More

    ಬೀದಿ ಬದಿ ವ್ಯಾಪಾರಸ್ಥರಿಂದ ಪ್ರತಿಭಟನೆ

    ಇಳಕಲ್ಲ(ಗ್ರಾ): ಇಲ್ಲಿನ ನಗರಸಭೆ ವತಿಯಿಂದ ಕಂಠಿ ವೃತ್ತ ಬಳಿ ಕಿತ್ತೂರು ಚನ್ನಮ್ಮ ಉದ್ಯಾನ ಪಕ್ಕದಲ್ಲಿ ಹಚ್ಚುತ್ತಿದ್ದ ಎಗ್ಗರೈಸ್ ಒತ್ತುಗಾಡಿಗಳಿಗೆ ಯಾವುದೇ ನೊಟೀಸ್ ನೀಡದೆ ಏಕಾಏಕಿ ಎತ್ತಂಗಡಿ ಮಾಡಿದ್ದನ್ನು ವಿರೋಧಿಸಿ ಬೀದಿ ಬದಿ ವ್ಯಾಪಾರಸ್ಥರು ಗುರುವಾರ ನಗರಸಭೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

    ಇಳಕಲ್ಲ ತಾಲೂಕು ಬೀದಿ ಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಪವಾಡೆಪ್ಪ ಚಲವಾದಿ, ಮಾಜಿ ಜಿಲ್ಲಾಧ್ಯಕ್ಷ ರಿಯಾಜ್ ಮಕಾನದಾರ ನೇತೃತ್ವದಲ್ಲಿ ನೂರಾರು ವ್ಯಾಪಾರಸ್ಥರು ನಗರಸಭೆ ಮುಂದಿನ ರಸ್ತೆಯಲ್ಲಿ ಕುಳಿತು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.

    ಕಿತ್ತೂರು ಚನ್ನಮ್ಮ ಉದ್ಯಾನ ಪಕ್ಕದಲ್ಲಿ ಮೊದಲಿನಂತೆ ಅಂಗಡಿಗಳನ್ನು ಹಚ್ಚಲು ಅವಕಾಶ ಮಾಡದಿದ್ದಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುವುದೆಂದು ಪ್ರತಿಭಟನಾಕಾರರು ಎಚ್ಚರಿಸಿದರು.

    ನಂತರ ಶಾಸಕರ ಸಹೋದರ, ನಗರಸಭೆ ಮಾಜಿ ಅಧ್ಯಕ್ಷ ದೇವಾನಂದ ಕಾಶಪ್ಪನವರ ಎದುರು ಪ್ರತಿಭಟನಾಕಾರರು ತಮ್ಮ ಸಮಸ್ಯೆ ವಿವರಿಸಿದಾಗ ಅವರೂ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಪೌರಾಯುಕ್ತರಿಗೆ ಪರಿಸ್ಥಿತಿ ತಿಳಿಸಿದರು.

    ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಮಾತನಾಡಿದ ಪೌರಾಯುಕ್ತ ಶ್ರೀನಿವಾಸ ಜಾಧವ, ಮೊದಲಿನ ಸ್ಥಳದಲ್ಲೇ ಅಂಗಡಿಗಳನ್ನು ಇಟ್ಟುಕೊಳ್ಳಲು ತಿಳಿಸಿದರಲ್ಲದೆ, ಆ ಜಾಗದಲ್ಲಿ ಸ್ವಚ್ಛತೆ ಕಾಪಾಡಬೇಕು. ನಗರಸಭೆ ಟ್ರಾೃಕ್ಟರ್‌ಗಳಲ್ಲಿ ತ್ಯಾಜ್ಯ ಹಾಕಲು ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts