More

    ಇನಿಂಗ್ಸ್ ಮುನ್ನಡೆಯತ್ತ ಶೇಷ ಭಾರತ: ಮೂರು ವಿಕೆಟ್ ಕಬಳಿಸಿದ ವಿದ್ವತ್ ಕಾವೇರಪ್ಪ

    ರಾಜ್‌ಕೋಟ್: ಯುವ ವೇಗಿ ಹಾಗೂ ಕನ್ನಡಿಗ ವಿದ್ವತ್ ಕಾವೇರಪ್ಪ (28ಕ್ಕೆ 3) ಬಿಗಿ ಬೌಲಿಂಗ್ ದಾಳಿಯ ನೆರವಿನಿಂದ ಶೇಷ ಭಾರತ ತಂಡ ಇರಾನಿ ಕಪ್ ಪಂದ್ಯದಲ್ಲಿ 2022-23ರ ರಣಜಿ ಚಾಂಪಿಯನ್ ಹಾಗೂ ಆತಿಥೇಯ ಸೌರಾಷ್ಟ್ರ ಎದುರು ಇನಿಂಗ್ಸ್ ಮುನ್ನಡೆಯತ್ತ ದಾಪುಗಾಲಿಟ್ಟಿದೆ.
    ಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ 2ನೇ ದಿನವಾದ ಸೋಮವಾರ 8 ವಿಕೆಟ್‌ಗೆ 298 ರನ್‌ಗಳಿಂದ ಇನಿಂಗ್ಸ್ ಮುಂದುವರಿಸಿದ ಶೇಷ ಭಾರತ ತಂಡ 94.2 ಓವರ್‌ಗಳಲ್ಲಿ 308 ರನ್‌ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ಟೆಸ್ಟ್ ಬ್ಯಾಟರ್ ಚೇತೇಶ್ವರ ಪೂಜಾರ (29) ವೈಲ್ಯ ನಡುವೆ 77 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡ ಸೌರಾಷ್ಟ್ರ, ಅರ್ಪಿತ್ ವಸವಾಡ (54) ಅರ್ಧಶತಕದ ಹೋರಾಟದ ಲವಾಗಿ ದಿನದಂತ್ಯಕ್ಕೆ 80 ಓವರ್‌ಗಳಲ್ಲಿ 9 ವಿಕೆಟ್‌ಗೆ 212 ರನ್‌ಗಳಿಸಿದ್ದು, ಇನ್ನೂ 96 ರನ್ ಹಿನ್ನಡೆಯಲ್ಲಿದೆ. ಸೌರಾಷ್ಟ್ರದ ಆರಂಭಿಕರಾದ ಹಾರ್ವಿಕ್ ದೇಸಾಯಿ (0), ಚಿರಾಗ್ ಜಾನಿ (0)ವಿಕೆಟ್ ಕಬಳಿಸಿದ ವೇಗಿ ವಿದ್ವತ್ ಕಾವೇರಪ್ಪ ಆರಂಭಿಕ ಆಘಾತ ನೀಡಿದರು. ಎರಡನೇ ವಿಕೆಟ್‌ಗೆ ಹಾಗೂ ಸಮರ್ಥ್ ವ್ಯಾಸ್ (29) 47 ರನ್ ಪೇರಿಸಿ ಚೇತರಿಕೆ ಒದಗಿಸಿದರು. ಜೈದೇವ್ ಉನಾದ್ಕತ್ (17) ಜತೆಯಾಗಿ ಯುವರಾಜ್ ಸಿನ್ಹಾ ಖಾತೆ ತೆರೆಯದೇ ಕ್ರೀಸ್‌ನಲ್ಲಿದ್ದಾರೆ.

    ಶೇಷ ಭಾರತ: 94.2 ಓವರ್‌ಗಳಲ್ಲಿ 308 (ಸೌರಭ್ 39, ನವದೀಪ್ 9, ಪಾರ್ಥ್ ಭುತ್ 94ಕ್ಕೆ 5).
    ಸೌರಾಷ್ಟ್ರ: 80 ಓವರ್‌ಗಳಲ್ಲಿ 9 ವಿಕೆಟ್‌ಗೆ 212 (ಸಮರ್ಥ್ 29, ಪೂಜಾರ 29, ಅರ್ಪಿತ್ 59, ಪ್ರೇರಕ್ 29, ವಿದ್ವತ್ 28ಕ್ಕೆ 3, ಸೌರಭ್ 64ಕ್ಕೆ 3).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts