More

    ನೀರು ಪೋಲಾಗದಂತೆ ಸಂರಕ್ಷಿಸಿ

    ರಟ್ಟಿಹಳ್ಳಿ: ಅತ್ಯಮೂಲ್ಯವಾಗಿರುವ ನೀರನ್ನು ಅವಶ್ಯಕತೆಗೆ ತಕ್ಕಂತೆ ಬಳಸುವುದರೊಂದಿಗೆ ಪೋಲಾಗದಂತೆ ಸಂರಕ್ಷಿಸಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

    ತಾಲೂಕಿನ ಗಲಗಿನಕಟ್ಟಿ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ ವತಿಯಿಂದ ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗಳಿಗೆ ನಳ ಸಂಪರ್ಕ ಕಲ್ಪಿಸುವ 15 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.

    ತಾಲೂಕಿನ ಗಲಗಿನಕಟ್ಟಿ, ಚಟ್ನಳ್ಳಿ ಗ್ರಾಮದಲ್ಲಿ 21 ಲಕ್ಷ ರೂ. ವೆಚ್ಚದಲ್ಲಿ ಮತ್ತು ಪುರದಕೇರಿಯಲ್ಲಿ 26 ಲಕ್ಷ ರೂ. ವೆಚ್ಚದಲ್ಲಿ ಮೊದಲ ಹಂತವಾಗಿ ಮನೆಮನೆಗಳಿಗೆ ನಳ ಸಂಪರ್ಕ ಯೋಜನೆ ಕಾರ್ಯಗತಗೊಳಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹಂತಹಂತವಾಗಿ ವಿವಿಧ ಗ್ರಾಮಗಳಲ್ಲಿ ಈ ಯೋಜನೆ ವಿಸ್ತರಿಸಲಾಗುವುದು ಎಂದು ಭರವಸೆ ನೀಡಿದರು.

    ಚಿಕ್ಕಕಬ್ಬಾರ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ 12 ಲಕ್ಷ ರೂ. ವೆಚ್ಚದಲ್ಲಿ ನಿರ್ವಣವಾದ ಅಂಬೇಡ್ಕರ್ ಭವನ ಉದ್ಘಾಟನೆ, ಲೋಕೋಪಯೋಗಿ ಇಲಾಖೆ ವತಿಯಿಂದ 10 ಲಕ್ಷ ರೂ. ವೆಚ್ಚದಲ್ಲಿ ಸಿ.ಸಿ. ರಸ್ತೆ ಕಾಮಗಾರಿ, ಕಮಲಾಪುರ ಗ್ರಾಮದಲ್ಲಿ ಕರ್ನಾಟಕ ನೀರಾವರಿ ನಿಗಮದಿಂದ 5 ಲಕ್ಷ ರೂ. ವೆಚ್ಚದಲ್ಲಿ ಬೀರಲಿಂಗೇಶ್ವರ ಸಭಾಭವನ, ಚಟ್ನಳ್ಳಿ ಗ್ರಾಮದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಆಂಜನೇಯ ದೇವಸ್ಥಾನ ಸಭಾಭವನ ನಿರ್ವಣದ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.

    ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ ಮಾತನಾಡಿದರು. ತಾಪಂ ಅಧ್ಯಕ್ಷ ಬಂಗಾರಪ್ಪ ಇಕ್ಕೇರಿ, ಉಪಾಧ್ಯಕ್ಷೆ ಸುಜಾತ ಕೊಟಗಿಮನಿ, ಸದಸ್ಯ ಮಹೇಶ ಗುಬ್ಬಿ, ಹಿರೇಕಬ್ಬಾರ ಗ್ರಾಪಂ ಅಧ್ಯಕ್ಷೆ ಗೀತಾ ಅಂಚಿ, ಉಪಾಧ್ಯಕ್ಷೆ ಲಕ್ಷ್ಮೀ ಪತ್ತೇಪುರ, ವಸಂತಗೌಡ ಪಾಟೀಲ, ರಮೇಶ ಹಿರೇಕಬ್ಬಾರ, ಸಹಾಯಕ ಇಂಝಿನಿಯರ್ ವಿ.ಎ. ಸಿದ್ದೇಶ್ವರ, ಗ್ರಾಮೀಣ ಕುಡಿಯುವ ನೀರು ವಿಭಾಗ ಸಹಾಯಕ ಇಂಜಿನಿಯರ್ ವಿಷ್ಣುಕಾಂತ ಜಂಜೇರ, ಗುತ್ತಿಗೆದಾರ ಹನುಮಂತಪ್ಪ ಗಾಜೇರ ಇತರರಿದ್ದರು.

    ಫಲಾನುಭವಿಗಳಿಗೆ ಚೆಕ್ ವಿತರಣೆ

    ಹಿರೇಕೆರೂರ: ಸರ್ಕಾರ ಪರಿಶಿಷ್ಟರು, ದುರ್ಬಲ ವರ್ಗದವರನ್ನು ಆರ್ಥಿಕವಾಗಿ ಸಬಲಗೊಳಿಸಲು ಹತ್ತಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಅವುಗಳನ್ನು ಸದ್ಭಳಕೆ ಮಾಡಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

    ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಪಟ್ಟಣದ ಗೃಹ ಕಚೇರಿಯಲ್ಲಿ ಮಂಗಳವಾರ ಸಾಲ ಸೌಲಭ್ಯಗಳ ಚೆಕ್ ವಿತರಿಸಿ ಅವರು ಮಾತನಾಡಿದರು.

    ಕಿರು ಸಾಲ ಯೋಜನೆಯಡಿ 4 ಸ್ವಸಹಾಯ ಸಂಘಗಳಿಗೆ ತಲಾ 2.5 ಲಕ್ಷ ರೂ., ಹಾಗೂ ನೇರ ಸಾಲ ಯೋಜನೆಯಡಿ 9 ಫಲಾನುಭವಿಗಳಿಗೆ ತಲಾ 50 ಸಾವಿರ ರೂ. ಮೊತ್ತದ ಚೆಕ್​ಗಳನ್ನು ವಿತರಿಸಲಾಯಿತು. ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ, ಜಿಲ್ಲಾ ವ್ಯವಸ್ಥಾಪಕ ಶಂಕರ ಬಂಕಾಪುರಮಠ, ಪಪಂ ಸದಸ್ಯ ಮಹೇಂದ್ರ ಬಡಳ್ಳಿ, ಡಿ.ಸಿ. ಪಾಟೀಲ, ರವಿಶಂಕರ ಬಾಳಿಕಾಯಿ ಇತರರಿದ್ದರು.

    ****

    09ಎಚ್​ಕೆಆರ್01



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts