More

    ರಣಜಿ ಟ್ರೋಫಿಯಲ್ಲಿ ಚೇತೇಶ್ವರ ಪೂಜಾರ V/s ಅಜಿಂಕ್ಯ ರಹಾನೆ!

    ನವದೆಹಲಿ: ಇತ್ತೀಚೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ರನ್‌ಬರ ಎದುರಿಸಿ ಭಾರತ ತಂಡದಿಂದ ಹೊರಬೀಳುವ ಅಪಾಯವನ್ನೂ ಎದುರಿಸಿರುವ ಅನುಭವಿ ಬ್ಯಾಟರ್‌ಗಳಾದ ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ದೇಶೀಯ ಕ್ರಿಕೆಟ್‌ನಲ್ಲಿ ಆಡಿ ಲಯ ಕಂಡುಕೊಳ್ಳುವ ಹಂಬಲದಲ್ಲಿದ್ದಾರೆ. ಮುಂಬರುವ ರಣಜಿ ಟ್ರೋಫಿಯಲ್ಲಿ ಹಾಲಿ ಚಾಂಪಿಯನ್ ಸೌರಾಷ್ಟ್ರ ಮತ್ತು 41 ಬಾರಿಯ ಚಾಂಪಿಯನ್ ಮುಂಬೈ ತಂಡಗಳು ಒಂದೇ (ಡಿ) ಗುಂಪಿನಲ್ಲಿದ್ದು, ಫೆ. 17ರಿಂದ ಅಹಮದಾಬಾದ್‌ನಲ್ಲಿ ನಡೆಯಲಿರುವ ಲೀಗ್ ಹಂತದ ಮೊದಲ ಪಂದ್ಯದಲ್ಲೇ ಇವರಿಬ್ಬರು ಪರಸ್ಪರ ಎದುರಾಳಿಗಳಾಗಿ ಕಣಕ್ಕಿಳಿಯಲಿದ್ದಾರೆ.

    ವೇಗಿ ಜೈದೇವ್ ಉನಾದ್ಕತ್ ಸಾರಥ್ಯದಡಿಯಲ್ಲಿ ಪೂಜಾರ ಆಡಲಿದ್ದರೆ, ರಹಾನೆ ಯುವ ಬ್ಯಾಟರ್ ಪೃಥ್ವಿ ಷಾ ನೇತೃತ್ವದಲ್ಲಿ ಆಡಲಿದ್ದಾರೆ. ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ಕೂಡ ಮುಂಬೈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

    ಅನುಭವಿ ವೇಗಿ ಎಸ್. ಶ್ರೀಶಾಂತ್ ಕೇರಳ ತಂಡದಲ್ಲಿ ಸ್ಥಾನ ಪಡೆದಿದ್ದರೆ, ಐಪಿಎಲ್‌ನತ್ತ ಗಮನಹರಿಸಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಬರೋಡ ತಂಡದಿಂದ ಹೊರಗುಳಿದಿದ್ದಾರೆ. ಬಂಗಾಳ ತಂಡದಲ್ಲಿ ಕ್ರೀಡಾ ಸಚಿವ ಮನೋಜ್ ತಿವಾರಿ ಆಡಲಿದ್ದಾರೆ.

    ಭಾರತ ತಂಡದ ಆಯ್ಕೆ ಸಭೆಯಲ್ಲಿ ಹಸ್ತಕ್ಷೇಪದ ಆರೋಪ; ಇಲ್ಲಿದೆ ಗಂಗೂಲಿ ಉತ್ತರ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts