More

    ಹುಕ್ಕಾ ಬಾರ್ ನಿಷೇಧ ಎತ್ತಿ ಹಿಡಿದ ಹೈಕೋರ್ಟ್ ಕಾಯ್ದಿರಿಸಿದ್ದ ತೀರ್ಪು ಪ್ರಕಟ

    ಬೆಂಗಳೂರು : ಆರೋಗ್ಯಕ್ಕೆ ಹಾನಿಕಾರಕವಾಗಿರುವ ಹುಕ್ಕಾ ಸೇವನೆ 100 ಸಿಗರೇಟಿಗೆ ಸಮ ಎಂದಿರುವ ಹೈಕೋರ್ಟ್, ಹುಕ್ಕಾ ಮತ್ತು ಹುಕ್ಕಾ ಬಾರ್ ನಿಷೇಧ ಪ್ರಶ್ನಿಸಿದ್ದ ಅರ್ಜಿಗಳನ್ನು ವಜಾಗೊಳಿಸಿದೆ.


    ಬೆಂಗಳೂರಿನ ಆರ್. ಭರತ್ ಹಾಗೂ ಮತ್ತಿತರರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಸುದೀರ್ಘ ವಿಚಾರಣೆ ನಡೆಸಿ ಕಾಯ್ದಿರಿಸಿದ ತೀರ್ಪನ್ನು ಸೋಮವಾರ ಪ್ರಕಟಿಸಿದೆ.


    ಮಧ್ಯಂತರ ಅರ್ಜಿದಾರರು ಹೈಕೋರ್ಟ್ ನಿಗದಿತ ಸ್ಥಳದಲ್ಲಿ ಮಾತ್ರ ಹುಕ್ಕಾ ಸೇವನೆಗೆ ಅವಕಾಶ ನೀಡಿದ್ದರೂ ಎಲ್ಲ ಪ್ರದೇಶಗಳ ರೆಸ್ಟೋರೆಂಟ್‌ಗಳಲ್ಲಿ ಸೇವನೆಗೆ ಅವಕಾಶ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ. ಹರ್ಬಲ್ ಹುಕ್ಕಾ ಮಾರಾಟ ಮಾಡಲಾಗುತ್ತಿದೆ ಎಂದು ಅರ್ಜಿದಾರರು ಸಮರ್ಥಿಸಿಕೊಂಡಿದ್ದಾರೆ. ಆಫ್ರೀನ್ ಹೆಸರಿನಲ್ಲಿ ಹರ್ಬಲ್ ಹುಕ್ಕಾ ಸೇವೆನೆಗೆ ಅವಕಾಶ ನೀಡಲಾಗಿದೆ. ಅದನ್ನು ್ಲೇವರ್ಡ್‌ ಹುಕ್ಕಾ ಮೊಲಾಸಿಸ್ ಎಂದು ಹೇಳಲಾಗುತ್ತಿದೆ. ಆದರೆ ಮೊಲಾಸಿಸ್ ನಿಷೇಧಿತ ಉತ್ಪನ್ನ. ಆದರೆ, ಅದನ್ನು ಮುಕ್ತವಾಗಿ ಮಾರಲಾಗುತ್ತಿದೆ. ಹರ್ಬಲ್ ಹುಕ್ಕಾದಲ್ಲಿ ವಿಷಕಾರಕ ಕಾರ್ಬನ್ ಮೋನಾಕ್ಸೈಡ್ ಇದೆ ಎಂದು ನ್ಯಾಯಪೀಠ ಹೇಳಿದೆ.


    ಅಲ್ಲದೆ, ಹುಕ್ಕಾ ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದಿದ್ದರೂ ಸರ್ಕಾರ ಏಕೆ ಇಷ್ಟು ದಿನ ಸುಮ್ಮನಿತ್ತು? ನೂರಾರು ಹುಕ್ಕಾ ಪಾರ್ಲರ್‌ಗಳು ತಲೆ ಎತ್ತಲು ಅವಕಾಶ ನೀಡಿತು ಎಂದು ಪ್ರಶ್ನಿಸಿರುವ ನ್ಯಾಯಾಲಯ, ರಾಜ್ಯಾದ್ಯಂತ 800ಕ್ಕೂ ಅಧಿಕ ಹುಕ್ಕಾ ಪಾರ್ಲರ್‌ಗಳಿವೆ ಎಂದು ಹೇಳಲಾಗುತ್ತಿದೆ. ಅವು ಈವರೆಗೆ ನಿಯಂತ್ರಣ ಮುಕ್ತವಾಗಿದ್ದವು ಎಂದು ಹೇಳಿದೆ.


    ಅರ್ಜಿದಾರರು ಹುಕ್ಕಾ ಸಿಗರೇಟಿಗಿಂತ ಕಡಿಮೆ ಹಾನಿಕಾರಕ ಎಂದು ಹೇಳುತ್ತಿದ್ದಾರೆ. ಆದರೆ ಅಧ್ಯಯನಗಳ ಪ್ರಕಾರ, ಹುಕ್ಕಾದಲ್ಲಿ ಸಿಗರೇಟಿಗಿಂತ ಅಧಿಕ ಪ್ರಮಾಣದ ಅರ್ಸೆನಿಕ್, ಲಿಡ್, ನಿಕಲ್ ಮತ್ತು 15 ಪಟ್ಟು ಹೆಚ್ಚು ಕಾರ್ಬನ್ ಮೊನಾಕ್ಸೈಡ್ ಇದೆ ಎಂದು ಹೇಳಲಾಗುತ್ತಿದೆ. ಹುಕ್ಕಾವನ್ನು ಸಾರ್ವಜನಿಕ ಸ್ಥಳಗಳಲ್ಲಿ ಬಳಕೆ ಮಾಡಲಾಗುತ್ತಿದೆ. ಒಂದೇ ಕೊಳವೆಯನ್ನು ಹಲವರು ಬಾಯಿಯಲ್ಲಿಟ್ಟುಕೊಂಡು ಸೇವನೆ ಮಾಡುತ್ತಾರೆ. ಅದರಿಂದ ಹರ್ಪಿಸ್, ಹೆಪಟೈಟಿಸ್ ಮತ್ತಿತರ ಕಾಯಿಲೆಗಳು ಹರಡುವ ಅಪಾಯವಿದೆ.

    ಸಿಗರೇಟು ಸೇದುವುದಕ್ಕಿಂತ ಹುಕ್ಕಾ ಸೇವನೆ ಕಡಿಮೆ ಅಪಾಯಕಾರಿ ಎನ್ನುವುದು ಸತ್ಯವಲ್ಲ. ಹುಕ್ಕಾ ಮತ್ತು ಸಿಗರೇಟಿನಲ್ಲಿ ಒಂದೇ ಬಗೆಯ ಟಾಕ್ಸಿನ್‌ಗಳಿರುತ್ತವೆ. ಸಿಗರೇಟಿನಿಂದ ಶ್ವಾಸಕೋಶ ಕ್ಯಾನ್ಸರ್ ಅಥವಾ ಉಸಿರಾಟ ಸಮಸ್ಯೆ ಎದುರಾದರೆ ಹುಕ್ಕಾದಿಂದಲೂ ಅದೇ ಅಪಾಯವಿದೆ ಎಂದು ಅಭಿಪ್ರಾಯಪಟ್ಟಿದೆ.


    ಹುಕ್ಕಾವನ್ನು ಸಾಮಾನ್ಯವಾಗಿ ಅಂದಾಜು ಒಂದು ತಾಸು ಸರಾಸರಿ 200 ಪ್ ಸೇದಲಾಗುತ್ತದೆ. ಅದು 100 ಸಿಗರೇಟು ಸೇದುವುದಕ್ಕೆ ಸಮವಾಗುತ್ತದೆ. ಜತೆಗೆ, ಸಿಗರೇಟಿನ ಮೇಲೆ ಆರೋಗ್ಯಕ್ಕೆ ಹಾನಿಕಾರಕ ಎಂಬ ಎಚ್ಚರಿಕೆ ಸಂದೇಶವಿರುತ್ತದೆ. ಮದ್ಯದ ಮೇಲೂ ಸಂದೇಶವಿದೆ. ಆದರೆ, ಹುಕ್ಕಾದ ಮೇಲೆ ಯಾವುದೇ ಸಂದೇಶ ಇರುವುದಿಲ್ಲ. ಆದ್ದರಿಂದ ಸರ್ಕಾರ ಸಂವಿಧಾನದ 47ನೇ ಕಲಂ ಅಡಿ ತನ್ನ ಅಧಿಕಾರ ಬಳಸಿ ಹುಕ್ಕಾ ನಿಷೇಧಿಸಿರುವ ಕ್ರಮ ಸರಿಯಾಗಿಯೇ ಇದೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ವಿವರಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts