More

    ರಾಜಭವನದ ಮುಂದೆ ಕುರಿ ಮಂದೆ ಜೊತೆ ಪ್ರತಿಭಟನೆ; ನೋಡುತ್ತಾ ನಿಂತ ಪೊಲೀಸರು !

    ಕೊಲ್ಕತಾ : ರಾಜ್ಯದಲ್ಲಿ ಕರ್ಫ್ಯೂ ಜಾರಿಯಲ್ಲಿದ್ದರೂ ರಾಜಭವನದ ಮುಂದೆಯೇ ಹಲವಾರು ಜನ ಬಂದು ಪ್ರತಿಭಟನಾ ಧರಣಿ ನಡೆಸುತ್ತಿರುವ ಬಗ್ಗೆ ಪಶ್ಚಿಮ ಬಂಗಾಳದ ರಾಜ್ಯಪಾಲರಾದ ಜಗದೀಪ್ ಧನಕರ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜಭವನದ ಮುಖ್ಯದ್ವಾರದಲ್ಲಿ ಕಾನೂನು ಸುವ್ಯವಸ್ಥೆ ಪರಿಸ್ಥಿತಿ ಹೇಗಿದೆ ನೋಡಿ ಎಂದು ಸಿಎಂ ಮಮತಾ ಬ್ಯಾನರ್ಜಿ ಮತ್ತು ಕೊಲ್ಕತಾ ಪೊಲೀಸ್​ ಕಮಿಷನರ್​ಅನ್ನು ಟ್ಯಾಗ್ ಮಾಡಿ ಟ್ವಿಟರ್ ಮೂಲಕ ತಾಕೀತು ಮಾಡಿದ್ದಾರೆ.

    ರಾಜಭವನದ ಉತ್ತರ ಭಾಗದ ಗೇಟ್​ ಬಳಿ ನಿನ್ನೆ ಎರಡು ಗಂಟೆಗಳ ಕಾಲ ಹಲವು ಜನ ಸೇರಿ ಪ್ರತಿಭಟನೆ ನಡೆಸಿದರು. ಆದರೆ ಕೊಲ್ಕತಾ ಪೊಲೀಸರು ಅದನ್ನು ಮೂಕಸಾಕ್ಷಿಗಳಾಗಿ ನೋಡುತ್ತಿದ್ದರು. ಮತ್ತೊಂದು ಪ್ರತಿಭಟನೆಯಲ್ಲಿ ಒಬ್ಬ ವ್ಯಕ್ತಿ ಅರ್ಧ ಡಜನ್ ಕುರಿಗಳನ್ನು ತಂದು ಗೇಟ್ ಮುಂದೆ ನಿಲ್ಲಿಸಿಕೊಂಡಿದ್ದ. ಅವನು ಪೋಸ್​ ಕೊಡುತ್ತಾ ಮಾಧ್ಯಮದವರೊಂದಿಗೆ ಮಾತನಾಡುತ್ತಿರುವಾಗ ಪೊಲೀಸರ ದಂಡು ಸುಮ್ಮನೆ ನಿಂತಿತ್ತು. ಇದೆಲ್ಲಾ ಸೆಕ್ಷನ್ 144 (ಕರ್ಫ್ಯೂ) ಜಾರಿಯಲ್ಲಿದ್ದರೂ ಕೂಡ ನಡೆದಿದೆ ಎಂದು ರಾಜ್ಯಪಾಲರು ಹೇಳಿದ್ದಾರೆ. ಈ ಸ್ಥಿತಿಗೆ ಕಾರಣವೇನು ಎಂದು ಕೊಲ್ಕತ ಪೊಲೀಸ್​ ಕಮಿಷನರ್​ರಿಂದ ವಿವರಣೆ ಕೇಳಿದ್ದಾರೆ.

    ಬಂಗಾಳದಲ್ಲಿ ಆಡಳಿತಾರೂಢ ಟಿಎಂಸಿ ಕಾರ್ಯಕರ್ತರು ಸಿಬಿಐ ಸಚಿವರಾದ ಫರ್​ಹಾದ್​ ಹಕೀಮ್​, ಸುಬ್ರತ ಮುಖರ್ಜಿ ಮತ್ತು ಶಾಸಕ ಮದನ್​ ಮಿತ್ರ ಅವರನ್ನು ಬಂಧಿಸಿರುವುದರ ವಿರುದ್ಧ ಕಳೆದೆರಡು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಹಲವು ಕಾರ್ಯಕರ್ತರು ನಿನ್ನೆ ರಾಜಭವನದ ಮುಂದೆ ಧರಣಿ ನಡೆಸಿದರು ಎನ್ನಲಾಗಿದೆ. ಆದಾಗ್ಯೂ ರಾಜ್ಯಪಾಲರಿಗೆ ಕೋಪ ತಂದ ಮತ್ತೊಂದು ಪ್ರತಿಭಟನೆ ಕೊಲ್ಕತ ನಾಗರೀಕ ಮಂಚ್​​ ನಡೆಸಿದ್ದು. ವ್ಯಕ್ತಿಯೊಬ್ಬರು ಕೆಲವು ಕುರಿಗಳನ್ನು ಜೊತೆಗೆ ತಂದು ರಾಜ್ಯದಲ್ಲಿ ಸಮರ್ಪಕವಾಗಿ ಕರೊನಾ ನಿರ್ವಹಣೆ ಮಾಡಲಾಗುತ್ತಿಲ್ಲ ಎಂದು ಪ್ರತಿಭಟನೆ ಕೈಗೊಂಡರು ಎನ್ನಲಾಗಿದೆ. (ಏಜೆನ್ಸೀಸ್)

    ಲಸಿಕೆಯಿಂದ ಪ್ರಾಣರಕ್ಷಣೆ : ಅಪೋಲೋ ಜೆಎಂಡಿ ಡಾ. ಸಂಗೀತ ರೆಡ್ಡಿ

    ಸ್ಪುಟ್ನಿಕ್ ವಿ ಲಸಿಕೆಯೊಂದಿಗೆ ರಷ್ಯಾ ಪ್ರವಾಸ : ಲಭ್ಯವಿದೆ 25 ದಿನಗಳ ಪ್ಯಾಕೇಜ್ ಟೂರ್ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts