More

    ವೈನ್‌ಮರ್ಚಂಟ್ಸ್ ಸಂಘದಿಂದ ಅಬಕಾರಿ ಉದ್ಯಮ ಉಳಿಸಿ ಪ್ರತಿಭಟನೆ

    ಉಡುಪಿ: ಗ್ರಾಮೀಣ ಭಾಗದಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ, ಮಿಲಿಟರಿ ಸ್ಟೋರ್‌ನಲ್ಲಿ ನಕಲಿ ಮದ್ಯ ಮಾರಾಟ ಜಾಲ, ಆನ್‌ಲೈನ್ ಮದ್ಯ ಮಾರಾಟ ಪ್ರಸ್ತಾವ, ಅಬಕಾರಿ ಇಲಾಖೆ ಅಧಿಕಾರಿ ಲಂಚ ವಸೂಲಿ ವಿರೋಧಿಸಿ ಜಿಲ್ಲಾ ವೈನ್ ಮರ್ಚಂಟ್ಸ್ ಅಸೋಸಿಯೇಶನ್ ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ‘ಅಬಕಾರಿ ಉದ್ಯಮ ಉಳಿಸಿ’ ಪ್ರತೀಭಟನೆ ನಡೆಸಿದರು.

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವೈನ್ ಮರ್ಚಂಟ್ಸ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್ ಹೆಗ್ಡೆ, ಅಬಕಾರಿ ಅಧಿಕಾರಿಗಳು ವಸೂಲಿಗಾಗಿ ಸಾಕಷ್ಟು ಸಮಸ್ಯೆ ಮಾಡುತ್ತಿದ್ದಾರೆ. ಅಧಿಕಾರಿಗಳ ಬೇನಾಮಿ ಆಸ್ತಿಗಳ ಬಗ್ಗೆ ನಿವೃತ್ತ ನ್ಯಾಯಧೀಶರಿಂದ ತನಿಖೆ ನಡೆಸಬೇಕು. ಪೊಲೀಸ್ ಇಲಾಖೆ ಅನಗತ್ಯ ಹಸ್ತಕ್ಷೇಪ ನಿಲ್ಲಬೇಕು ಎಂದರು.

    ಆನ್ಲೈನ್ ಮದ್ಯ ಮಾರಾಟ ಪ್ರಸ್ತಾವ ಕೈಬಿಡುವ ಬಗ್ಗೆ ಅಧಿಕೃತ ಘೋಷಣೆ ಮಾಡಬೇಕು. 2009ರಲ್ಲಿ ರಾಜ್ಯದಲ್ಲಿ ಅನುಕ್ರಮವಾಗಿ 463, 900 ಎಂಎಸ್‌ಐಎಲ್ ಮದ್ಯದಂಗಡಿಗಳನ್ನು ಮಂಜೂರು ಮಾಡಲಾಗಿದ್ದು, ಕೋಟ ನಿಗದಿಪಡಿಸದೆ ಹೊಸ ಅಂಗಡಿ ನೀಡಿರುವುದು ಸರಿಯಲ್ಲ, ಕೂಡಲೇ ಎಂಎಸ್‌ಐಎಲ್ ಅಂಗಡಿ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು. ಲಾಕ್‌ಡೌನ್ ನಷ್ಟ ಪರಿಹಾರ ನೀಡಲು ಒಕ್ಕೂಟದ ವತಿಯಿಂದ ಸರ್ಕಾರಕ್ಕೆ ಮನವಿ ನೀಡಿದ್ದು, ಸರ್ಕಾರ ಈವರೆಗೆ ಸ್ಪಂದಿಸಿಲ್ಲ ಎಂದರು.

    ಮಿಲಿಟರಿ ಕ್ಯಾಂಟೀನ್, ಸ್ಟೋರ್‌ನಲ್ಲಿ ನಕಲಿ ಮದ್ಯ: ಮಿಲಿಟರಿ ಕ್ಯಾಂಟಿನ್ ಸ್ಟೋರ್‌ಗಳಲ್ಲಿ ಡ್ಯೂಟಿ ಫ್ರೀ ಹೆಸರಲ್ಲಿ ಸರಬರಾಜು ಆಗುತ್ತಿರುವ ಮದ್ಯದಿಂದ ರಾಜ್ಯದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿದೆ. ಅಲ್ಲದೆ ನಮ್ಮ ವ್ಯಪಾರಕ್ಕು ಹೊಡೆತ ಬಿದ್ದಿದೆ. ಮಹಾರಾಷ್ಟ್ರ, ತಮಿಳುನಾಡಿನಿಂದ ಅಕ್ರಮ ಮದ್ಯಗಳನ್ನು ತಂದು ಮಿಲಿಟರಿ ಸ್ಟೋರ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ. ಇದೂ ಒರಿಜಿನಲ್ ಮದ್ಯದ ರೀತಿಯಲ್ಲಿ ಕಾಣುತ್ತದೆ. ಆದರೆ ಇದು ಸಂಪೂರ್ಣ ನಕಲಿಯಾಗಿದ್ದು, ಇದರ ಹಿಂದೆ ದೊಡ್ಡ ಜಾಲವೆ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. ಗ್ರಾಮೀಣ ಭಾಗದ ಗೂಡಂಗಡಿ, ಮಾಂಸಾಹಾರಿ ಹೋಟೆಲ್‌ಗಳಲ್ಲಿ ಅಕ್ರಮ ಮದ್ಯ ಮಾರಾಟದ ವಿರುದ್ಧ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ವೈನ್‌ಮರ್ಚಂಟ್ಸ್ ಅಸೋಸಿಯೇಶನ್ ಮುಖಂಡರಾದ ಮಿಥುನ್ ಹೆಗ್ಡೆ, ಜನಾರ್ಧನ ಪೂಜಾರಿ, ಮನೋಹರ್ ಶೆಟ್ಟಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts