More

    ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲು ಆಗ್ರಹಿಸಿ ಪ್ರತಿಭಟನೆ

    ಶಿವಮೊಗ್ಗ: ಮನೆಗೆಲಸ ಮಾಡಿ ಬದುಕು ಕಟ್ಟಿಕೊಳ್ಳುತ್ತಿರುವ ನೋಂದಾಯಿತ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ ಮತ್ತು ನೋಂದಾಯಿತ ಗೃಹ ಕಾರ್ಮಿಕರಿಗೆ 5 ಲಕ್ಷ ರೂ. ಅಪಘಾತ ವಿಮೆ ನೀಡಬೇಕೆಂದು ಆಗ್ರಹಿಸಿ ಶುಕ್ರವಾರ ರಾಜ್ಯ ಅಸಂಘಟಿತ ಕಾರ್ಮಿಕರ ಸಂಘದ ಪದಾಧಿಕಾರಿಗಳು ವಿನೋಬನಗರದ ಕಾರ್ಮಿಕ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

    ಮನೆಗೆಲಸ ಮಾಡುತ್ತಿರುವ ಕಾರ್ಮಿಕರು ಅತ್ಯಂತ ಕಷ್ಟಕರವಾದ ಸನ್ನಿವೇಶಗಳಲ್ಲಿ ಬದುಕುತ್ತಿದ್ದಾರೆ. ಈ ಕಾರ್ಮಿಕರಿಗೆ ಸರ್ಕಾರದ ಯಾವುದೇ ಮೂಲಸೌಕರ್ಯ ಇಲ್ಲ ಹಾಗೂ ಅವರನ್ನು ಮುಖ್ಯವಾಹಿನಿಗೆ ಸೇರಿಸಿಲ್ಲ ಎಂದು ಕಿಡಿಕಾರಿದರು.
    ಅಸಂಘಟಿತ ಕಾರ್ಮಿಕರ 11 ವಲಯಗಳಲ್ಲಿ ಒಂದಾದ ಗೃಹ ಕಾರ್ಮಿಕರಿಗೆ ಇಲ್ಲಿವರೆಗೂ ಯಾವುದೇ ಸೌಕರ್ಯ ನೀಡದೇ ಕಡೆಗಣಿಸಲಾಗಿದೆ. ಹಾಗಾಗಿ ಸರ್ಕಾರ ಗೃಹ ಕಾರ್ಮಿಕರ ಗಣತಿ ಕಾರ್ಯ ರಾಜ್ಯದಲ್ಲಿ ನಡೆಸಿ ಅಪಘಾತ ವಿಮೆ ಸೌಲಭ್ಯ ನೀಡಬೇಕು. ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವವರಿಗೆ ನಿವೇಶನಗಳನ್ನು ಹಂಚುವಾಗ ಪ್ರತ್ಯೇಕವಾಗಿ ಪರಿಗಣಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
    ಸಂಘದ ಗೌರವಾಧ್ಯಕ್ಷ ಕುಪ್ಪೇಂದ್ರ ಆಯನೂರು, ಅಧ್ಯಕ್ಷ ಪ್ರದೀಪ್ ಹೊನ್ನಪ್ಪ, ಪ್ರಮುಖರಾದ ಸುರೇಖಾ ಪಾಲಾಕ್ಷಪ್ಪ, ಮೇಘ ಮೋಹನ್ ಜೆಟ್ಟಿ, ಚೇತನ್‌ಲಕ್ಕಪ್ಪ, ಪ್ರಕಾಶ್, ಚಂದ್ರಶೇಖರ್, ಅಶ್ವಿನಿ, ರವಿ, ಲತಾ, ನೂರುಲ್ಲಾ, ರಂಗನಾಥ್ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts