More

    ನೆಲೆ ಇಲ್ಲದಂತಾದ ಹರಪನಹಳ್ಳಿ – ಮೂರನೇ ಜಿಲ್ಲೆ ವ್ಯಾಪ್ತಿಗೆ ತಾಲೂಕು

    ಕರಿಬಸಪ್ಪ ಪರಶೆಟ್ಟಿ ಹರಪನಹಳ್ಳಿ /ಅಶೋಕ ನೀಮಕರ್ ಬಳ್ಳಾರಿ

    ಜನಪ್ರತಿನಿಧಿಗಳ ರಾಜಕೀಯ ದಾಳಕ್ಕೆ ಸಿಲುಕಿ ಹರಪನಹಳ್ಳಿ ತಾಲೂಕು ಫುಟ್ಬಾಲಿನಂತಾಗಿದೆ. ಬಳ್ಳಾರಿ, ದಾವಣಗೆರೆ ಬಳಿಕ ಬಳ್ಳಾರಿ ಜಿಲ್ಲೆಗೆ ಮರು ಸೇರ್ಪಡೆಯಾಗಿದ್ದ ಹರಪನಹಳ್ಳಿ ಇದೀಗ ನೂತನ ವಿಜಯನಗರ ಜಿಲ್ಲೆ ವ್ಯಾಪ್ತಿಗೆ ಒಳಪಡಲಿದೆ. ಪೊ›.ಡಿ.ಎಂ.ನಂಜುಂಡಪ್ಪ ವರದಿಯಂತೆ ಹರಪನಹಳ್ಳಿ ರಾಜ್ಯದ ಅತಿ ಮೂರನೇ ಹಿಂದುಳಿದ ತಾಲೂಕಾಗಿದೆ. ಸ್ವಾತಂತ್ರ್ಯ ಪೂರ್ವದಿಂದಲೂ ಬಳ್ಳಾರಿ ಜಿಲ್ಲೆಯ ಭಾಗವಾಗಿತ್ತು. ಭೌಗೋಳಿಕ ಕಾರಣದಿಂದ ಸ್ಥಳೀಯರ ವಿರೋಧದ ನಡುವೆಯೂ 1997ರಲ್ಲಿ ನೂತನ ದಾವಣಗೆರೆ ಜಿಲ್ಲೆಗೆ ಸೇರ್ಪಡೆ ಮಾಡಲಾಗಿತ್ತು. ದಾವಣಗೆರೆಯನ್ನು ಜಿಲ್ಲೆಯಾಗಿಸಬೇಕೆಂಬ ಅಂದಿನ ಮುಖ್ಯಮಂತ್ರಿ ಜೆ.ಎಚ್.ಪಟೇಲರ ನಿರ್ಧಾರ ಇದಕ್ಕೆ ಪ್ರಮುಖ ಕಾರಣವಾಗಿತ್ತು.

    2013ರಲ್ಲಿ ಸಂವಿಧಾನದ ಕಲಂ 371 (ಜೆ) ತಿದ್ದುಪಡಿ ಮೂಲಕ ಹೈದರಾಬಾದ್ ಕರ್ನಾಟಕದ ಆರು ಜಿಲ್ಲೆಗಳು ವಿಶೇಷ ಸ್ಥಾನಮಾನ ಪಡೆದವು. ಇದರಿಂದಾಗಿ ಕೇವಲ ಎರಡು ದಶಕಗಳ ಹಿಂದೆ ಬಳ್ಳಾರಿ ಜಿಲ್ಲೆಯ ಅವಿಭಾಜ್ಯ ಅಂಗವಾಗಿದ್ದ ಹರಪನಹಳ್ಳಿ ತಾಲೂಕಿಗೂ ವಿಶೇಷ ಸ್ಥಾನಮಾನದ ಸೌಲಭ್ಯ ಕಲ್ಪಿಸಬೇಕೆಂಬ ಒತ್ತಾಯ ಕೇಳಿಬಂತು. ದಾವಣಗೆರೆ ಜಿಲ್ಲೆಯಲ್ಲಿದ್ದ ಕಾರಣಕ್ಕೆ ವಿಶೇಷ ಸ್ಥಾನಮಾನ ಸಾಧ್ಯವಿರಲಿಲ್ಲ. ಶಾಸಕರಾಗಿದ್ದ ಎಂ.ಪಿ.ರವೀಂದ್ರ ಪ್ರಯತ್ನದ ಫಲವಾಗಿ 2018ರಲ್ಲಿ ಬಳ್ಳಾರಿ ಜಿಲ್ಲೆಗೆ ಮರು ಸೇರ್ಪಡೆಯಾಗಿತ್ತು. ಈ ಮೂಲಕ ತಾಲೂಕಿನ ಜನರು ಕಲಂ 371 ಜೆ ವಿಶೇಷ ಸೌಲಭ್ಯಗಳನ್ನು ಪಡೆದುಕೊಂಡಿದ್ದರು. ಇದೀಗ ಎರಡು ವರ್ಷಗಳಲ್ಲೇ ಮತ್ತೆ ರಾಜಕೀಯ ದಾಳಕ್ಕೆ ಸಿಲುಕಿ ನೂತನ ವಿಜಯನಗರ ಜಿಲ್ಲೆಗೆ ಸೇರ್ಪಡೆಯಾಗುತ್ತಿದೆ.

    ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಅಂತಾರಾಜ್ಯ ಜಿಎಸ್​​ಟಿ ನಕಲಿ ಇನ್ವಾಯ್ಸ್ ಜಾಲ ಪತ್ತೆ – ಕರ್ನಾಟಕದಲ್ಲೇ ಇದ್ದಾನಂತೆ ಕಿಂಗ್​ಪಿನ್​ !

    ಹರಪನಹಳ್ಳಿ ಭೌಗೋಳಿಕವಾಗಿ ಬಳ್ಳಾರಿಯಿಂದ ದೂರ ಇದೆ. ನೂತನ ವಿಜಯನಗರ ಜಿಲ್ಲೆಯ ಕೇಂದ್ರಸ್ಥಾನ ಹೊಸಪೇಟೆಯಿಂದಲೂ ದೂರವಾಗಲಿದೆ. ಇದರಿಂದಾಗಿ ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹೂವಿನ ಹಡಗಲಿ ತಾಲೂಕುಗಳನ್ನು ಒಳಗೊಂಡು ಹರಪನಹಳ್ಳಿ ಕೇಂದ್ರವಾಗಿಸಿ ನೂತನ ಜಿಲ್ಲೆ ಘೊಷಿಸಬೇಕೆಂಬ ಬೇಡಿಕೆ ವ್ಯಕ್ತವಾಗುತ್ತಿದೆ. ಹರಪನಹಳ್ಳಿ ಜಿಲ್ಲೆಗಾಗಿ 2019ರ ನವೆಂಬರ್​ನಲ್ಲಿ ಶಾಸಕ ಜಿ.ಕರುಣಾಕರರೆಡ್ಡಿ ನಿಯೋಗವೊಂದನ್ನು ಮುಖ್ಯಮಂತ್ರಿ ಬಳಿ ತೆಗೆದುಕೊಂಡು ಹೋಗಿದ್ದರು. ಆದರೆ, ಮನ್ನಣೆ ಸಿಕ್ಕಿಲ್ಲ. ಇದರಿಂದಾಗಿ ಹರಪನಹಳ್ಳಿ ಅವೈಜ್ಞಾನಿಕ ವಿಭಜನೆಯ ದಾಳಕ್ಕೆ ಸಿಲುಕುತ್ತಿದೆ. ಈ ವಿಚಾರ ತಾಲೂಕಿನ ಜನರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

    ಬೃಹತ್ ಪ್ರಮಾಣದ ನಕಲಿ ನೋಟು – ನಾಲ್ವರ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts