More

    ನಾರಾಯಣಗೌಡ ಬಂಧನಕ್ಕೆಆಕ್ರೋಶ

    ಸೇಡಂ:ರಾಜ್ಯದ ರಾಜದಾನಿ ಬೆಂಗಳೂರಿನಲ್ಲಿ ವ್ಯವಹಾರ, ವ್ಯಾಪಾರ ನಡೆಸುವ ಅನ್ಯ ರಾಜ್ಯದವರಿಗೆ ಕನ್ನಡ ಭಾಷೆ ಬಳಸುವ ನಿಟ್ಟಿನಲ್ಲಿ ಚುರುಕು ಮುಟ್ಟಿಸಲು ಹೋರಾಟ ನಡೆಸಿದ ಕರವೇ ರಾಜ್ಯಾಧ್ಯಕ್ಷ ಎ.ಟಿ.ನಾರಾಯಣಗೌಡ ಸೇರಿ ಕನ್ನಡಪರ ಹೋರಾಟಗಾರರನ್ನು ಬಂಧಿಸಿರುವ ಸರ್ಕಾರದ ಕ್ರಮ ಖಂಡನೀಯವಾಗಿದೆ ಎಂದು ಕರವೇ(ನಾರಾಯಣಗೌಡ)ಬಣದ ಜಿಲ್ಲಾಧ್ಯಕ್ಷ ಪುನೀತರಾಜ್ ಕಿವಡೆ ಹೇಳಿದರು.

    ಕನ್ನಡಪರ ಹೋರಾಟಗಾರರನ್ನು ಬಂಧಿಸಿರುವುದನ್ನು ಖಂಡಿಸಿ ಮಂಗಳವಾರ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಅವರು ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ, ನಮ್ಮ ನಾಡಿನ ನೆಲ, ಜಲ ಬಳಸುವ ಹೊರ ರಾಜ್ಯದ ವ್ಯಾಪಾರಿಗಳು ನಮ್ಮ ಭಾಷೆಯಲ್ಲಿ ನಾಮಫಲಕ ಹಾಕಲು ತಯಾರಿಲ್ಲ. ಆಂಗ್ಲ ಮತ್ತು ಹಿಂದಿ ಭಾಷೆಯೇ ಪ್ರಧಾನವಾಗಿಟ್ಟುಕೊಂಡು ಅವರು ಬದುಕು ನಡೆಸುತ್ತಾರೆ. ಹಾಗಾಗಿ ಕನ್ನಡ ನಾಡಿನಲ್ಲಿ ಕನ್ನಡ ಭಾಷೆಗೆ ಮೊದಲ ಸ್ಥಾನ ಸಿಗಬೇಕು ಎನ್ನುವ ಹೋರಾಟ ಹತ್ತಿಕ್ಕಲು ಸರ್ಕಾರ ಮುಂದಾಗುತ್ತಿರುವುದು ವಿಷಾದನೀಯ. ಹಾಗಾಗಿ ಈ ಕೂಡಲೇ ಬಂಧಿಸಿರುವ ಕನ್ನಡಪರ ಹೋರಾಟಗಾರರನ್ನು ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ರಾಜ್ಯದಲ್ಲಿ ಮುಂದಾಗುವ ಅನಾಹುತಕ್ಕೆ ಸರ್ಕಾರವೇ ನೇರ ಹೊಣೆಯಾಗಲಿದೆ ಎಂದು ಎಚ್ಚರಿಸಿದರು.

    ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವಿಂದ್ರ ಮಯೂರ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಿರ್ಮಲಾ ತಳವಾರ, ತಾಲೂಕು ಅಧ್ಯಕ್ಷ ಅಂಬರೀಶ ಊಡಗಿ, ಶೇಖ್ ಇಲಿಯಾಸ್ ಪಟೇಲ್, ಅನೀಲ ಹಳಿಮನಿ, ಶ್ರೀಕಾಂತ ಪಾಟೀಲ್, ವೀರೇಶ ಕಾಳಗಿ, ಲಾಲಪ್ಪ ಮದನಾ, ವಿಠ್ಠಲ್ ಪೂಜಾರಿ, ಚಂದ್ರು ಹಡಪದ, ಹಣಮಂತ ಹೊಕ್ಕಳ, ಶಬ್ಬೀರ್, ಆನಂದ, ಚೇತನ್ ಹಾಬಾಳ, ಹರ್ಷವರ್ಧನ ರೆಡ್ಡಿ, ಶ್ರೀಶೈಲ ನೀಲಿ, ಶಾಮ ನಿಡಗುಂದಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts