More

    ಚಾಮನಹಳ್ಳಿಯಲ್ಲಿ ಕಾರ್ತಿಕ ಮಾಸದ ಪೂಜಾ ಮಹೋತ್ಸವ

    ಬನ್ನೂರು: ಪಟ್ಟಣದ ಸಮೀಪದ ಚಾಮನಹಳ್ಳಿಯಲ್ಲಿ ಶ್ರೀ ಸಿದ್ದಪ್ಪಾಜಿ ದೇವಸ್ಥಾನದ 16ನೇ ವರ್ಷದ ಮೂರನೇ ಕಾರ್ತಿಕ ಮಾಸದ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

    ಗ್ರಾಮದಲ್ಲಿರುವ ಶ್ರೀ ಸಿದ್ದಪ್ಪಾಜಿ ದೇವಸ್ಥಾನವನ್ನು ತಳಿರು, ತೋರಣ ಹೂಗಳಿಂದ ಅಲಂಕರಿಸಿ, ಪ್ರಾತಃಕಾಲದಲ್ಲಿ ದೇವಾಲಯದಲ್ಲಿ ಹೋಮ-ಹವನವನ್ನು ನೆರವೇರಿಸಲಾಯಿತು. ಪೂರ್ಣಕುಂಭವನ್ನು ಹೊತ್ತ ಮುತ್ತೈದೆಯರು, ಬಸವ, ಕಂಡಾಯ, ಹೂವು, ಹೊಂಬಾಳೆಯೊಂದಿಗೆ ಮೆರವಣಿಯಲ್ಲಿ ಸಾಗಿದರು. ಮೆರವಣಿಗೆ ಹೊರಟ ರಸ್ತೆಯಲ್ಲಿ, ವಿವಿಧ ರಂಗೋಲಿಗಳನ್ನು ಬಿಡಿಸಲಾಗಿತ್ತು.

    ಮೆರವಣಿಗೆಯು ಮಧ್ಯಾಹ್ನ ದೇವಾಲಯ ತಲುಪಿದ ನಂತರ ಮಹಾ ಮಂಗಳಾರತಿ ಮತ್ತು ಬಸವನಿಗೆ ಪೂಜಾ ಕೈಂಕರ್ಯವನ್ನು ಮಾಡಲಾಯಿತು. ನಂತರ ಭಕ್ತರಿಗೆ ಪೂಜೆಗೆ ಅನುವು ಮಾಡಿಕೊಡಲಾಯಿತು. ವಿವಿಧ ಗ್ರಾಮ ಮತ್ತು ಪಟ್ಟಣದಿಂದ ಭಕ್ತರು ನೂರಾರು ಸಂಖ್ಯೆಯಲ್ಲಿ ಆಗಮಿಸಿ, ದೇವರ ದರ್ಶನ ಪಡೆದರು. ನಂತರ ಅನ್ನಸಂತರ್ಪಣೆಗೆ ಚಾಲನೆ ನೀಡಲಾಯಿತು. ಸಿದ್ದಪ್ಪಾಜಿ ದೇವರ ಗುಡ್ಡಪ್ಪ ನಾಗಚಾರಿ ಸೇರಿದಂತೆ ಚಾಮನಹಳ್ಳಿ ಗ್ರಾಮಸ್ಥರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts