More

    ಸಚಿವರ ಮನೆ ಮುಂದೆಯೇ ಧರಣಿ; ಮೂರು ದಿನಗಳಿಂದ ನಡೆಯುತ್ತಿದೆ ಕೆಪಿಎಸ್​​ಸಿಯಿಂದ ಆಯ್ಕೆ ಆದವರ ಪ್ರತಿಭಟನೆ

    ಬೆಂಗಳೂರು: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇದ್ದ 222 ಹುದ್ದೆಗಳಿಗೆ ಕೆಪಿಎಸ್‌ಸಿ ಮೂಲಕ ನೇಮಕವಾಗಿದ್ದರೂ ಇನ್ನೂ ನೇಮಕಾತಿ ಆದೇಶ ನೀಡದಿರುವ ಸರ್ಕಾರದ ವಿಳಂಬ ನೀತಿ ಖಂಡಿಸಿ ನೇಮಕವಾದ ಅಭ್ಯರ್ಥಿಗಳು ಕಳೆದ ಮೂರು ದಿನಗಳಿಂದ ಸಚಿವ ಶ್ರೀಮಂತ ಪಾಟೀಲ ಅವರ ಮನೆ ಎದುರು ಧರಣಿ ನಡೆಸುತ್ತಿದ್ದಾರೆ.

    ಕೆಪಿಎಸ್‌ಸಿ ಮೂಲಕ ಈಗಾಗಲೇ 222 ಹುದ್ದೆಗಳನ್ನು ನೇಮಿಸಿಕೊಂಡು ಈಗಾಗಲೇ ಒಂದು ವರ್ಷ ಪೂರೈಸಲಾಗಿದೆ. ಮಾತ್ರವಲ್ಲ, ಈ ನೇಮಕಾತಿಯ ಕಾಲಾವಧಿ ಕೂಡ ಮುಗಿಯುವ ಹಂತಕ್ಕೂ ಬಂದು ತಲುಪಿದೆ. ಇಷ್ಟಾಗಿದ್ದರೂ ಅಭ್ಯರ್ಥಿಗಳಿಗೆ ಇನ್ನೂ ನೇಮಕಾತಿ ಆದೇಶ ಪ್ರತಿ ನೀಡಿಲ್ಲ. ಆರ್ಥಿಕ ಇಲಾಖೆಯವರು ನೇಮಕವಾದವರಿಗೆ ಆದೇಶ ನೀಡಲು ಇನ್ನೂ ಸಮ್ಮತಿಸದಿರುವುದೇ ಕಾರಣವಾಗಿದೆ ಎಂದು ದೂರಿರುವ ಅಭ್ಯರ್ಥಿಗಳು, ಬೇರೆ ಬೇರೆ ಇಲಾಖೆಯಲ್ಲಿರುವ ಸುಮಾರು 2500 ವಿವಿಧ ಹುದ್ದೆಗಳಿಗೆ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದ್ದು, ಕೇವಲ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ 222 ವಿವಿಧ ಹುದ್ದೆಗಳಿಗೆ ಇನ್ನೂ ಅನುಮತಿ ನೀಡದಿರುವುದು ತಾರತಮ್ಯ ಮಾಡುತ್ತಿದೆ ಎಂದು ಧರಣಿ ನಿರತ ಅಭ್ಯರ್ಥಿಗಳು ಆರೋಪಿಸುತ್ತಿದ್ದಾರೆ.

    ಇದನ್ನೂ ಓದಿ: ಮದ್ವೆಗೆ ಕೆಲವೇ ನಿಮಿಷಗಳಿರುವಾಗ ಪ್ರಿಯಕರನ ಜತೆ ವಧು ಪರಾರಿ; ಆಕೆಯ ತಂಗಿಯನ್ನೇ ಮದ್ವೆಯಾದ ವರ; ಕೊನೆಗೆ ಮೊದಲರಾತ್ರಿಗೂ ಬಂತು ಕುತ್ತು! 

    ಸಚಿವರ ಮನೆ ಮುಂದೆಯೇ ಧರಣಿ; ಮೂರು ದಿನಗಳಿಂದ ನಡೆಯುತ್ತಿದೆ ಕೆಪಿಎಸ್​​ಸಿಯಿಂದ ಆಯ್ಕೆ ಆದವರ ಪ್ರತಿಭಟನೆ
    ಸಚಿವರ ಮನೆ ಮುಂದೆ ಪ್ರತಿಭಟನೆ

    ಕೂಡಲೇ ನೇಮಕಾತಿ ಆದೇಶ ನೀಡುವಂತೆ ಆಗ್ರಹಿಸಿ ಕಳೆದ ಮೂರು ದಿನಗಳಿಂದ ಹಗಲು ರಾತ್ರಿ ಎನ್ನದೆ ಸಚಿವ ಶ್ರೀಮಂತ ಪಾಟೀಲ ಅವರ ಮನೆ ಎದುರು ರಾಜ್ಯದ ನಾನಾ ಭಾಗಗಳಿಂದ ಬಂದಿರುವ ಅಭ್ಯರ್ಥಿಗಳು ಧರಣಿ ನಡೆಸುತ್ತಿದ್ದಾರೆ. ನಮ್ಮ ಬೇಡಿಕೆಗಳು ಸಮಂಜಸವಾಗಿದ್ದು, ರಾಜ್ಯ ಸರ್ಕಾರವು ಆರ್ಥಿಕ ಇಲಾಖೆಯಿಂದ ಅನುಮತಿ ಪಡೆದುಕೊಂಡು ಕೂಡಲೇ ನೇಮಕ ಆದೇಶ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

    ಕರೊನಾ ಲಸಿಕೆ ಪಡೆದ ಎರಡು ಗಂಟೆಯಲ್ಲಿ ವೃದ್ಧೆ ಸಾವು!

    ಗಂಡು ಮಗುವಿಗೆ ಜನ್ಮ ನೀಡಿದ ಮಯೂರಿ! ಹುಟ್ಟಿದ ತಕ್ಷಣ ಇನ್​ಸ್ಟಾಗ್ರಾಂಗೆ ಬಂದ ಮಗರಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts