More

  19 ವಯೋಮಿತಿ ಏಷ್ಯಾಕಪ್‌ಗೆ ರಾಜ್ಯದ ಧನುಷ್ ಗೌಡ ಆಯ್ಕೆ : ಹಾಲಿ ಚಾಂಪಿಯನ್ ಆಗಿ ಭಾರತ ಕಣಕ್ಕೆ

  ಮುಂಬೈ: ಯುಎಇಯಲ್ಲಿ ಡಿಸೆಂಬರ್ 8 ರಂದು ಆರಂಭವಾಗಲಿರುವ 19 ವಯೋಮಿತಿಯ ಏಷ್ಯಾಕಪ್ ಟೂರ್ನಿಗೆ ಭಾರತ ಕಿರಿಯರ ತಂಡ ಪ್ರಕಟಿಸಲಾಗಿದ್ದು, ಕರ್ನಾಟಕದ ಧನುಷ್ ಗೌಡ ಸ್ಥಾನ ಪಡೆದಿದ್ದಾರೆ. ಭರವೆಸೆಯ ಬ್ಯಾಟರ್ ಉದಯ್ ಸಹರಾನ್ ಹಾಲಿ ಚಾಂಪಿಯನ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.

  ಎಂಟು ಬಾರಿ ಪ್ರಶಸ್ತಿ ಗೆದ್ದಿರುವ ಭಾರತ ಟೂರ್ನಿಯ ಯಶಸ್ವಿ ತಂಡ ಎನಿಸಿದೆ. ಭಾರತ ತಂಡ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಅ್ಘಾನಿಸ್ತಾನ ತಂಡವನ್ನು ಎದುರಿಸುವ ಮೂಲಕ ಅಭಿಯಾನ ಆರಂಭಿಸಲಿದೆ. ಡಿ. 10 ರಂದು ಸಾಂಪ್ರಾದಾಯಿಕ ಎದುರಾಳಿಗಳಾದ ಭಾರತ, ಪಾಕಿಸ್ತಾನ ಮುಖಾಮುಖಿಯಾಗಲಿದ್ದು, ಗುಂಪಿನ ಕೊನೇ ಪಂದ್ಯದಲ್ಲಿ ನೇಪಾಳವನ್ನು ಎದುರಿಸಲಿದೆ.

  ತಂಡ: ಉದಯ್ ಸಹರಾನ್ (ನಾಯಕ), ಸೌಮಿ ಕುಮಾರ್ ಪಾಂಡೆ (ಉಪನಾಯಕ), ಅರ್ಶಿನ್ ಕುಲಕರ್ಣಿ, ಆದರ್ಶ್ ಸಿಂಗ್, ರುದ್ರ ಮಯೂರ್ ಪಟೇಲ್, ಸಚಿನ್ ದಾಸ್, ಪ್ರಿಯಾಂಶು ಮೊಲಿಯಾ, ಮುಶೀರ್ ಖಾನ್, ಧನುಷ್ ಗೌಡ, ಅವಿನಾಶ್ ರಾವ್ (ವಿ.ಕೀ), ಎಂ ಅಭಿಷೇಕ್, ಇನ್ನೇಶ್ ಮಹಾಜನ್ (ವಿ.ಕೀ), ಆರಾಧ್ಯ ಶುಕ್ಲಾ, ರಾಜ್ ಲಿಂಬಾನಿ, ನಮನ್ ತಿವಾರಿ. ಮೀಸಲು: ಪ್ರೇಮ್ ದೇವ್ಕರ್, ಅಂಶ್ ಗೋಸಾಯಿ, ಮೊಹಮ್ಮದ್ ಅಮನ್.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts