More

    ಕಾರ್ಯಾಗಾರ ಫಲಿತಾಂಶ ವೃದ್ಧಿಗೆ ಪೂರಕ: ಡಿಡಿಪಿಯು ಎಸ್.ಉಮೇಶ್ ವಿಶ್ವಾಸ

    ಮಂಡ್ಯ: ಜಿಲ್ಲೆಯ ಪದವಿ ಪೂರ್ವ ಕಾಲೇಜು ಉಪನ್ಯಾಸಕರು ನಡೆಸುತ್ತಿರುವ ವಿಷಯ ವೇದಿಕೆಗಳ ಕಾರ್ಯಾಗಾರಗಳಿಂದ ಪಿಯು ಫಲಿತಾಂಶ ವೃದ್ಧಿಯಾಗಲಿದೆ ಎಂದು ಡಿಡಿಪಿಯು ಎಸ್.ಉಮೇಶ್ ವಿಶ್ವಾಸ ವ್ಯಕ್ತಪಡಿಸಿದರು.
    ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಸಭಾಂಗಣದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ, ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಸಮಾಜಶಾಸ್ತ್ರ ವೇದಿಕೆ ವತಿಯಿಂದ ಆಯೋಜಿಸಿದ್ದ ಪರಿಷ್ಕೃತ ಪ್ರಶ್ನೆಪತ್ರಿಕೆ ಹಾಗೂ ಬಹು ಆಯ್ಕೆ ಪ್ರಶ್ನೆಗಳು ಎಂಬ ವಿಷಯದ ಬಗೆಗಿನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಭೌತವಿಜ್ಞಾನ, ಸಮಾಜ ವಿಜ್ಞಾನ ಹಾಗೂ ಭಾಷಾ ವಿಜ್ಞಾನ ವೇದಿಕೆಗಳು ಪರಿಷ್ಕೃತ ಪ್ರಶ್ನೆ ಪತ್ರಿಕೆಗಳ ಮೇಲೆ ರಾಜ್ಯ ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಾಗಾರ ನಡೆಸುತ್ತಿರುವುದು ರಾಜ್ಯದಲ್ಲಿ ಮಂಡ್ಯ ಜಿಲ್ಲೆಯಲ್ಲಿ ಮಾತ್ರ ಎಂದರು.
    ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ಜಿ.ಎನ್.ನಾಗೇಶ್ ಮಾತನಾಡಿ, ಉಪನ್ಯಾಸಕರ ಎಲ್ಲ ವೇದಿಕೆಗಳು ಸಕ್ರಿಯವಾಗಿ ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ಕ್ರಿಯಾಶೀಲವಾಗಿರುವುದು ಉತ್ತಮ ಬೆಳವಣಿಗೆ ಎಂದರು.
    ನಿವೃತ್ತ ಪ್ರಾಂಶುಪಾಲ ಎಂ.ವಿ.ಕೃಷ್ಣ ಮಾತನಾಡಿದರು. ಕರ್ನಾಟಕ ಸಮಾಜಶಾಸ್ತ್ರಿಯ ಸಂಘದ ಉಪಾಧ್ಯಕ್ಷ ಡಾ.ಜಿ.ಎಸ್.ಪುರುಷೋತ್ತಮ್ ಪರಿಷ್ಕೃತ ಪ್ರಶ್ನೆಪತ್ರಿಕೆ ಬಗ್ಗೆ ಉಪನ್ಯಾಸಕರಿಗೆ ವಿಸ್ತತ ಮಾಹಿತಿ ನೀಡಿದರು.ಜಿಲ್ಲಾ ಸಮಾಜಶಾಸ್ತ್ರ ವೇದಿಕೆ ಅಧ್ಯಕ್ಷ ಸಿ.ಆರ್.ದಿನೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
    ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಭೈರೇಶ್, ಕೋಶಾಧ್ಯಕ್ಷ ಡಿ.ಗುರುಲಿಂಗೇಗೌಡ, ಜಿಲ್ಲಾ ಸಮಾಜಶಾಸ್ತ್ರ ವೇದಿಕೆ ಪ್ರಧಾನ ಕಾರ್ಯದರ್ಶಿ ಎಂ.ಎಲ್.ಕೃಷ್ಣೇಗೌಡ, ಖಜಾಂಚಿ ಎಂ.ವಿನಾಯಕ, ಗೌರವಾಧ್ಯಕ್ಷ ನಿಂಗರಾಜು, ಉಪಾಧ್ಯಕ್ಷೆ ವೀಣಾ, ಪಿ.ಲಂಕೇಶ್, ಜಿ.ಎಂ.ಸ್ವಾಮಿ, ಶಿವಲಿಂಗೇಗೌಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts