More

    ದೇವಿ ಆರಾಧನೆಯಿಂದ ಸಮೃದ್ಧ ಬದುಕು ಪ್ರಾಪ್ತಿ

    ಯಡ್ರಾಮಿ: ನವರಾತ್ರಿ ಹಬ್ಬವೆಂದರೆ ಶಕ್ತಿದೇವತೆಯ ಉಪಾಸನೆಯ ದಿನ. ಇಂತಹ ದಿನಗಳಲ್ಲಿ ದೇವಿಯ ಸ್ಮರಣೆ ಮಾಡಿದರೆ ದುಷ್ಟ ಶಕ್ತಿಗಳು ದೂರವಾಗಿ ಶಾಂತಿ, ಸಮೃದ್ಧ ಬದುಕು ಪ್ರಾಪ್ತಿಯಾಗುತ್ತದೆ ಎಂದು ಯಡ್ರಾಮಿ ವಿರಕ್ತ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ನುಡಿದರು.

    ಪಟ್ಟಣದ ದೇಸಾಯಿ ಲೇಔಟ್‌ನಲ್ಲಿ ಅಂಬಾ ಭವಾನಿ ದೇವಸ್ಥಾನ ಕಮಿಟಿಯಿಂದ ಬುಧವಾರ ಹಮ್ಮಿಕೊಂಡಿದ್ದ ಮೂರನೆಯ ವರ್ಷದ ನವರಾತ್ರಿ ಉತ್ಸವ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದ ಅವರು, ಜಗತ್ತಿನಲ್ಲಿರುವ ನಕಾರಾತ್ಮಕ ಶಕ್ತಿಗಳನ್ನು ನಿವಾರಿಸಲು ದೇವಾನುದೇವತೆಗಳು ಶಕ್ತಿದೇವತೆಯ ಮೊರೆ ಹೋಗುತ್ತಾರೆ. ಅದರ ಫಲವಾಗಿ ದೇವಿಯನ್ನು ಶಕ್ತಿಯ ನಾನಾ ರೂಪದಲ್ಲಿ ಆರಾಧಿಸಲಾಗುತ್ತದೆ. ನವರಾತ್ರಿ ಸಮಯದಲ್ಲಿ ಒಂಬತ್ತು ದಿನಗಳ ಕಾಲ ದೇವಿಯನ್ನು ಪ್ರತಿಷ್ಠಾಪಿಸಿ ಪೂಜಿಸುವುದರ ಜತೆಗೆ ಹಿರಿಯರ ಮಾರ್ಗದರ್ಶನದಲ್ಲಿ ಒಗ್ಗಟ್ಟಾಗಿ ಮುನ್ನಡೆದರೆ ಸಮಾಜಕ್ಕೆ ಇನ್ನೂ ಒಳ್ಳೆಯ ಸಂದೇಶ ನೀಡಬಹುದು ಎಂದು ಹೇಳಿದರು.

    ನವರಾತ್ರಿ ಪ್ರಯುಕ್ತ ಆಯೋಜಿಸಿದ್ದ ಚೀಲ ಎತ್ತುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕರೆಪ್ಪ ಹೊಸಮನಿ (200 ಕೆಜಿ) ಹಾಗೂ ದ್ವಿತೀಯ ಸ್ಥಾನ ಪರಶುರಾಮ ಅಖಂಡಳ್ಳಿ (165 ಕೆಜಿ) ಗುಂಡು ಎತ್ತುವ ಸ್ಪರ್ಧೆಯಲ್ಲಿ ವಿಜೇತರಾದ ಕರೆಪ್ಪ ಹೊಸಮನಿ (175 ಕೆಜಿ) ಅವರಿಗೆ ಬೆಳ್ಳಿ ಖಡೆ ತೊಡಿಸಿ ಸನ್ಮಾನಿಸಲಾಯಿತು.

    ಕಮಿಟಿ ಅಧ್ಯಕ್ಷ ಕಿರಣ ದೇಸಾಯಿ, ಪ್ರ.ಕಾರ್ಯದರ್ಶಿ ಬಸವರಾಜ ಉಪ್ಪಾರ, ಮಲ್ಲಿಕಾರ್ಜುನ ನೀಲೂರ, ಗುರಣ್ಣ ಕಾಚಾಪುರ, ಜಂಬಗಿ ಮಾಸ್ಟರ್, ದುಂಡಪ್ಪ ಉಪ್ಪಾರ, ಸುರೇಶ ಹಿರೇಮಠ, ನಂದಕುಮಾರ ಮಲ್ಲೇದ, ಮುದುಕಪ್ಪ ದೊಡಮನಿ, ಸಿದ್ದು ಉಪ್ಪಾರ, ಬಸವರಾಜ ಕಲಕೇರಿ, ರಾಜು ಗಂಗಾಕರ, ಅಂಬೋಜಿ ಉಪ್ಪಾರ, ಸಂಗಮೇಶ ದೊರಿ, ಮಾಳಪ್ಪ ಮುಳ್ಳೊಳ್ಳಿ, ಶರಣು ಭಾವಿಕಟ್ಟಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts