More

    ಸಾರ್ವಜನಿಕ ಸಾರಿಗೆ ಶೀಘ್ರ ಆರಂಭ, ನಿತಿನ್​ ಗಡ್ಕರಿ ಭರವಸೆ

    ನವದೆಹಲಿ: ಮಾರ್ಚ್ 24 ರಂದು ಮೊದಲ ಬಾರಿಗೆ ಲಾಕ್​ಡೌನ್ ಘೋಷಣೆಯಾದ ನಂತರ ಸ್ಥಗಿತಗೊಂಡಿರುವ ಸಾರ್ವಜನಿಕ ಸಾರಿಗೆ ಕೆಲವು ಮಾರ್ಗಸೂಚಿಗಳೊಂದಿಗೆ ಶೀಘ್ರದಲ್ಲೇ ಕಾರ್ಯಾರಂಭಗೊಳ್ಳುವ ಸಾಧ್ಯತೆ ಇದೆ ಎಂದು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಬುಧವಾರ ಭರವಸೆ ನೀಡಿದ್ದಾರೆ.
    ಭಾರತದ ಬಸ್ ಮತ್ತು ಕಾರ್ ಆಪರೇಟರ್ಸ್ ಕಾನ್ಫೆಡರೇಷನ್ ಸದಸ್ಯರನ್ನು ಉದ್ದೇಶಿಸಿ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಅವರು ಮಾತನಾಡಿದರು.

    ಇದನ್ನೂ ಓದಿ: ಗರ್ಭಸ್ಥ ಕರಡಿ ಕೊಲೆಯಾದ ಫೋಟೊ ವೈರಲ್ ಆಗುತ್ತಿದ್ದಂತೆ ಒಬ್ಬ ಅರೆಸ್ಟ್
    ಬಸ್​​ಗಳು ಮತ್ತು ಕಾರುಗಳನ್ನು ನಿರ್ವಹಿಸುವಾಗ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಮತ್ತು ಕೈ ತೊಳೆಯುವುದು, ಸ್ಯಾನಿಟೈಸಿಂಗ್, ಫೇಸ್ ಮಾಸ್ಕ್ ಧರಿಸುವುದು ಇತ್ಯಾದಿ ಎಲ್ಲ ಅಗತ್ಯ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಲು ಸೂಚನೆ ನೀಡಿದರು.
    ಕೊರೊನಾವೈರಸ್ ಹಾಗೂ ಆರ್ಥಿಕ ಕುಸಿತದಂತಹ ಎರಡೂ ಯುದ್ಧಗಳನ್ನು ಗೆಲ್ಲುವಲ್ಲಿ ದೇಶ ಮತ್ತು ಅದರ ಸಂಸ್ಥೆಗಳು ಒಟ್ಟಾಗಿ ಕಾರ್ಯನಿರ್ವಹಿಸುತ್ತವೆ ಎಂದು ಗಡ್ಕರಿ ವಿಶ್ವಾಸ ವ್ಯಕ್ತಪಡಿಸಿದರು.
    ಬಡ್ಡಿ ಪಾವತಿ ವಿನಾಯಿತಿ ವಿಸ್ತರಣೆ, ಸಾರ್ವಜನಿಕ ಸಾರಿಗೆ ಮರು ಆರಂಭಿಸುವುದು, ಎಂಎಸ್​ಎಂಇ ಪ್ರಯೋಜನಗಳನ್ನು ವಿಸ್ತರಿಸುವುದು, ವಿಮಾ ಪಾಲಿಸಿ ಸಿಂಧುತ್ವವನ್ನು ವಿಸ್ತರಿಸುವುದು ಸೇರಿ ಸಾರ್ವಜನಿಕ ಸಾರಿಗೆ ಸ್ಥಿತಿಗತಿ ಸುಧಾರಿಸಲು ಒಕ್ಕೂಟದ ಸದಸ್ಯರು ಸಲಹೆಗಳನ್ನು ನೀಡಿದರು. (ಏಜನ್ಸೀಸ್)

    ಒಂದು ತಾಸಿನಲ್ಲೇ ಪತ್ತೆ ಹಚ್ಚಬಹುದು ಕರೊನಾ ಸೋಂಕು, ಸಿಎಸ್​ಐಆರ್​​​​ನ ತಂತ್ರಜ್ಞಾನ ಅಭಿವೃದ್ಧಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts