More

    ಸಿಡಿಪಿಒ ಅಮಾನತಿಗೆ ಆಗ್ರಹಿಸಿ ಪ್ರತಿಭಟನೆ

    ಶಿಗ್ಗಾಂವಿ: ಸರ್ಕಾರದ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಕುಮಾರ ಶೆಟ್ಟಿ ಬಣ) ತಾಲೂಕು ಘಟಕದ ಕಾರ್ಯಕರ್ತರು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಗೆ ಬೀಗ ಹಾಕಿ ಬುಧವಾರ ಪ್ರತಿಭಟನೆ ನಡೆಸಿದರು.

    ಕರವೇ ತಾಲೂಕಾಧ್ಯಕ್ಷ ಮಂಜುನಾಥ ಕಮ್ಮಾರ ಮಾತನಾಡಿ, ‘ಸರ್ಕಾರ 2018-2019ನೇ ಸಾಲಿನಲ್ಲಿ ನಿರ್ವಹಣೆಗಾಗಿ ಪ್ರತಿ ಅಂಗನವಾಡಿ ಕೇಂದ್ರಕ್ಕೆ 3,600 ರೂಪಾಯಿ ಅನುದಾನ ನೀಡಿದೆ. ಅದನ್ನು ಯಾವುದಕ್ಕೂ ಬಳಸದಂತೆ ಅಂಗನವಾಡಿ ಮೇಲ್ವಿಚಾರಕಿಯರ ಮೂಲಕ ಕಾರ್ಯಕರ್ತೆಯರಿಗೆ ಸಿಡಿಪಿಒ ಒತ್ತಡ ಹಾಕಿದ್ದಾರೆ. ಚಿತ್ರದುರ್ಗದ ಕಲ್ಮೇಶ್ವರ ಎಂಟರ್​ಪ್ರೈಸಸ್ ಮೂಲಕ ಅಂಗನವಾಡಿ ಕೇಂದ್ರದಲ್ಲಿ ಒಂದು ಚಿತ್ರ ಬಿಡಿಸಲು ಸೂಚಿಸಿದ್ದಾರೆ. ಬಳಕೆಯಾಗದ ಅನುದಾನವನ್ನು ಅವರಿಗೆ ಕೊಡಲು ಹೇಳಿದ್ದಾರೆ. ಆದ್ದರಿಂದ ಕೂಡಲೆ ಸಿಡಿಪಿಒ ನೀತಾ ವಾಡಕರ ಅವರನ್ನು ಅಮಾನತುಗೊಳಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

    ಸ್ಥಳಕ್ಕೆ ಆಗಮಿಸಿದ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪ್ರಶಾಂತ ತುರುಕಾಣಿ, ಮನವಿ ಸ್ವೀಕರಿಸಿ, ಈ ಕುರಿತು ಸೂಕ್ತ ತನಿಖೆ ಕೈಗೊಂಡು ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.

    8 ದಿನಗಳಲ್ಲಿ ಸೂಕ್ತ ಮಾಹಿತಿಯನ್ನು ಅರ್ಜಿದಾರರಿಗೆ ನೀಡಲು ಸಿಡಿಪಿಒಗೆ ಆದೇಶಿಸಿದರು. ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

    ತಾಲೂಕು ಗೌರವ ಅಧ್ಯಕ್ಷ ಬಸವರಾಜ ವಾಲೀಕಾರ, ಜಿಲ್ಲಾಧ್ಯಕ್ಷ ಮಂಜುನಾಥ ಓಲೇಕಾರ, ಮಹಿಳಾ ಘಟಕದ ಅಧ್ಯಕ್ಷೆ ಸಂತೋಷಿ ಬಡಿಗೇರ, ಪದಾಧಿಕಾರಿಗಳಾದ ದ್ಯಾಮಣ್ಣ ಮಲ್ಲಾಡದ, ಮಂಜು ಜವಳಗಟ್ಟಿ, ಸತೀಶ ಭಜಂತ್ರಿ, ರವಿ ಬಂಡಿವಡ್ಡರ, ಸುರೇಶ ಲಚಮಣ್ಣನವರ, ಶಂಭನಗೌಡ ಪಾಟೀಲ, ನವೀನಕುಮಾರ ಕಿವುಡನವರ, ಗುಡ್ಡಪ್ಪ ಮ್ಯಾಗಿನಮನಿ, ಮಹಾಂತೇಶ ಉಪ್ಪಣಶಿ, ವೀರಬಸು ಭಂಗಿ, ರವಿ ಬಳ್ಳಾರಿ, ಮಂಜುನಾಥ ಹೊಣ್ಣಣ್ಣನವರ, ಸಂಗಪ್ಪ ಮಲ್ಲೂರ, ಪ್ರಕಾಶ ಉಪ್ಪಾರ, ಗುಡ್ಡಪ್ಪ ತಿಮ್ಮಾಪುರ, ನವೀನ ದಡ್ಡೂರ, ಬಸವರಾಜ ಸಂಶಿ, ಮಹೇಶ ಭಂಗಿ, ವೀರಣ್ಣ ಕಿವುಡನವರ, ಕುಮಾರ ಹಳವುರ, ಪ್ರವೀಣ ಕಮ್ಮಾರ, ಮಲ್ಲಪ್ಪ ತಿಮ್ಮಾಪುರ, ಮಲ್ಲಪ್ಪ ಮರೆಣ್ಣನವರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts