More

    ಸಂಚಾರ ತಡೆದು ದಿಢೀರ್ ಪ್ರತಿಭಟನೆ

    ಗುತ್ತಲ: ಮೈಲಾರ ಹಾಗೂ ಕುರವತ್ತಿ ಜಾತ್ರೆಯಲ್ಲಿ ಪಾಲ್ಗೊಳ್ಳಲು ಎಲ್ಲರಿಗೂ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಪಟ್ಟಣದಲ್ಲಿ ಶನಿವಾರ ದಿಢೀರ್ ಸಂಚಾರ ತಡೆದು ಪ್ರತಿಭಟನೆ ನಡೆಸಲಾಯಿತು.

    ಕರೊನಾ ನೆಪವೊಡ್ಡಿ ಐತಿಹಾಸಿಕ ಮೈಲಾರಲಿಂಗೇಶ್ವರನ ಜಾತ್ರೆಯಲ್ಲಿ ಪಾಲ್ಗೊಳುವುದಕ್ಕೆ ಬಳ್ಳಾರಿ ಜಿಲ್ಲಾಧಿಕಾರಿ ನಿರ್ಬಂಧ ಹೇರಿದ್ದು ಸರಿಯಲ್ಲ. ಭಕ್ತರ ಧಾರ್ವಿುಕ ಭಾವನೆಗಳನ್ನು ಜಿಲ್ಲಾಧಿಕಾರಿ ಅರ್ಥ ಮಾಡಿಕೊಳ್ಳಬೇಕು. ನಿರ್ಬಂಧದಿಂದ ನಮ್ಮ ಸಂಪ್ರದಾಯದ ಪೂಜೆಗಳಿಗೆ ತೊಂದರೆಯಾಗಿದೆ. ದೇವರಿಗೆ ಹರಕೆ ಹೊತ್ತುಕೊಂಡ ಲಕ್ಷಾಂತರ ಭಕ್ತರಿಗೆ ವಚನ ತಪ್ಪುವ ಭಯ ಕಾಡುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

    ಬಳ್ಳಾರಿ ಜಿಲ್ಲಾಧಿಕಾರಿ ತಮ್ಮ ಆದೇಶ ಹಿಂಪಡೆಯಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದರು.

    ಪ್ರತಿಭಟನೆಯಲ್ಲಿ ಏಳು ಕೋಟಿ ಏಳು ಕೋಟಿ….ಚಾಂಗಮಲೋ ಹಾಗೂ ಹರ ಹರ ಮಹದೇವ ಎಂಬ ಘೊಷಗಳು ಕೇಳಿಬಂದವು.

    ಪ್ರತಿಭಟನೆಗೂ ಮುನ್ನ ಪಟ್ಟಣದ ಪ್ರವಾಸಿ ಮಂದಿರಲ್ಲಿ ಸಭೆ ಸೇರಿದ್ದ ಜನರು, ಇಂದೇ ಹೋರಾಟ ಮಾಡೋಣ. ಆದೇಶ ಹಿಂದೆ ಪಡೆಯಲು ಸರ್ಕಾರಕ್ಕೆ ಒತ್ತಡ ಹೇರಬೇಕು ಎಂದು ನಿರ್ಧರಿಸಿ, ಪಾದಯಾತ್ರೆ ಮೂಲಕ ಪಟ್ಟಣದ ಬಸ್ ನಿಲ್ದಾಣದ ಬಳಿಯ ರುದ್ರಮುನಿ ಶಿವಯೋಗೀಶ್ವರ ವೃತ್ತಕ್ಕೆ ಆಗಮಿಸಿ ಮಾನವ ಸರಪಳಿ ನಿರ್ವಿುಸಿ ಪ್ರತಿಭಟನೆ ನಡೆಸಿದರು.

    ನಂತರ ಸ್ಥಳಕ್ಕೆ ಆಗಮಿಸಿದ ಕಂದಾಯ ನಿರೀಕ್ಷ ಆರ್.ಎನ್. ಮಲ್ಲಾಡದ ಅವರಿಗೆ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗೆ ಬರೆದಿದ್ದ ಮನವಿ ಸಲ್ಲಿಸಿದರು.

    ಪ್ರತಿಭಟನೆಯಲ್ಲಿ ಜಿಲ್ಲಾ ಬಂಜಾರ ಸಂಘದ ಅಧ್ಯಕ್ಷ ಈರಪ್ಪ ಲಮಾಣಿ, ಡಿಎಸ್​ಎಸ್ ಮುಖಂಡ ಸಂಜಯಗಾಂಧಿ ಸಂಜೀವಣ್ಣನವರ, ನೆಗಳೂರ ಎಪಿಎಂಸಿ ನಿರ್ದೇಶಕ ಕೃಷ್ಣರಡ್ಡಿ ಮೈದೂರ, ಜಿಪಂ ಮಾಜಿ ಸದಸ್ಯ ಸಿ.ಬಿ. ಕುರವತ್ತಿಗೌಡರ, ತಾ.ಪಂ. ಮಾಜಿ ಅಧ್ಯಕ್ಷ ಪರಮೇಶಪ್ಪ ಕುರವತ್ತಿಗೌಡರ, ಪಪಂ ಸದಸ್ಯರಾದ ನಾಗರಾಜ ಎರಿಮನಿ, ಕೋಟೆಪ್ಪ ಬನ್ನಿಮಟ್ಟಿ, ಆಶ್ರಯ ಸಮಿತಿ ಮಾಜಿ ಅಧ್ಯಕ್ಷ ಶಹಜಾನಸಾಬ ಅಗಡಿ, ಆಶ್ರಯ ಸಮಿತಿ ಮಾಜಿ ಸದಸ್ಯ ರಾಮಣ್ಣ ಅಳವಂಡಿ, ಕರ್ಜಗಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅಜಯ ಬಂಡಿವಡ್ಡರ, ಹರ ಸೊಸೈಟಿ ನಿರ್ದೇಶಕ ಮಾಲತೇಶ ಬನ್ನಿಮಟ್ಟಿ, ಜಿಲ್ಲಾ ಭೋವಿ ಸಮಾಜದ ಮುಖಂಡ ಶಿವಣ್ಣ ಬಂಡಿವಡ್ಡರ, ಅಂಜುಮನ್ ಕಮಿಟಿ ಮಾಜಿ ಅಧ್ಯಕ್ಷ ಮಹ್ಮದಹನೀಫ ರಿತ್ತಿ, ಯುವ ಕಾಂಗ್ರೆಸ್ ಮುಖಂಡ ಹನುಮಂತ ಅಗಿಸಿಬಾಗಿಲದ, ಕರವೇ ತಾಲೂಕಾ ಅಧ್ಯಕ್ಷ ಹಾಲೇಶ ಹಾಲಣ್ಣನವರ, ಗುತ್ತಲ ಘಟಕದ ಅಧ್ಯಕ್ಷ ಚನ್ನಪ್ಪ ಹೊನ್ನಮ್ಮನವರ, ಕರವೇ ಯುವ ಘಟಕದ ಅಧ್ಯಕ್ಷ ಫಕೃದ್ದೀನ ಅಂಗಡಿಕಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts