟ ನಿರ್ವಹಣೆ, ಡಾ.ಮುನಿಸ್ವಾಮಿ ತೊಗರಿ ಬೆಳೆ ತಳಿಗಳ ಕುರಿತು, ಡಾ.ಮಲ್ಲಿಕಾರ್ಜುನ ಕೆಂಗನಾಳ ಸಮಗ್ರ ರೋಗ ನಿರ್ವಹಣೆ, ಡಾ.ಎ.ಎಸ್.ಪೊಲೀಸ್ ಪಾಟೀಲ್ ಸಮಗ್ರ ಬೇಸಾಯ ಕ್ರಮಗಳ ಕುರಿತು ಉಪನ್ಯಾಸ ನೀಡಿದರು.

    ಸಹ ಸಂಶೋಧನಾ ನಿರ್ದೇಶಕ ಡಾ.ಅಶೋಕ ಹೂಗಾರ, ಎಣ್ಣೆ ಬೀಜ ಬೆಳೆಗಾರರ ಒಕ್ಕೂಟದ ಉಪ ಪ್ರಧಾನ ವ್ಯವಸ್ಥಾಪಕ ಎನ್.ನಿಂಗಪ್ಪ, ರಾಜ್ಯ ಬೀಜ ನಿಗಮದ ಉಪ ವ್ಯವಸ್ಥಾಪಕ ಪ್ರಭು ತುರಾಯಿ, ಕ್ಷೇತ್ರ ವ್ಯವಸ್ಥಾಪಕ ಎಂ.ಎನ್.ಚಂದನ್, ಪ್ರಾಧ್ಯಾಪಕರಾದ ಡಾ.ಉಮೇಶ ಹಿರೇಮಠ, ಡಾ.ಎಸ್.ಆರ್.ದೊಡ್ಡಗೌಡರ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts