More

    ಪಿಎಸ್‌ಐ, ಪೇದೆ ವಿರುದ್ಧ ದೂರು

    ಖಾನಾಪುರ: ಅನಗತ್ಯವಾಗಿ ಸಾರ್ವಜನಿಕರಿಗೆ ಕಿರುಕಳ, ಅಕ್ರಮ ಮರಳು ಸಾಗಣೆಗೆ ಸಹಕಾರ ಮತ್ತು ಲಂಚ ಸ್ವೀಕರಿಸಿ ಕರ್ತವ್ಯದ್ರೋಹ ಎಸಗಿರುವ ನಂದಗಡ ಪೊಲೀಸ್ ಠಾಣೆಯ ಪಿಎಸ್‌ಐ ಸುಮಾ ನಾಯಕ (ಸುಮಾ ಗೊರಾಬಾಳ) ಹಾಗೂ ಪೇದೆ ಪ್ರಕಾಶ ಅವರ ವಿರುದ್ಧ ತಾಲೂಕಿನ ಇಟಗಿ ಗ್ರಾಮಸ್ಥ ಅಪ್ಪಣ್ಣ ದೊಡಮನಿ ಎಂಬುವರು ಶನಿವಾರ ದೂರು ದಾಖಲಿಸಿದ್ದಾರೆ.

    ಗೃಹ ಸಚಿವರು, ರಾಜ್ಯ ಪೊಲೀಸ್ ಐಜಿಪಿ ಮತ್ತು ಡಿಜಿ, ಉತ್ತರ ವಲಯ ಐಜಿಪಿ ಮತ್ತು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಅವರು, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ನೀಡಿದ್ದಾರೆ.

    ಅಕ್ರಮ ಮರಳು ಸಾಗಣೆಯ ಪ್ರಮುಖ ಆರೋಪಿಯ ಹೆಸರಿನ ಬದಲು ಹಣ ಪಡೆದು ಇನ್ನೋರ್ವ ಆರೋಪಿಯ ಹೆಸರನ್ನು ನ್ಯಾಯಾಲಯಕ್ಕೆ ನೀಡಿರುವುದು, ಜೂಜಾಟದಲ್ಲಿ ತೊಡಗಿದ್ದವರನ್ನು ಬಂಧಿಸಿ ಅವರಿಂದ ಲಂಚ ಸ್ವೀಕರಿಸಿ ಪ್ರಕರಣ ದಾಖಲಿಸದೇ ಬಿಡುವುದು, ನಂದಗಡ ಠಾಣೆಗೆ ದೂರು ನೀಡಲು ತೆರಳುವ ಸಾರ್ವಜನಿಕರಿಂದಲೂ ಸುಲಿಗೆ ಮಾಡುವುದು, ಹಲವು ಪ್ರಕರಣಗಳ ಇತ್ಯರ್ಥಕ್ಕೂ ಹಣದ ಬೇಡಿಕೆ ಇಡುತ್ತಾರೆ.

    ಹೀಗಾಗಿ ಕರ್ತವ್ಯಕ್ಕೆ ದ್ರೋಹ ಮಾಡಿ, ಸರ್ಕಾರದ ಬೊಕ್ಕಸಕ್ಕೆ ಹಾನಿ ಉಂಟು ಮಾಡುತ್ತಿರುವ ಈ ಇಬ್ಬರು ಸರ್ಕಾರಿ ಅಧಿಕಾರಿಗಳ ವಿರುದ್ಧ ತನಿಖೆ ಕೈಗೊಂಡು ಸಾರ್ವಜನಿಕರಿಗೆ ನ್ಯಾಯ ಒದಗಿಸಿಕೊಡಲು ಅವರು ಮನವಿಯಲ್ಲಿ ಕೋರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts