More

    ಕಳೆದ ಬಾರಿ 1030 ವಿದ್ಯಾರ್ಥಿಗಳಿಗೆ ಅನ್ಯಾಯ, ಪಿಯು ಮರುಮೌಲ್ಯಮಾಪನ ಹೆಚ್ಚುವರಿ ಅಂಕ ಪರಿಗಣನೆಯಿಂದ ಇನ್ನಿಲ್ಲ ಸಮಸ್ಯೆ

    ಮಂಗಳೂರು: ದ್ವಿತೀಯ ಪಿಯುಸಿ ಮರುಮೌಲ್ಯಮಾಪನದ ಅಂಕ ಪರಿಗಣನೆ ನಿಯಮದಿಂದಾಗಿ 2022ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 410 ಹಾಗೂ ಉಡುಪಿ ಜಿಲ್ಲೆಯ 620 ವಿದ್ಯಾರ್ಥಿಗಳಿಗೆ ಹೆಚ್ಚುವರಿ ಅಂಕ ಲಭಿಸದೆ ಅನ್ಯಾಯವಾಗಿತ್ತು. ಈ ಬಾರಿ ನಿಯಮ ತಿದ್ದುಪಡಿ ಮಾಡಿರುವುದರಿಂದ ಮರುಮೌಲ್ಯಮಾಪನದಲ್ಲಿ 1 ಅಂಕ ಹೆಚ್ಚುವರಿ ಲಭಿಸಿದರೂ ಪರಿಗಣನೆಯಾಗಲಿದೆ.

    ದ.ಕ ಜಿಲ್ಲೆಯಲ್ಲಿ ಕಳೆದ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆ ಉತ್ತರ ಪತ್ರಿಕೆಯ ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕಿದವರ ಪೈಕಿ ವಿಜ್ಞಾನ ವಿಷಯದಲ್ಲಿ 6 ಅಂಕಗಳಿಗಿಂತ ಅಧಿಕ ಅಂಕ 558 ಮಂದಿ, 6ಕ್ಕಿಂತ ಕಡಿಮೆ ಅಂಕ 291 ಮಂದಿ ಪಡೆದಿದ್ದರು. ಕಲಾ ಮತ್ತು ವಾಣಿಜ್ಯದಲ್ಲಿ 6ಕ್ಕಿಂತ ಅಧಿಕ ಅಂಕ 1,079 ಮಂದಿ ಹಾಗೂ 6ಕ್ಕಿಂತ ಕಡಿಮೆ 119 ಮಂದಿ ಪಡೆದಿದ್ದರು. ಉಡುಪಿ ಜಿಲ್ಲೆಯಲ್ಲಿ ವಿಜ್ಞಾನ ವಿಷಯದಲ್ಲಿ 6 ಅಂಕಗಳಿಗಿಂತ ಅಧಿಕ ಅಂಕ 856 ಮಂದಿ, 6ಕ್ಕಿಂತ ಕಡಿಮೆ ಅಂಕ 371 ಮಂದಿ ಪಡೆದಿದ್ದರು. ಕಲಾ ಮತ್ತು ವಾಣಿಜ್ಯದಲ್ಲಿ 6ಕ್ಕಿಂತ ಅಧಿಕ ಅಂಕ 2170 ಮಂದಿ ಹಾಗೂ 6ಕ್ಕಿಂತ ಕಡಿಮೆ 249 ಮಂದಿ ಪಡೆದಿದ್ದರು.

    6 ಅಂಕಗಳಿಗಿಂತ ಅಧಿಕ ಅಂಕ ದೊರೆತರೆ ಮಾತ್ರ ಪರಿಗಣನೆ ಎಂಬ ನಿಯಮದಿಂದಾಗಿ ಅದಕ್ಕಿಂತ ಕಡಿಮೆ ಅಂಕ ಪಡೆದವರಿಗೆ ಅನ್ಯಾಯವಾಗಿತ್ತು. ದ.ಕ. ಜಿಲ್ಲೆಯ ಒಟ್ಟು 410 ವಿದ್ಯಾರ್ಥಿಗಳಿಗೆ ಉಡುಪಿಯಲ್ಲಿ 620 ಮರುಮೌಲ್ಯಮಾಪನದಲ್ಲಿ ಅಧಿಕ ಅಂಕ ಪಡೆದರೂ ಪರಿಗಣಿಸಿರಲಿಲ್ಲ.

    * ಕೊನೆಗೂ ಎಚ್ಚೆತ್ತ ಇಲಾಖೆ:

    ಪದವಿಪೂರ್ವ ಶಿಕ್ಷಣ ಇಲಾಖೆಯ ನಿಯಮಾನುಸಾರ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಯ ಉತ್ತರಪತ್ರಿಕೆಗಳ ಮರು ಮೌಲ್ಯಮಾಪನದಲ್ಲಿ 6 ಅಂಕಗಳಿಗಿಂತ ಅಧಿಕ ಅಂಕ ದಾಖಲಾದರೆ ಮಾತ್ರ ಪರಿಗಣನೆಗೆ ತೆಗೆದುಕೊಳ್ಳುವ ನಿಯಮ ಜಾರಿಯಲ್ಲಿತ್ತು. ಒಂದು ವೇಳೆ ಮರು ಮೌಲ್ಯಮಾಪನದಲ್ಲಿ 6ಕ್ಕಿಂತ ಕಡಿಮೆ ಅಂಕ ಪಡೆದಿದ್ದಲ್ಲಿ ಮರು ಮೌಲ್ಯಮಾಪನದ ಅಂಕ ಪರಿಗಣನೆಗೆ ತೆಗೆದುಕೊಳ್ಳುವಂತಿರಲಿಲ್ಲ.

    ವಿದ್ಯಾರ್ಥಿಯ ಶೈಕ್ಷಣಿಕ ಹಾಗೂ ಉನ್ನತ ವಿದ್ಯಾಭ್ಯಾಸದ ಹಿತದೃಷ್ಟಿಯಿಂದ ಒಂದು ಅಂಕವೂ ಮುಖ್ಯವಾಗುತ್ತದೆ. ಸಿಇಟಿಯಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಅಂಕಗಳನ್ನೂ ಪರಿಗಣಿಸುವುದರಿಂದ 1 ಅಂಕದ ವ್ಯತ್ಯಾಸವೂ ವಿದ್ಯಾರ್ಥಿಯ ರ‌್ಯಾಂಕ್ ಪಟ್ಟಿಯಲ್ಲಿ ಹೆಚ್ಚಿನ ಅಂತರವನ್ನು ತರುತ್ತದೆ. ಹೀಗಾಗಿ 1 ಅಂಕವನ್ನೂ ಪರಿಗಣಿಸುವುದು ಬಹುಮುಖ್ಯ. ಈ ಬಗ್ಗೆ ದ.ಕ. ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ ಸಹಿತ ರಾಜ್ಯದ ಎಲ್ಲ ಸಂಘಗಳು ನಿರ್ಣಯ ದಾಖಲಿಸಿ ಸರ್ಕಾರಕ್ಕೆ ಪತ್ರ ಬರೆದು 1 ಅಂಕದ ವ್ಯತ್ಯಾಸವನ್ನೂ ಪರಿಗಣಿಸುವಂತೆ ಈ ಹಿಂದೆ ಒತ್ತಾಯಿಸಿದ್ದರು.

     

     

    ಮರುಮೌಲ್ಯಮಾಪನದ ಅಂಕ ಪರಿಗಣನೆ ನಿಯಮ ತಿದ್ದುಪಡಿಗೆ ರಾಜ್ಯಾದ್ಯಂತ ಆಗ್ರಹ ವ್ಯಕ್ತವಾಗಿತ್ತು. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ನಿಯಮಕ್ಕೆ ತಿದ್ದುಪಡಿ ತಂದು ಪಿಯು ಮರು ಮೌಲ್ಯಮಾಪನದಲ್ಲಿ 1 ಹಾಗೂ ಅದಕ್ಕಿಂತ ಮೇಲ್ಟಟ್ಟ ಅಂಕ ಪರಿಗಣನೆ ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ.

    ಬಿ.ಸಿ ನಾಗೇಶ್, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಮತ್ತು ಸಕಾಲ ಸಚಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts