More

    ಕಾಯಕ ಶರಣರ ಆದರ್ಶ ಪಾಲನೆಯಿಂದ ಸಮಾಜದ ಸರ್ವಾಂಗೀಣ ಪ್ರಗತಿ

    ಕಾಯಕ ಶರಣರ ಆದರ್ಶ ಪಾಲನೆಯಿಂದ ಸಮಾಜದ ಸರ್ವಾಂಗೀಣ ಪ್ರಗತಿಕಾಯಕ ಶರಣರ ಆದರ್ಶ ಪಾಲನೆಯಿಂದ ಸಮಾಜದ ಸರ್ವಾಂಗೀಣ ಪ್ರಗತಿ

    ಚಿತ್ರದುರ್ಗ: ಕಾಯಕ ಶರಣರ ಆದರ್ಶ ಪಾಲನೆಯಿಂದ ಸಮಾಜದ ಸರ್ವಾಂಗೀಣ ಪ್ರಗತಿ ಸಾಧ್ಯವೆಂದು ಎಡಿಸಿ ಟಿ.ಜವರೇಗೌಡ ಅಭಿಪ್ರಾಯ ಪಟ್ಟರು. ಜಿಲ್ಲಾಡಳಿತ ಡಿಸಿ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ಮಾದಾರ ಚೆನ್ನಯ್ಯ,ಡೋಹರ ಕಕ್ಕಯ್ಯ,ಸಮಗಾರ ಹರಳಯ್ಯ,ಮಾದಾರ ಧೂಳಯ್ಯ ಮತ್ತು ಉರಿಲಿಂಗ ಪೆದ್ದಿ ಮತ್ತಿತರ ಕಾಯಕ ಶರಣರ ಜಯಂತಿ ಸಮಾರಂಭದಲ್ಲಿ ಕಾಯಕ ಶರಣರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿ,ಶರಣರ ಆದರ್ಶಗಳನ್ನು ಪಾಲಿಸಿದರೆ ಸಮ ಸಮಾಜ ನಿರ್ಮಾಣದೊಂದಿಗೆ ಜಾತಿ ವ್ಯವಸ್ಥೆ ಕೂಡ ತೊಲಗಲಿದೆ. ಸೋಮಾರಿತನ ಸಲ್ಲದು.ಕಾಯಕದಲ್ಲಿ ದೊಡ್ಡದು-ಸಣ್ಣದು ಎಂಬ ಭೇದವಿಲ್ಲ. ಕಾಯಕ ಮುಖ್ಯವೆಂದು ಮಹಾನುಭಾ ವರಾದ ಕಾಯಕ ಶರಣರು ಸಾರಿದ್ದಾರೆ.

    12ನೇ ಶತಮಾನದ ಸಂದರ್ಭದಲ್ಲಿ ಸಮಾಜದಲ್ಲಿದ್ದ ಜಾತಿ,ವರ್ಗ ವ್ಯವಸ್ಥೆ,ಸ್ತ್ರೀ-ಪುರುಷ ಅಸಮಾನತೆ,ಮೂಢನಂಬಿಕೆ,ಅನಿಷ್ಟ ಪದ್ಧತಿ, ಅನಾಚಾರಗಳು ತಾಂಡವಾಡುತ್ತಿದ್ದವು. ಸಾಮಾನ್ಯ ಜನರಿಗೆ ಧರ್ಮ,ಮೋಕ್ಷ,ಅಧಾತ್ಮ ಕೈಗೆಟುಕುತ್ತಿರಲಿಲ್ಲ.ಇದನ್ನರಿತ ಶರಣರು ವಚನ ಚಳವಳಿ ಮೂಲಕ ಸಮಾಜದಲ್ಲಿ ಜಾಗೃತಿಗೆ ಮುಂದಾದರು.

    ಬಸವಣ್ಣನವರ ನೇತೃತ್ವದಲ್ಲಿ ಎಲ್ಲ ವಚನಕಾರರು ಧರ್ಮದ ತಿರುಳನ್ನು ಜನರಿಗೆ ಸರಳವಾಗಿ ತಿಳಿಸಿದರು. ವಚನ ಚಳವಳಿ ವ್ಯವಸ್ಥೆ ವಿರು ದ್ಧ ಅಂದೋಲನವಾಗಿ ರೂಪಗೊಂಡಿತು. ವಚನಕಾರರು ಕಾಯಕ ತತ್ವಕ್ಕೆ ಆದ್ಯತೆ ನೀಡಿದ್ದರು ಎಂದರು.

    ದಲಿತ ಮುಖಂಡ ಬಿ.ರಾಜಪ್ಪ ಮಾತನಾಡಿ,ಸಮಾಜ ಕಲ್ಯಾಣ ಇಲಾಖೆಯಿಂದ ಕಾಯಕ ಶರಣರ ಕುರಿತು ವಿಚಾರಗೋಷ್ಠಿಗಳನ್ನು ಏ ರ್ಪಡಿಸುವ ಮೂಲಕ ವಿದ್ಯಾರ್ಥಿಗಳಿಗೆ ಕಾಯಕ ಶರಣರ ಆದರ್ಶ,ವಿಚಾರಧಾರೆಗಳನ್ನು ತಿಳಿಸಬೇಕೆಂದರು.

    ನಗರಸಭೆ ಮಾಜಿ ಅಧ್ಯಕ್ಷ ಡಿ.ಎನ್.ಮೈಲಾರಪ್ಪ ಮಾತನಾಡಿ,ಅಸ್ಪಶ್ಯ,ದಲಿತ ಸಮುದಾಯದ ಶರಣರ ಜಯಂತಿ ಆಚರಿಸುತ್ತಿ ರುವುದು ಹೆಮ್ಮೆಯ ಸಂಗತಿ. ಮುಂದಿನ ಪೀಳಿಗಿಗೆ ಶರಣರ ಸಾಧನೆ,ವಿಚಾರಗಳನ್ನು ತಿಳಿಸುವುದು ಅಗತ್ಯವಿದೆ ಎಂದರು.

    ರಾಂಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಡಾ.ಎಂ.ವೇದಾಂತ ಎಳಂಜಿ ಉಪನ್ಯಾಸ ನೀಡಿ,ಕಾಯಕ ಶರಣರು ವಚ ನಗಳನ್ನು ರಚಿಸಿದ್ದಾರೆ. ಬಹಳ ಮುಖ್ಯವಾಗಿರುವ ಇವರನ್ನು ಬಿಟ್ಟು ವಚನಯುಗವನ್ನು ಅಧ್ಯಯನ ಮಾಡಲಾಗದು. ಕಾಯಕ ಶರಣ ರು ಕಾಯಕದಿಂದಲೇ ಮುಕ್ತಿ ಹೊರತು ಭಕ್ತಿಯಿಂದಲ್ಲ ಎಂದರು. ಇವರು ಕಾಯಕ ಜೀವಿಗಳ ಪರವಾಗಿದ್ದರು.ಮಾದರ ಚೆನ್ನಯ್ಯ ವೃತ್ತಿಗಳನ್ನು ಜಾತಿಗಳನ್ನಾಗಿ ಗುರುತಿಸುವುದನ್ನು ಖಂಡಿಸಿದ್ದರು.
    ವಿಜಾಪುರ ಮೂಲದ ಉರಿಲಿಂಗ ಪೆದ್ದಿ ಅವರು,ಹಲವು ಕೆರೆಗಳನ್ನು ನಿರ್ಮಾಣ ಮಾಡಿದ್ದಾರೆ. ಸಂಸ್ಕೃತ ಕಲಿತು ಸವರ್ಣಿಯರ ಮಠಕ್ಕೆ ಪೀಠಾಧಿಪತಿಯಾಗುತ್ತಾರೆ.ಕಾಯಕದಿಂದ ಲೇ ಮುಕ್ತಿ ಕಂಡಿರುವ ಮಾದರ ಧೂಳಯ್ಯ ಅವರು ಹಾಗೂ ಬೆಳ ಗಾವಿ ಜಿಲ್ಲೆ ಕಕ್ಕೆರೆಯಲ್ಲಿ ಜನಿಸಿದ್ದ ಡೋಹರ ಕಕ್ಕಯ್ಯ ಅವರು ಹಲವು ವಚನಗಳನ್ನು ರಚಿಸಿದ್ದಾರೆ ಎಂದರು. ದಲಿತ ಮುಖಂಡರನ್ನು ಸನ್ಮಾನಿಸಲಾಯಿತು.

    ಜಯಂತಿ ಅಂಗವಾಗಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದ ಬಳಿಕ ಎಡಿಸಿ ಮೆರವಣಿಗೆಗೆ ಚಾಲನೆ ನೀಡಿ ದರು. ಅಂಬೇಡ್ಕರ್ ವೃತ್ತದಿಂದ ಆರಂಭವಾದ ಮೆರವಣಿಗೆ ಒನಕೆ ಓಬವ್ವ ವೃತ್ತದ ಮೂಲಕ ಡಿಸಿ ಕಚೇರಿಗೆ ತಲುಪಿತು. ತಹಸೀಲ್ದಾರ್ ಡಾ.ನಾಗವೇಣಿ,ಎಎಸ್‌ಪಿ ಕುಮಾರಸ್ವಾಮಿ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ,ಸಮಾ ಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಒ.ಪರಮೇಶ್ವರಪ್ಪ,ನಗರಸಭೆ ಮಾಜಿ ಅಧ್ಯಕ್ಷ ಎಚ್.ಸಿ.ನಿರಂಜನಮೂರ್ತಿ,ಶ್ರೀ ಕಣಿವೆ ಮಾರಮ್ಮ ಕನ್ನಡ ಅಭಿಮಾನಿಗಳ ಸಂಘದ ಅಧ್ಯಕ್ಷ ಎಂ.ತಿಪ್ಪೇಸ್ವಾಮಿ.

    ದಲಿತ ಮುಖಂಡರಾದ ಜಿ.ಎಂ.ಪ್ರಕಾಶ್, ತಿಪ್ಪೇಸ್ವಾಮಿ,ಶಿವಣ್ಣ,ನಿವೃತ್ತ ಡಿಡಿಪಿಐ ಎಂ.ಮಲ್ಲಣ್ಣ ಸೇರಿದಂತೆ ನಾನಾ ಗಣ್ಯರು, ಮುಖಡರು ಇದ್ದರು. ಕೆ.ಗಂಗಾಧರ ತಂಡದವರು ಗೀತ ಗಾಯನ ನಡೆಸಿಕೊಟ್ಟರು. ಕೆಪಿಎಂ ಗಣೇಶಯ್ಯ ನಿರೂಪಿಸಿದರು.
    (ಸಿಟಿಡಿ 18 ಕಾಯಕ ಶರಣರು)
    ಚಿತ್ರದುರ್ಗದಲ್ಲಿ ಶನಿವಾರ ಏರ್ಪಡಿಸಿದ್ದ ಕಾಯಕ ಶರಣರ ಜಯಂತಿ ಕಾರ‌್ಯಕ್ರಮದಲ್ಲಿ ಕಾಯಕ ಶರಣರ ಭಾವಚಿತ್ರಕ್ಕೆ ಎಡಿಸಿ ಪುಷ್ಪ ನ ಮನವಿ ಸಲ್ಲಿಸಿದರು. ಬಿ.ರಾಜಪ್ಪ,ಸಮಾಜ ಕಲ್ಯಾಣ ಇಲಾಖೆಯಿಂದ ಕಾಯಕ ಶರಣರ ಕುರಿತು ವಿಚಾರಗೋಷ್ಠಿಗಳನ್ನು ಏರ್ಪಡಿಸುವ ಮೂಲಕ ವಿದ್ಯಾರ್ಥಿಗಳಿಗೆ ಕಾಯಕ ಶರಣರ ಆದರ್ಶ,ವಿಚಾರಧಾರೆಗಳನ್ನು ತಿಳಿಸಬೇಕೆಂದರು.
    ನಗರಸಭೆ ಮಾಜಿ ಅಧ್ಯಕ್ಷ ಡಿ.ಎನ್.ಮೈಲಾರಪ್ಪ ಮಾತನಾಡಿ,ಅಸ್ಪಶ್ಯ,ದಲಿತ ಸಮುದಾಯದ ಶರಣರ ಜಯಂತಿ ಆಚರಿಸುತ್ತಿರುವು ದು ಹೆಮ್ಮೆಯ ಸಂಗತಿ. ಮುಂದಿನ ಪೀಳಿಗಿಗೆ ಶರಣರ ಸಾಧನೆ,ವಿಚಾರಗಳನ್ನು ತಿಳಿಸುವುದು ಅಗತ್ಯವಿದೆ ಎಂದರು.
    ರಾಂಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಡಾ.ಎಂ.ವೇದಾಂತ ಎಳಂಜಿ ಉಪನ್ಯಾಸ ನೀಡಿ,ಕಾಯಕ ಶರಣರು ವಚ ನಗಳನ್ನು ರಚಿಸಿದ್ದಾರೆ. ಬಹಳ ಮುಖ್ಯವಾಗಿರುವ ಇವರನ್ನು ಬಿಟ್ಟು ವಚನಯುಗವನ್ನು ಅಧ್ಯಯನ ಮಾಡಲಾಗದು. ಕಾಯಕ ಶರಣ ರು ಕಾಯಕದಿಂದಲೇ ಮುಕ್ತಿ ಹೊರತು ಭಕ್ತಿಯಿಂದಲ್ಲ ಎಂದರು. ಇವರು ಕಾಯಕ ಜೀವಿಗಳ ಪರವಾಗಿದ್ದರು.ಮಾದರ ಚೆನ್ನಯ್ಯ ವೃತ್ತಿಗಳನ್ನು ಜಾತಿಗಳನ್ನಾಗಿ ಗುರುತಿಸುವುದನ್ನು ಖಂಡಿಸಿದ್ದರು.
    ವಿಜಾಪುರ ಮೂಲದ ಉರಿಲಿಂಗ ಪೆದ್ದಿ ಅವರು,ಹಲವು ಕೆರೆಗಳನ್ನು ನಿರ್ಮಾಣ ಮಾಡಿದ್ದಾರೆ. ಸಂಸ್ಕೃತ ಕಲಿತು ಸವರ್ಣಿಯರ ಮಠಕ್ಕೆ ಪೀಠಾಧಿಪತಿಯಾಗುತ್ತಾರೆ.ಕಾಯಕದಿಂದಲೇ ಮುಕ್ತಿ ಕಂಡಿರುವ ಮಾದರ ಧೂಳಯ್ಯ ಅವರು ಹಾಗೂ ಬೆಳಗಾವಿ ಜಿಲ್ಲೆ ಕಕ್ಕೆರೆಯಲ್ಲಿ ಜನಿಸಿದ್ದ ಡೋಹರ ಕಕ್ಕಯ್ಯ ಅವರು ಹಲವು ವಚನಗಳನ್ನು ರಚಿಸಿದ್ದಾರೆ ಎಂದರು. ದಲಿತ ಮುಖಂಡರನ್ನು ಸನ್ಮಾನಿಸಲಾಯಿತು.
    ಜಯಂತಿ ಅಂಗವಾಗಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಬಳಿಕ ಎಡಿಸಿ ಮೆರವಣಿಗೆಗೆ ಚಾಲನೆ ನೀಡಿ ದರು. ಅಂಬೇಡ್ಕರ್ ವೃತ್ತದಿಂದ ಆರಂಭವಾದ ಮೆರವಣಿಗೆ ಒನಕೆ ಓಬವ್ವ ವೃತ್ತದ ಮೂಲಕ ಡಿಸಿ ಕಚೇರಿಗೆ ತಲುಪಿತು. ತಹಸೀಲ್ದಾರ್ ಡಾ.ನಾಗವೇಣಿ,ಎಎಸ್‌ಪಿ ಕುಮಾರಸ್ವಾಮಿ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ,ಸಮಾ ಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಒ.ಪರಮೇಶ್ವರಪ್ಪ,ನಗರಸಭೆ ಮಾಜಿ ಅಧ್ಯಕ್ಷ ಎಚ್.ಸಿ.ನಿರಂಜನಮೂರ್ತಿ,ಶ್ರೀ ಕಣಿವೆ ಮಾರಮ್ಮ ಕನ್ನಡ ಅಭಿಮಾನಿಗಳ ಸಂಘದ ಅಧ್ಯಕ್ಷ ಎಂ.ತಿಪ್ಪೇಸ್ವಾಮಿ.
    ದಲಿತ ಮುಖಂಡರಾದ ಜಿ.ಎಂ.ಪ್ರಕಾಶ್,ತಿಪ್ಪೇಸ್ವಾಮಿ,ಶಿವಣ್ಣ,ನಿವೃತ್ತ ಡಿಡಿಪಿಐ ಎಂ.ಮಲ್ಲಣ್ಣ ಸೇರಿದಂತೆ ನಾನಾ ಗಣ್ಯರು,ಮುಖಂ ಡರು ಇದ್ದರು. ಕೆ.ಗಂಗಾಧರ ತಂಡದವರು ಗೀತ ಗಾಯನ ನಡೆಸಿಕೊಟ್ಟರು. ಕೆಪಿಎಂ ಗಣೇಶಯ್ಯ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts