More

    ಶೀಘ್ರವೇ ಸಮಸ್ಯೆ ಪರಿಹಾರದ ಭರವಸೆ

    ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆ 1001 ಜನ ಹೊರಗುತ್ತಿಗೆ ಪೌರಕಾರ್ವಿುಕರನ್ನು ನೇರ ವೇತನ ಪಾವತಿ ಅಡಿ ತೆಗೆದುಕೊಂಡ ನಂತರದಲ್ಲಿ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿರುವ ನೂರಾರು ಕಾರ್ವಿುಕರು ಮಂಗಳವಾರ ಬೆಳಗ್ಗೆ ಶಾಸಕ ಪ್ರಸಾದ ಅಬ್ಬಯ್ಯ ನಿವಾಸದ ಎದುರು ದಿಢೀರ್ ವಾಹನ ಸಂಚಾರ ತಡೆ ಮತ್ತು ಧರಣಿ ನಡೆಸಿದರು.

    ‘ಪಾಲಿಕೆ ವಲಯಾಧಿಕಾರಿಗಳು ಮತ್ತು ಆರೋಗ್ಯ ನಿರೀಕ್ಷಕರು ಕೆಲಸಕ್ಕೆ ಬರುವುದು ಬೇಡ, ನಿಮ್ಮನ್ನು ಕೈ ಬಿಡಲಾಗಿದೆ ಎಂದು ಹೇಳಿದ್ದಾರೆ. ಈಗ ದಾರಿ ಕಾಣದಾಗಿದೆ. ತಮ್ಮನ್ನು ಕೆಲಸದಿಂದ ತೆಗೆಯಬಾರದು ಮತ್ತು ನೇರ ವೇತನ ಪಾವತಿ ಅಡಿ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.

    ಸಮಸ್ಯೆ ಆಲಿಸಿದ ಶಾಸಕ ಪ್ರಸಾದ ಅಬ್ಬಯ್ಯ, ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ಅವರನ್ನು ಸ್ಥಳಕ್ಕೆ ಕರೆಸಿ ಕೇಳಿದರು. ಸರ್ಕಾರದ ನಿಯಮದ ಪ್ರಕಾರ ಕ್ರಮ ಜರುಗಿಸಲಾಗಿದೆ. ಹೆಚ್ಚುವರಿ ಜನರ ಅವಶ್ಯಕತೆ ಇದೆಯಾದರೂ ಸರ್ಕಾರದ ಅನುಮೋದನೆ ಸಿಗಬೇಕಿದೆ ಎಂದರು.

    ಪ್ರತಿಭಟನಾಕಾರರ ಪರ ಮಾತನಾಡಿದ ಪಾಲಿಕೆ ಮಾಜಿ ಸದಸ್ಯ ಗಣೇಶ ಟಗರಗುಂಟಿ ಹಾಗೂ ಇತರರು, ಸ್ವಚ್ಛತೆ ನಿರ್ವಹಣೆ ಹಿನ್ನೆಲೆಯಲ್ಲಿ ಪಾಲಿಕೆಗೆ ಜನರ ಅವಶ್ಯಕತೆ ಇದೆ. ಸರ್ಕಾರದ ಅನುಮೋದನೆ ಇಲ್ಲ ಎಂದು ಬಡ ಕಾರ್ವಿುಕರನ್ನು ಕೈ ಬಿಡಬಾರದು ಎಂದು ಒತ್ತಾಯಿಸಿದರು.

    ಇನ್ನೆರಡು ದಿನದಲ್ಲಿ ಉಸ್ತುವಾರಿ ಸಚಿವರ ಉಪಸ್ಥಿತಿಯಲ್ಲಿ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು. ಸದ್ಯಕ್ಕೆ ಯಾರನ್ನೂ ಕೈ ಬಿಡದೇ ಕೆಲಸ ಮಾಡಿಸಿಕೊಳ್ಳಿ. ಅವರಿಗೆ ವೇತನವನ್ನು ತಾತ್ಕಾಲಿಕವಾಗಿ ಬೇರೆ ನಿಧಿಯಿಂದ ಭರಣ ಮಾಡಬಹುದು ಎಂದು ಶಾಸಕರು ಪಾಲಿಕೆ ಆಯುಕ್ತರಿಗೆ ತಿಳಿಸಿದರು.

    ಶಾಸಕರ ಭರವಸೆಯ ಮೇರೆಗೆ ಕಾರ್ವಿುಕರು ಧರಣಿ ಕೈಬಿಟ್ಟರು.

    ಆಯುಕ್ತ ಗರಂ:

    ಹೊರಗುತ್ತಿಗೆ ಏಜೆನ್ಸಿಯವರೊಬ್ಬರು ತಮಗೆ ನೋಟಿಸ್ ಸಹ ನೀಡಿಲ್ಲ, ಕಾರ್ವಿುಕರನ್ನು ನೇರ ವೇತನ ಅಡಿ ತೆಗೆದುಕೊಳ್ಳುವಾಗ ಅನೇಕರಿಗೆ ಅನ್ಯಾಯವಾಗಿದೆ ಎಂದಾಗ ತುಸು ಗರಂ ಆದ ಆಯುಕ್ತ ಡಾ. ಇಟ್ನಾಳ, ಗುತ್ತಿಗೆದಾರರು ಕಾರ್ವಿುಕರ ಪಿಎಫ್ ಖಾತೆಗೆ ಸರಿಯಾಗಿ ಹಣ ತುಂಬಿದ್ದರೆ ಸಮಸ್ಯೆಯಾಗುತ್ತಿರಲಿಲ್ಲ. ನಿಮ್ಮದೇ ಲಾಗಿನ್ ಐಡಿಯಿಂದ ಮಾಹಿತಿ ಪಡೆದು ಕ್ರಮ ಜರುಗಿಸಿರುವುದು ತಿಳಿದಿರಲಿ ಎಂದು ತಿರುಗೇಟು ನೀಡಿದರು.

    ಜಿಲ್ಲಾಧಿಕಾರಿಗೆ ಮನವಿ

    ಧಾರವಾಡ: 468 ಗುತ್ತಿಗೆ ಪೌರ ಕಾರ್ವಿುಕರನ್ನು ನೇರ ವೇತನ ಅಡಿ ತೆಗೆದುಕೊಳ್ಳುವಂತೆ ಒತ್ತಾಯಿಸಿ ಜಿಲ್ಲಾ ಪರಿಶಿಷ್ಟ ಜಾತಿ-ಪಂಗಡಗಳ ಪೌರಕಾರ್ವಿುಕರ ಮತ್ತು ನೌಕರರ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

    ಪಾಲಿಕೆ ಪಟ್ಟಿಯಲ್ಲಿ ಒಂದಿಷ್ಟು ನಕಲಿ ಕಾರ್ವಿುಕರಿದ್ದಾರೆ. ಸೂಕ್ತ ತನಿಖೆ ನಡೆಸಿ ಅಂಥವರನ್ನು ಕೈ ಬಿಟ್ಟು, ಉಳಿದ ಗುತ್ತಿಗೆ ಕಾರ್ವಿುಕರನ್ನು ಪರಿಗಣಿಸಬೇಕು ಎಂದು ಆಗ್ರಹಿಸಿದರು.

    ಮನವಿಪತ್ರ ಸ್ವೀಕರಿಸಿ ಅಹವಾಲು ಆಲಿಸಿದ ಡಿ.ಸಿ. ನಿತೇಶ ಪಾಟೀಲ, ಅರ್ಹರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

    ಸಂಘದ ಜಿಲ್ಲಾಧ್ಯಕ್ಷ ವಿಜಯ ಗುಂಟ್ರಾಳ, ಗಾಳೆಪ್ಪ, ನಾಗರಾಜ ಸಣ್ಣಮನಿ, ನಾರಾಯಣ ಮಾದರ, ದುರ್ಗಪ್ಪ ಶೇಖಸನದಿ, ಗಂಗಾಧರ ದೊಡಮನಿ, ರಾಕೇಶ ಚುರುಮರಿ, ಪರಶುರಾಮ ಚಿಕ್ಕಲಗಾರ, ಸುಮಿತ್ರಾ ಹೊಸಳ್ಳಿ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts