More

    VIDEO| ಬಿಜೆಪಿ ಶಾಸಕನ ಬಟ್ಟೆ ಹರಿದು, ಹಿಗ್ಗಾಮುಗ್ಗಾ ಥಳಿಸಿದ ಪ್ರತಿಭಟನಾನಿರತ ರೈತರು..!

    ಚಂಡೀಗಢ: ಒಂದು ಗುಂಪಿನ ರೈತರು ಬಿಜೆಪಿ ಶಾಸಕರೊಬ್ಬರನ್ನು ಹಿಡಿದು ಥಳಿಸಿದ್ದಲ್ಲದೆ, ಬಟ್ಟೆ ಹರಿದು ಹಾಕಿ ಅವರ ಮೇಲೆ ಕಪ್ಪು ಮಸಿ ಸುರಿದಿರುವ ಘಟನೆ ಪಂಜಾಬ್​ನ ಮುಕ್ತ್​ಸರ್​ ಜಿಲ್ಲೆಯ ಮಲೌತ್​ನಲ್ಲಿ ಶನಿವಾರ ನಡೆದಿದೆ.

    ಅಬೊಹರ್​ ಕ್ಷೇತ್ರದ ಬಿಜೆಪಿ ಶಾಸಕ ಅರುಣ್​ ನಾರಂಗ್​ ಸೇರಿದಂತೆ ಇತರೆ ಸ್ಥಳೀಯರ ನಾಯಕರನ್ನು ಪ್ರತಿಭಟನಾನಿರತ ರೈತರ ಗುಂಪೊಂದು ಸುತ್ತುವರೆದು ಥಳಿಸಿದ್ದಾರೆ. ಶಾಸಕರು ಮಲೌತ್​ನಲ್ಲಿ ಸುದ್ದಿಗೋಷ್ಠಿಯನ್ನು ನಡೆಸುವಾಗ ಈ ದುರ್ಘಟನೆ ನಡೆದಿದೆ.

    ಅರುಣ್​ ನಾರಂಗ್​ ಆಗಮನಕ್ಕಾಗಿ ಪ್ರತಿಭಟನಾಕಾರರು ಮೊದಲೇ ಬಿಜೆಪಿ ಕಚೇರಿಯ ಬಳಿ ಕಾಯುತ್ತಿದ್ದರು. ನಾರಂಗ್​ ಬರುತ್ತಿದ್ದಂತೆ ಅವರ ಮೇಲೆ ಕಪ್ಪು ಮಸಿ ಎಸೆದಿದ್ದಾರೆ. ಅಲ್ಲದೆ, ಅವರ ಕಾರನ್ನು ಸಹ ಕಪ್ಪು ಕಲೆಯುಕ್ತ ಮಾಡಿದರು. ಈ ವೇಳೆ ಸ್ಥಳದಲ್ಲಿದ್ದ ಕೆಲ ಪೊಲೀಸರು ಶಾಸಕರು ಮತ್ತು ಸ್ಥಳೀಯ ನಾಯಕರುಗಳನ್ನು ಹತ್ತಿರದ ಅಂಗಡಿಯೊಂದಕ್ಕೆ ಕರೆದೊಯ್ದರು. ತದನಂತರದಲ್ಲಿ ಅಂಗಡಿಯಿಂದ ಹೊರಬಂದಾಗ ಅರುಣ್​ ನಾರಂಗ್​ ಮತ್ತವರ ಬೆಂಬಲಿಗರನ್ನು ಹಿಡಿದು ರೈತರು ಥಳಿಸಿ, ಬಟ್ಟೆ ಹರಿದಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

    ಹೇಗೋ ಕೊನೆಯಲ್ಲಿ ನಾರಂಗ್​ ಅವರನ್ನು ಪೊಲೀಸರು ರೈತರ ಗುಂಪಿಂದ ರಕ್ಷಣೆ ಮಾಡಿ ಕರೆದೊಯ್ದರು. ಘಟನೆ ಸಂಬಂಧಿಸಿದ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

    ಇದೀಗ ಪ್ರತಿಭಟನಾಕಾರರ ವಿರುದ್ಧ ಭಾರತೀಯ ದಂಡ ಸಂಹಿತೆ ವಿವಿಧ ಸೆಕ್ಷನ್​ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಆರಂಭವಾಗಿದ್ದು, ಹಲ್ಲೆ ಮಾಡಿದವರ ಗುರು ಪತ್ತೆ ಕಾರ್ಯ ನಡೆಯುತ್ತಿದೆ.

    ಇನ್ನು ಈ ಘಟನೆಯನ್ನು ಅಕಾಲಿದಳ ಮತ್ತು ಕಾಂಗ್ರೆಸ್​ ಖಂಡಿಸಿದೆ. ನಾರಂಗ್​ ಮೇಲೆ ಹಿಂಸಾತ್ಮಕ ಹಲ್ಲೆಯನ್ನು ಸಹಿಸಲಾಗದು. ಈ ವಿಚಾರದಲ್ಲಿ ಪಕ್ಷಪಾತವಿಲ್ಲದೆ ತನಿಖೆ ಮಾಡಿ ಇದರ ಹಿಂದಿರುವವರನ್ನು ಬಂಧಿಸಬೇಕು. ಚುನಾಯಿತಗೊಂಡ ಜನಪ್ರತಿನಿಧಿಗೆ ಪೊಲೀಸರು ಸೂಕ್ತ ರಕ್ಷಣೆ ಕೊಡುವಲ್ಲಿ ವಿಫಲವಾಗಿದ್ದಾರೆ ಎಂದು ಅಕಾಲಿದಳದ ಮುಖ್ಯಸ್ಥ ಸುಖ್ಬೀರ್​ ಸಿಂಗ್​ ಬಾದಲ್​ ಹೇಳಿದ್ದಾರೆ.

    ಪಂಜಾಬ್​ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಸುನ್ಲ್ ಜಖರ್ ಮಾತನಾಡಿ, ಇಂತಹ “ಕಾನೂನುಬಾಹಿರ ವರ್ತನೆಗೆ” ಪ್ರಜಾಪ್ರಭುತ್ವದಲ್ಲಿ ಸ್ಥಾನವಿಲ್ಲ ಮತ್ತು ಈ ಘಟನೆಗಳಿಂದ ರೈತರ ಪ್ರತಿಭಟನೆ ದುರ್ಬಲಗೊಳ್ಳುತ್ತದೆ ಎಂದು ಹೇಳಿದರು.

    ಆದರೆ, ಬಿಜೆಪಿ ಈ ಘಟನೆಯನ್ನು ವಿರೋಧಿಸಿದ್ದು ಇದರ ಹಿಂದೆ ಸಿಎಂ ಅಮರೀಂದರ್​ ಸಿಂಗ್​ ನೇತೃತ್ವದ ಸರ್ಕಾರ ಮತ್ತು ಕಾಂಗ್ರೆಸ್​ ಕೂಡ ಕೈಜೋಡಿಸಿದೆ ಎಂದು ದೂರಿದೆ. (ಏಜೆನ್ಸೀಸ್​)

    ‘ನಿಮಗೆ ನಮೋ ನಮಃ.. ಅಚ್ಛೇ ದಿನಕ್ಕೆ ಕಾದು ಕೂರಬೇಡಿ, ಅದು ಯಾವತ್ತೂ ಬರುವುದಿಲ್ಲ’ ಎಂದರು ಸಿದ್ದರಾಮಯ್ಯ

    “ರೊಕ್ಕ ಕೊಟ್ಟು ಗೋವಾಗೆ ಕಳಿಸ್ತಿದಾರೆ…” ಸಿಡಿ ಲೇಡಿಯ ಎರಡನೇ ಆಡಿಯೋದಲ್ಲಿ ಸ್ಫೋಟಕ ಮಾಹಿತಿ!

    ಡಿಕೆಶಿ ವಿರುದ್ಧ ಅಶ್ಲೀಲ ಪದ ಬಳಕೆ: ವಿಷಾದ ವ್ಯಕ್ತಪಡಿಸಿದ ಜಾರಕಿಹೊಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts