More

    ಬಿಜಿಎಂಎಲ್​ ನಿವೃತ್ತ ನೌಕರರಿಗೆ ನ್ಯಾಯ ಒದಗಿಸಿ

    ಕೆಜಿಎಫ್​: ಭಾರತ್​ ಗೋಲ್ಡ್​ ಮೈನ್ಸ್​ ಎಂಪ್ಲಾಯಿಸ್​ ಇಂಡ್ರಸ್ಟ್ರೀಯಲ್​ ಕೋ-ಆಪರೇಟಿವ್​ ಸೊಸೈಟಿ, ಭಾರತ್​ ಚಿನ್ನದ ಗಣಿ ನೌಕರರ ಕೈಗಾರಿಕೆ ಸಹಕಾರ ಸಂಘ ಹಾಗೂ ಬಿಜಿಎಂಎಲ್​ ನೌಕರರ ಮೇಲ್ವಿಚಾರಕರು ಮತ್ತು ಅಧಿಕಾರಿಗಳ ಸಹಕಾರ ಸಂಘಗಳು ನಿವೃತ್ತ ಬಿಜಿಎಂಎಲ್​ ಕಾರ್ಮಿಕರನ್ನು ದಿಕ್ಕುತಪ್ಪಿಸುತ್ತಿವೆ. ನಮಗೆ ಬರಬೇಕಾದ ಬಾಕಿ ಹಣವನ್ನು ಕಾರ್ಮಿಕರಿಗೆ ತಲುಪದಂತೆ ಅಡ್ಡಿಪಡಿಸುತ್ತಿದ್ದಾರೆ. ಹೀಗಾಗಿ ಈ ಮೂರು ಸೊಸೈಟಿಗಳನ್ನು ರದ್ದುಪಡಿಸುವಂತೆ ಆಗ್ರಹಪಡಿಸಿ ಬಿಜಿಎಂಎಲ್​ ನಿವೃತ್ತ ನೌಕರರ ಸಂದ ವತಿಯಿಂದ ಶನಿವಾರ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ತಾಲೂಕು ಶಿರಸ್ತೇದಾರ ಸುರೇಶ್​ ಅವರಿಗೆ ಮನವಿ ಸಲ್ಲಿಸಿದರು.

    ಭಾರತ್​ ಗೋಲ್ಡ್​ ಮೈನ್ಸ್​ ನಿವೃತ್ತ ನೌಕರರ ಸಂದ ಅಧ್ಯಕ್ಷ ಮೂರ್ತಿ ಮಾತನಾಡಿ, ಬಿಜಿಎಂಎಲ್​ ಕಾರ್ಖಾನೆಯಲ್ಲಿ ಎಸ್​ಟಿಬಿಪಿಡಿಯಲ್ಲಿ ಕಾರ್ಮಿಕರು 3,700 ಕಾರ್ಮಿಕರು ಇದ್ದು 2,880 ಕಾರ್ಮಿಕರು ಗ್ಲೋಬಲ್​ ಗೋಲ್ಡ್​ ಮೈನ್ಸ್​ ಇಂಡ್ರಸ್ಟ್ರೀಯಿಲ್​ ಕೋ-ಆಪರೇಟಿವ್​ ಸೊಸೈಟಿಯಲ್ಲಿ ಸದಸ್ಯರಾಗಿದ್ದರು. ಕೇಂದ್ರ ಗಣಿ ಇಲಾಖೆ ಸೊಸೈಟಿ ಮೂಲಕ ಬಿಜಿಎಂಎಲ್​ ಗಣಿ ಕಂಪನಿ ಮುನ್ನಡೆಸುವುದಾಗಿ ತಿಳಿಸಿತ್ತು  ಅನ್ಬಳಗನ್​ ಸೇರಿದಂತೆ ದಿವಾಕರ್​, ಜಯಕುಮಾರ ಹಾಗೂ ಇತರರು ಸೊಸೈಟಿಗಳನ್ನು ಆರಂಭಿಸಿ ಸೊಸೈಟಿಗಳನ್ನೇ ಒಡೆದು ಆಳಿದರು. ನೂತನವಾಗಿ ಆರಂಭವಾಗಿರುವ ಈ ಸೊಸೈಟಿಗಳಲ್ಲೂ ಕಾರ್ಮಿಕರನ್ನು ಸದಸ್ಯರನ್ನಾಗಿ ನೇಮಕಗೊಳಿಸಿದರು ಮತ್ತು ಹೊಸ ಹೊಸ ಖಾಸಗಿ ಗಣಿ ಕಂಪನಿಗಳೊಂದಿಗೆ ಒಳಒಪ್ಪಂದವನ್ನು ಮಾಡಿಕೊಂಡು ಹಣ ಸಂಪಾದನೆ ಮಾಡಿದರು ಆದ್ದರಿಂದ ಬಿಜಿಎಂಎಲ್​ ಕಾರ್ಮಿಕರು ಬೀದಿಗೆ ಬೀಳುವ ಪರಿಸ್ಥಿತಿ ಬಂತು.

    ಬಿಜಿಎಂಎಲ್​ ಕಾರ್ಖಾನೆಗೆ ಬೀಗ ಜಡಿದು 22 ವರ್ಷ ಕಳೆದಿದ್ದು ಇದುವರೆಗೂ ಸಮಸ್ಯೆ ಬಗೆಹರಿದಿಲ್ಲ ಬಿಜಿಎಂಎಲ್​ ಕಾರ್ಮಿಕರ ಸಮಸ್ಯೆಗಳು ಬಗೆಹರಿಯಬೇಕಾದರೆ ಎಲ್ಲ ಸೊಸೈಟಿಗಳನ್ನು ರದ್ದುಪಡಿಸಬೇಕು ಮತ್ತು ಅವರಿಗೆ ಬೆಂಬಲವಾಗಿ ನಿಂತಿರುವ ಅಧಿಕಾರ ವರ್ಗವನ್ನು ಕಾನೂನುಬದ್ಧವಾಗಿ ತನಿಖೆ ನಡೆಸಿ ಸೂಕ್ತವಾದ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts