More

    ಆಸ್ತಿ ತೆರಿಗೆ ರಿಯಾಯಿತಿ ಜು.31ರವರೆಗೆ ವಿಸ್ತರಣೆ

    ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳು (ಬಿಬಿಎಂಪಿ ಹೊರತುಪಡಿಸಿ) ವಿಧಿಸುವ ಆಸ್ತಿ ತೆರಿಗೆ ಮೇಲಿನ ಶೇ.5 ರಿಯಾಯಿತಿ ಮತ್ತು ಪಾವತಿ ವಿಳಂಬ ದಂಡ ವಿಧಿಸುವ ಅವಧಿಯನ್ನು ಕ್ರಮವಾಗಿ ಜುಲೈ 31 ಹಾಗೂ ನ.1ರವರೆಗೆ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ.

    ಕೋವಿಡ್ 19 ಸಾಂಕ್ರಾಮಿಕ ರೋಗ ನಿಯಂತ್ರಣ ಸಂಬಂಧ ಜಾರಿಗೊಳಿಸಲಾಗಿರುವ ಲಾಕ್​ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಆಸ್ತಿ ತೆರಿಗೆ ಮೇಲಿನ ರಿಯಾಯಿತಿ ಅವಧಿಯನ್ನು ಮೊದಲು ಏ.30 ತನಕ ವಿಸ್ತರಿಸಲಾಗಿತ್ತು. ಬಳಿಕ ಮತ್ತೆ ಲಾಕ್​ಡೌನ್ ಮುಂದುವರಿದ ಹಿನ್ನೆಲೆಯಲ್ಲಿ ಮೇ 31 ತನಕ ವಿಸ್ತರಿಸಲಾಯಿತು. ಇದೀಗ ಮೂರನೇ ಬಾರಿ ಅವಧಿಯನ್ನು ವಿಸ್ತರಿಸಿದಂತಾಗಿದೆ. ಮತ್ತೊಂದೆಡೆ ಲಾಕ್​ಡೌನ್ ವಿಸ್ತರಣೆ ಕಾರಣಕ್ಕಾಗಿಯೇ ಆಸ್ತಿ ತೆರಿಗೆ ಮೇಲಿನ ಪಾವತಿ ವಿಳಂಬ ದಂಡ ವಿಧಿಸುವ ಅವಧಿಯನ್ನು ಜು.1ರಿಂದ 2020ರ ನ.1 ತನಕ ವಿಸ್ತರಿಸಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ.ಜೆ.ರವಿಶಂಕರ್ ಆದೇಶ ಹೊರಡಿಸಿದ್ದಾರೆ.

    ಲಾಕ್‌ಡೌನ್ 5.0: ಮುಖ್ಯಮಂತ್ರಿಗಳ ಜತೆ ಅಮಿತ್ ಶಾ ಮಾತುಕತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts