More

    ಲೋಡ್ ಶೆಡ್ಡಿಂಗ್ ವಿರೋಧಿಸಿ ಪ್ರತಿಭಟನೆ

    ಗುಂಡ್ಲುಪೇಟೆ : ಅನಿಯಮಿತ ಲೋಡ್ ಶೆಡ್ಡಿಂಗ್‌ನಿಂದ ಬೇಸತ್ತ ರೈತರು ವಿದ್ಯುತ್ ಪ್ರಸರಣಾ ಕೇಂದ್ರಗಳಿಗೆ ಮುತ್ತಿಗೆಹಾಕಿ ಶನಿವಾರ ಪ್ರತಿಭಟನೆ ನಡೆಸಿದರು.
    ತಾಲೂಕಿನ ಕಸಬಾ ಹಾಗೂ ಹಂಗಳ ಹೋಬಳಿಯ ರೈತರು ಪಟ್ಟಣದ ಮೈಸೂರು ರಸ್ತೆಯ ವಿದ್ಯುತ್ ಪ್ರಸರಣಾ ಕೇಂದ್ರ, ಕೊಡಸೋಗೆ, ದೇಪಾಪುರ, ಶೀಲವಂತಪುರ, ಸೋಮನಪುರ ಗ್ರಾಮಗಳ ರೈತರು ತೆರಕಣಾಂಬಿ ಕೇಂದ್ರಕ್ಕೆ ಮುತ್ತಿಗೆಹಾಕಿ ಪ್ರತ್ರಿಭಟನೆ ನಡೆಸಿದರು.

    ಪ್ರತಿ ದಿನವೂ ಏಳುಗಂಟೆ ತ್ರಿ ಫೇಸ್ ವಿದ್ಯುತ್ ಸರಬರಾಜು ಮಾಡಬೇಕಾಗಿದ್ದರೂ ಕೇವಲ ಒಂದೂವರೆ – ಎರಡು ಗಂಟೆಗಳ ಕಾಲ ನೀಡುತ್ತಿದ್ದಾರೆ. ಇದರಿಂದ ರೈತರು ಬೆಳೆದ ಬೆಳೆಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ ಫ್ಯಾಕ್ಟರಿಗಳಿಗೆ ಮಾತ್ರ ನಿರಂತರ ಜ್ಯೋತಿ ಮಾರ್ಗದಲ್ಲಿ ನೀಡುತ್ತಿದ್ದಾರೆ ಎಂದು ಸೆಸ್ಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಸರ್ಕಾರದ ನಿಯಮದಂತೆ ಪ್ರತಿ ದಿನವೂ 7 ಗಂಟೆ ವಿದ್ಯುತ್ ಸರಬರಾಜು ಬೇಕೇ ಬೇಕು ಎಂದು ಒತ್ತಾಯಿಸಿ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಆಗಮಿಸಿ ಸಮಸ್ಯೆಗೆ ಪರಿಹಾರ ನೀಡುವಂತೆ ಪಟ್ಟುಹಿಡಿದರು. ಸೆಸ್ಕ್ ಇಇ ವಸಂತಕುಮಾರ್ ಸ್ಥಳಕ್ಕೆ ಆಗಮಿಸಿದರೂ ರೈತರ ಆಕ್ರೋಶ ಎದುರಿಸಬೇಕಾಯಿತು. ಸರ್ಕಾರ ಎಷ್ಟೇ ಹಣ ಕೊಟ್ಟಾದರೂ ವಿದ್ಯುತ್ ಖರೀದಿಸುವಂತೆ ಸೂಚನೆ ನೀಡಿದ್ದರಿಂದ ಗುಜರಾತ್ ಹಾಗೂ ಉತ್ತರದ ರಾಜ್ಯಗಳಲ್ಲಿ ವಿದ್ಯುತ್ ಖರೀದಿಗೆ ಪ್ರಯತ್ನ ನಡೆಸಲಾಗಿದೆ. ಹಿರಿಯ ಅಧಿಕಾರಿಗಳು ನಾನಾ ರಾಜ್ಯಗಳಿಗೆ ಭೇಟಿ ನೀಡಿ ಮಾತುಕತೆ ನಡೆಸುತ್ತಿದ್ದಾರೆ. ಒಪ್ಪಂದ ಪೂರ್ಣಗೊಂಡ ಕೂಡಲೇ ಹಿಂದಿನಂತೆ 7 ಗಂಟೆ ಸರಬರಾಜು ಮಾಡಲಾಗುವುದು. ಅಲ್ಲಿಯವರೆಗೆ ಕೇವಲ 4 ಗಂಟೆ ಮಾತ್ರ ಪೂರೈಕೆ ಮಾಡಲಾಗುತ್ತದೆ ಎಂದು ಮನವರಿಕೆ ಮಾಡಿರು. ಆದರೂ ಇದಕ್ಕೆ ಒಪ್ಪದ ರೈತರು ಕೊನೆಗೆ ಒಂದು ವಾರದವರೆಗೆ 5 ಗಂಟೆ ವಿದ್ಯುತ್ ಸರಬರಾಜು ಮಾಡಲು ಒಪ್ಪಿಗೆ ನೀಡಿದರು.

    ಅರಿಶಿಣ ಬೆಳೆಗಾರರ ಒಕ್ಕೂಟದ ನಾಗಾರ್ಜುನ ಕುಮಾರ್, ವೀರನಪುರ ಗುರು, ನಾಗಪ್ಪ ಸೇರಿದಂತೆ ಹಲವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts