More

    ಪಬ್ಲಿಕ್ ಪರೀಕ್ಷೆ ಅವೈಜ್ಞಾನಿಕ ನಿಯಮ: ಮಾಧ್ಯಮಿಕ ಶಿಕ್ಷಕ ಸಂಘ ಮಂಡಳಿಗೆ ಹೇಳಿದ್ದೇನು?

    ಬೆಂಗಳೂರು ರಾಜ್ಯಪಠ್ಯಕ್ರಮ 5,8,9ನೇ ತರಗತಿ ಮೌಲ್ಯಾಂಕನ, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆ ಮೌಲ್ಯಮಾಪನದಲ್ಲಿ ಅವೈಜ್ಞಾನಿಕ ನಿಯಮಗಳನ್ನು ಕೈಬಿಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘವು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷರಿಗೆ ಮನವಿ ಮಾಡಿತು.

    ಶನಿವಾರ ಮಂಡಳಿ ಅಧ್ಕಕ್ಷೆ ಎನ್. ಮಂಜುಶ್ರೀ ಅವರಿಗೆ ಮನವಿ ಮಾಡಿತು. ಶಿಕ್ಷಕರಿಗೆ ಅವಮಾನ, ಮಾನಸಿಕ ಹಿಂಸೆ, ಮಾನಸಿಕ ಒತ್ತಡ, ನೋಟಿಸ್ ಜಾರಿ ಮಾಡುವುದು, ಅಮಾನತು ಮಾಡುವುದು ಮತ್ತು ಇನ್ನಿತರ ಇಲಾಖೆಯಿಂದ ಸೃಷ್ಠಿಯಾಗಿರುವ ಗೊಂದಲಗಳಿಂದ ಜರ್ಜರಿತರಾಗಿದ್ದಾರೆ. ಶಿಕ್ಷಣ ಇಲಾಖೆಯು ಶಿಕ್ಷಕರನ್ನು ಕಾರ್ಮಿಕರಿಗಿಂತಲೂ ಹೀನಾಯವಾಗಿ ನಡೆಸಿಕೊಳ್ಳುತ್ತಿದೆ ಎಂದು ದೂರಿದರು.

    ಪಧವೀಧರ ಮತ್ತು ಶಿಕ್ಷಕರ ಕ್ಷೇತ್ರದ ಪ್ರತಿನಿಧಿಗಳಾದ ವೈ.ಎ. ನಾರಾಯಣಸ್ವಾಮಿ, ಅ. ದೇವೇಗೌಡ, ಭೋಜೇಗೌಡ, ಎಂ. ಚಿದಾನಂದ, ಹನುಮಂತ ನಿರಾಣಿ, ಸಂಘದ ಕಾರ್ಯಾಧ್ಯಕ್ಷ, ಮಾಜಿ ಎಂಎಲ್‌ಸಿ ಅರುಣ ಶಹಾಪುರ, ಸಂಘಟನಾ ಕಾರ್ಯದರ್ಶಿ ವೃಷಭೇಂದ್ರಸ್ವಾಮಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts