More

  ಸಮರ್ಪಕ ಮೇವು, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ

  ಹನೂರು: ಜಾನುವಾರುಗಳಿಗೆ ಸಮರ್ಪಕ ಮೇವು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಶನಿವಾರ ತಾಲೂಕಿನ ಡಿ.ಎಂ.ಸಮುದ್ರ ಗ್ರಾಮದಲ್ಲಿ ರೈತರು ಒತ್ತಾಯಿಸಿದರು.

  ಬರಗಾಲದ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವು ಹಾಗೂ ನೀರಿನ ವ್ಯವಸ್ಥೆ ಒದಗಿಸುವ ಸಲುವಾಗಿ ಜಿಲ್ಲಾಡಳಿತ ಕೌದಳ್ಳಿ ಹಾಗೂ ಶಾಗ್ಯ ಭಾಗದ ಕೆಲವೆಡೆ ಗೋ ಶಾಲೆ ತೆರೆದಿತ್ತು. ಆದರೆ ಹೆಚ್ಚು ಜಾನುವಾರುಗಳಿರುವ ಡಿ.ಎಂ.ಸಮುದ್ರ ಭಾಗದಲ್ಲಿ ಗೋ ಶಾಲೆ ತೆರೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ಏ.18ರಂದು ರೈತರು ಎಲ್ಲೇಮಾಳ ಗ್ರಾಮದಲ್ಲಿ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಸಿದ್ದರಾಜು ಶುಕ್ರವಾರದಿಂದ ಮೇವು ಒದಗಿಸಲಾಗುವುದು ಎಂದು ಭರವಸೆ ನೀಡಿ ಅದರಂತೆಯೇ ಡಿ.ಎಂ.ಸಮುದ್ರ ಹಾಗೂ ಎಂ.ಟಿ.ದೊಡ್ಡಿ ಗ್ರಾಮಕ್ಕೆ ಮೇವನ್ನು ಒದಗಿಸಿದ್ದರು.

  ಈ ಬಗ್ಗೆ ತಿಳಿದ ಇನ್ನಷ್ಟು ರೈತರು ಶನಿವಾರ ಮೇವಿಗಾಗಿ ಸುಮಾರು 1,200ಕ್ಕೂ ಹಸುಗಳನ್ನು ಗೋ ಶಾಲೆಯತ್ತ ಕರೆ ತಂದಿದ್ದರು. ಆದರೆ ಮಧ್ಯಾಹ್ನ 12 ಗಂಟೆಯದರೂ ಮೇವು ಬಾರದ ಹಿನ್ನೆಲೆ ಕೆಲ ರೈತರು ಹಸುಗಳನ್ನು ಮನೆಗಳಿಗೆ ಕರೆದೊಯ್ದರು. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ರೈತರು, ಸಮರ್ಪಕವಾಗಿ ಮೇವು ಪೂರೈಸುವಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದ ಬಳಿಕ ಎಂ.ಟಿ.ದೊಡ್ಡಿ ಗ್ರಾಮಕ್ಕೆ ಮಾತ್ರ ಮೇವನ್ನು ಪೂರೈಸಲಾಯಿತು. ಆದರೆ ಡಿ.ಎಂ.ಸಮುದ್ರ ಗ್ರಾಮಕ್ಕೆ ಒದಗಿಸಲಿಲ್ಲ. ಇದರಿಂದ ರೊಚ್ಚಿಗೆದ್ದ ರೈತರು ಮೇವು ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಸಮರ್ಪಕವಾಗಿ ಕಲ್ಪಿಸುವಂತೆ ಒತ್ತಾಯಿಸಿದರು.

  ರೈತ ಸಂಘ ಹಾಗೂ ಹಸಿರು ಸೇನೆಯ ಗ್ರಾಮ ಘಟಕ ಅಧ್ಯಕ್ಷ ಮೈಕಲ್, ಕಾರ್ಯದರ್ಶಿ ರಾಜು, ಮುನಿಸ್ವಾಮಿ, ಗಿರಿಮಲ್ಲಯ್ಯ, ಶಿವಮಲ್ಲು, ಮಂಟೇಸ್ವಾಮಿ, ಲಕ್ಷ್ಮೀ, ರೇಖಾ ಇತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts