More

    ದಾಂಡೇಲಿ ಬಸ್ ನಿಲ್ದಾಣ ನವೀಕರಣಕ್ಕಾಗಿ ಪ್ರತಿಭಟನೆ

    ದಾಂಡೇಲಿ: ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವನ್ನು ನವೀಕರಣಗೊಳಿಸುವಂತೆ ಆಗ್ರಹಿಸಿ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ದಾಂಡೇಲಿ ಘಟಕದ ವತಿಯಿಂದ ಬುಧವಾರ ಬಸ್ ನಿಲ್ದಾಣದ ಎದುರು ಪ್ರತಿಭಟನೆ ನಡೆಸಲಾಯಿತು.

    ಜಿಲ್ಲೆಯ 11 ತಾಲೂಕುಗಳ ಬಸ್ ನಿಲ್ದಾಣಗಳನ್ನು ನವೀಕರಣ ಮಾಡಲಾಗಿದೆ. ಆದರೆ, ದಾಂಡೇಲಿಯ ನಿಲ್ದಾಣ ಮಾತ್ರ ನವೀಕರಣಗೊಂಡಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

    ಸ್ಥಳೀಯ ಶಾಸಕರು ಹಾಗೂ ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು ಗಮನ ಹರಿಸಿ ನಿಲ್ದಾಣದ ನೆಲ ಮಹಡಿಯಲ್ಲಿ ವಾಹನ ಪಾರ್ಕಿಂಗ್ ಮತ್ತು ಮೇಲ್ಛಾವಣಿಯಲ್ಲಿ ಯಾತ್ರಿ ನಿವಾಸ ನಿರ್ಮಿಸಬೇಕು ಎಂದು ಡಿಪೋ ಮ್ಯಾನೇಜರ್‌ಗೆ ಮನವಿ ಸಲ್ಲಿಸಲಾಯಿತು.

    ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆಗೇರಿಸುವಂತೆ ಜ. 18ರಂದು ಹಾಗೂ ಪ್ರಯಾಣಿಕ ರೈಲು ಆರಂಭಿಸುವಂತೆ ಜ. 19ರಂದು ಬೆಳಗ್ಗೆ 10.30ಕ್ಕೆ ರೈಲು ನಿಲ್ದಾಣ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಆಯೋಗದ ನಿರ್ದೇಶಕ ಫಿರೋಜ್ ಫೀರಜಾದೆ ತಿಳಿಸಿದರು.

    ರವಿ ಸುತಾರ, ರಾಘವೇಂದ್ರ ಗಡಪ್ಪನವರ, ಮಂಜುಳಾ ಕಾಂಬಳೆ, ಕರಣಮ್ಮ, ಶ್ರೀಕಾಂತ ಅಸೂದೆ, ಮುಜಿಬಾ, ಭಾರ್ಗವಿ, ದಾದಾಪೀರ, ಬಲವಂತ ಬೊಮ್ಮನಳ್ಳಿ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts