More

    ತುರಿಕೆಯುಕ್ತ ಸೋರಿಯಾಸಿಸ್ ತಡೆಯೋಣ

    ಸೋರಿಯಾಸಿಸ್ ಎಂಬುದು ಕಡಿಮೆಯಾಗಲಾರದ ಸಮಸ್ಯೆ ಎಂಬ ಭಾವನೆ ಜನರ ಮನದಲ್ಲಿದೆ. ಆದರೆ ಪ್ರಕೃತಿಯ ಮೊರೆಹೋದರೆ ಈ ಸಮಸ್ಯೆಯನ್ನು ಬುಡಸಮೇತ ಕಿತ್ತುಹಾಕಲು ಸಾಧ್ಯ.

    ಈ ನಿಟ್ಟಿನಲ್ಲಿ ಉಪವಾಸ ಚಿಕಿತ್ಸೆ, ಜಲಚಿಕಿತ್ಸೆ, ಮಣ್ಣಿನ ಚಿಕಿತ್ಸೆ ಇತ್ಯಾದಿಗಳು ಬಹಳ ಸಹಕರಿಸುವ ನಿವಾರಣೋಪಾಯಗಳು. ಸಮಸ್ಯೆಯನ್ನು ಮನೆಯಲ್ಲಿಯೇ ಹತೋಟಿ ಮಾಡಲು ಸಹಕರಿಸುವ ಪರಿಹಾರೋಪಾಯಗಳು ಹೀಗಿವೆ.

    ತುರಿಕೆಯುಕ್ತ ಸೋರಿಯಾಸಿಸ್ ತಡೆಯೋಣಕೆಂಪಕ್ಕಿ ಗಂಜಿಯನ್ನು ಮಾಡಿಟ್ಟುಕೊಂಡು ಅದಕ್ಕೆ ಅರಿಶಿಣ ಪುಡಿಯನ್ನು (ಅರಿಶಿಣ ಕೊಂಬನ್ನು ತಂದು ಕುಟ್ಟಿ ಪುಡಿ ಮಾಡಿ ಬಳಸುವುದು ಉತ್ತಮ.) ಹಾಕಿ ಚೆನ್ನಾಗಿ ಕಲಸಿ ಸೋರಿಯಾಸಿಸ್ ಆಗಿರುವ ಭಾಗದಲ್ಲೆಲ್ಲ ಹಚ್ಚಿಕೊಳ್ಳಬೇಕು. ಅರ್ಧ ಗಂಟೆ ನಂತರ ಸ್ನಾನ ಮಾಡಬೇಕು.

    ಸೋರಿಯಾಸಿಸ್ ಆಗಿರುವವರಿಗೆ ಸೂರ್ಯಸ್ನಾನ ಅಗತ್ಯ. ಪ್ರತಿನಿತ್ಯ ಬೆಳಗ್ಗೆ 9ರಿಂದ 10 ಗಂಟೆಯ ಒಳಗೆ 20 ನಿಮಿಷ ಸೂರ್ಯನ ಬೆಳಕಿಗೆ ಮೈ ಒಡ್ಡಬೇಕು. ಪ್ರತಿನಿತ್ಯ ಹತ್ತು ಕರಿಬೇವು ಹಾಗೂ 15 ಕಹಿಬೇವಿನ ಎಲೆಗಳನ್ನು ಹಸಿಯಾಗಿಯೇ ಜ್ಯೂಸ್ ಮಾಡಿಕೊಂಡು ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.

    ಕೆಲವರಿಗೆ ಕರುಳಿನಲ್ಲಿ ಫಂಗಸ್ ಇರುವುದರಿಂದ ತುರಿಕೆಯುಕ್ತ ಸೋರಿಯಾಸಿಸ್ ಕಂಡುಬರುತ್ತದೆ. ಕೆಟ್ಟ ಬ್ಯಾಕ್ಟೀರಿಯಾ ಮತ್ತು ಫಂಗಸ್ ಸೇರಿ ಇನ್ನಷ್ಟು ಸಮಸ್ಯೆಗಳಿಗೆ ಕಾರಣವಾಗಿರುತ್ತವೆ. ಇಲ್ಲಿ ಐ.ಜಿ.ಇ. ಅಂಶ ಹೆಚ್ಚಿರುತ್ತದೆ. ಫಂಗಸ್ ಹೋಗಲಾಡಿಸಿದರೆ ತುರಿಕೆ ಕಡಿಮೆಯಾಗುತ್ತದೆ. ಅದಕ್ಕಾಗಿ ಆಂಟಿ ಫಂಗಲ್​ಗಳನ್ನು ತೆಗೆದುಕೊಳ್ಳಬೇಕು.

    ತುಳಸಿ, ಬೆಳ್ಳುಳ್ಳಿ ಸೇವನೆ ಉತ್ತಮ. ಸಕ್ಕರೆ ಸೇವನೆ ಹಾನಿಯನ್ನುಂಟುಮಾಡಿ ಸಮಸ್ಯೆಯ ಉಲ್ಬಣಕ್ಕೆ ಕಾರಣವಾಗಬಲ್ಲದು. ಕರುಳಿನಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಮಜ್ಜಿಗೆ ಸೇವನೆ ಅನುಕೂಲಕಾರಿ. ಮದ್ಯಪಾನ, ಫುಡ್ ಎಡಿಟಿವ್​ಗಳು, ಕೆಫಿನ್ ಅಂಶವಿರುವ ಪದಾರ್ಥಗಳನ್ನು ಆದಷ್ಟು ತ್ಯಜಿಸಬೇಕು.

    ಸೋರಿಯಾಸಿಸ್ ಕಡಿಮೆ ಮಾಡುವಲ್ಲಿ ಹುದುಗಿಸಿದ ಆಹಾರಸೇವನೆ ಸಹಕಾರಿ. ಸೊರ್​ಕ್ರೋಟ್ ಮಾಡಿ ನಿಯತವಾಗಿ ಸೇವಿಸಬೇಕು. ಸಣ್ಣದಾಗಿ ಕ್ಯಾಬೇಜ್ ಹೆಚ್ಚಿ, ಅದಕ್ಕೆ ಉಪ್ಪನ್ನು ಸೇರಿಸಿ ಚೆನ್ನಾಗಿ ಕಲಸಿ ಒಂದು ಡಬ್ಬದಲ್ಲಿ ಬಿಗಿಯಾಗಿ ಹಾಕಿಟ್ಟುಕೊಳ್ಳಬೇಕು. ಮೂರು ದಿನಗಳ ನಂತರ ಪ್ರತಿನಿತ್ಯ ಎರಡು ಚಮಚದಂತೆ ಸೇವಿಸುವುದರಿಂದ ಕರುಳಿನಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗಳ ಪ್ರಮಾಣ ಹೆಚ್ಚಾಗಿ ಸೊರಿಯಾಸಿಸ್ ನಿಯಂತ್ರಿಸಲು ಸಾಧ್ಯ. ಮೂರು ದಿನಗಳ ನಂತರ ಅದನ್ನು ಫ್ರಿಜ್​ನಲ್ಲಿ ಸಂಗ್ರಹಿಸಿಡಬೇಕು.

    ಕರಿದ ಪದಾರ್ಥ, ಸಂಸ್ಕರಿತ ಪದಾರ್ಥ, ಜಂಕ್​ಫುಡ್​ಗಳ ಸೇವನೆಯನ್ನು ಬಿಡಬೇಕು. 15 ದಿನಗಳಿಂದ ಒಂದು ತಿಂಗಳು ಕಾಲ ಕೇವಲ ಪ್ರಕೃತಿದತ್ತ ಆಹಾರಪದಾರ್ಥಗಳನ್ನು ಸೇವಿಸಿ ಉಪವಾಸ ಚಿಕಿತ್ಸೆ ಕೈಗೊಂಡರೆ ಸೋರಿಯಾಸಿಸ್ ಹತೋಟಿಗೆ ಬರುತ್ತದೆ. ಹಸಿ ತರಕಾರಿಗಳ ಸಲಾಡ್, ಹಣ್ಣುಗಳು, ತುಪ್ಪದಲ್ಲಿ ಬೇಯಿಸಿದ ತರಕಾರಿಗಳು, ಸೂಪ್​ಗಳ ಸೇವನೆ ಉತ್ತಮ. ನಂತರ ನಿರ್ದಿಷ್ಟ ಆಹಾರಪದ್ಧತಿಯನ್ನು ರೂಢಿಸಿಕೊಂಡು ಪಾಲಿಸಿದಾಗ ಸೋರಿಯಾಸಿಸ್ ಹತೋಟಿ ಸಾಧ್ಯ.

    ಪಾರಿಜಾತದ ಎಲೆಗಳನ್ನು ಒಣಗಿಸಿ ಪುಡಿ ಮಾಡಿಟ್ಟುಕೊಂಡು ಅದನ್ನು ನೀರಿನಲ್ಲಿ ಬೆರೆಸಿ ಸೇವಿಸುವುದೂ ಸೋರಿಯಾಸಿಸ್​ನ್ನು ಹತೋಟಿಗೆ ಸಹಾಯ ಮಾಡುತ್ತದೆ. ಹೀಗೆ ಮನೆಯಲ್ಲಿರುವ ಔಷಧೀಯ ವಸ್ತುಗಳನ್ನು ಉಪಯೋಗಿಸಿಕೊಂಡೇ ಸೋರಿಯಾಸಿಸ್ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts