More

    ಲಾಭ ತೆಗೆದುಕೊಳ್ಳಲು ಮಾರಾಟ, ದುರ್ಬಲ ಜಾಗತಿಕ ಪ್ರವೃತ್ತಿ: ಸೂಚ್ಯಂಕ 352 ಅಂಕಗಳ ಕುಸಿತ

    ಮುಂಬೈ: ದುರ್ಬಲ ಜಾಗತಿಕ ಪ್ರವೃತ್ತಿಗಳ ನಡುವೆ ಲಾಭ ಪಡೆದುಕೊಳ್ಳುವುದಕ್ಕಾಗಿ ಐಟಿ, ಲೋಹ ಮತ್ತು ಗ್ರಾಹಕ ಬಾಳಿಕೆ ಬರುವ ಸರಕುಗಳ ಷೇರುಗಳನ್ನು ಮಾರಾಟ ಮಾಡಿದ ಕಾರಣದಿಂದಾಗಿ ಬೆಂಚ್‌ಮಾರ್ಕ್ ಸೂಚ್ಯಂಕ ಸೋಮವಾರ ಎರಡನೇ ಸತತ ವಹಿವಾಟಿನ ದಿನದಲ್ಲಿ ಕುಸಿತ ಕಂಡಿತು. ಬೆಂಚ್‌ಮಾರ್ಕ್ ಸೂಚ್ಯಂಕದಲ್ಲಿ 352 ಅಂಕಗಳ ಕುಸಿತವಾಯಿತು.

    30-ಷೇರುಗಳ ಬಿಎಸ್‌ಇ ಮಾಪಕವು 352.67 ಅಂಕಗಳು ಅಥವಾ ಶೇಕಡಾ 0.48 ರಷ್ಟು ಕುಸಿದು 72,790.13 ಅಂಕಗಳನ್ನು ಮುಟ್ಟಿತು. ಈ ಸೂಚ್ಯಂಕ 26 ಷೇರುಗಳ ಬೆಲೆ ಕುಸಿತ ಕಂಡರೆ, ನಾಲ್ಕು ಸ್ಟಾಕ್​ಗಳ ದರ ಏರಿಕೆಯಾಯಿತು.

    ಎನ್‌ಎಸ್‌ಇಯ ನಿಫ್ಟಿ ಸೂಚ್ಯಂಕವು 90.65 ಅಂಕಗಳು ಅಥವಾ ಶೇಕಡಾ 0.41ರಷ್ಟು ಕುಸಿತು ಕಂಡು 22,122.05 ಅಂಕಗಳಿಗೆ ತಲುಪಿತು. ಈ ಸೂಚ್ಯಂಕದಲ್ಲಿನ 37 ಷೇರುಗಳ ಬೆಲೆ ಕುಸಿತ ದಾಖಲಿಸಿದವು.

    ಇನ್ಫೋಸಿಸ್, ಟಿಸಿಎಸ್, ಐಸಿಐಸಿಐ ಬ್ಯಾಂಕ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಸೇರಿದಂತೆ ಸೂಚ್ಯಂಕದ ಪ್ರಮುಖ ಷೇರುಗಳ ಹೆಚ್ಚಿನ ಮಾರಾಟವು ಸೂಚ್ಯಂಕದ ಹಿನ್ನಡೆಗೆ ಕಾರಣವಾಯಿತು ಎಂದು ವಿಶ್ಲೇಷಕರು ಹೇಳಿದ್ದಾರೆ.

    ಆದಿತ್ಯ ಬಿರ್ಲಾ ಸಮೂಹದ ಕಂಪನಿ ಗ್ರಾಸಿಮ್ ಇಂಡಸ್ಟ್ರೀಸ್ ಪೇಂಟ್ಸ್ ವಿಭಾಗಕ್ಕೆ ಪ್ರವೇಶಿಸಿದ ನಂತರ ದೇಶೀಯ ಬಣ್ಣಗಳ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಸ್ಪರ್ಧೆಯ ಬಗ್ಗೆ ವಿಶ್ಲೇಷಕರು ಕಳವಳ ವ್ಯಕ್ತಪಡಿಸಿದ್ದರಿಂದ ಸೆನ್ಸೆಕ್ಸ್ ಷೇರುಗಳ ಪೈಕಿ, ಏಷ್ಯನ್ ಪೇಂಟ್ಸ್ ಷೇರುಗಳ ಬೆಲೆ ಶೇಕಡಾ 3.9 ರಷ್ಟು ಕುಸಿಯಿತು.

    ಅಮೆರಿಕ ಮಾರುಕಟ್ಟೆಯಲ್ಲಿ ಹಣದುಬ್ಬರ ಆತಂಕದ ನಡುವೆ ಐಟಿ ಷೇರುಗಳಾದ ಇನ್ಫೋಸಿಸ್, ಟಿಸಿಎಸ್, ಎಚ್‌ಸಿಎಲ್ ಟೆಕ್, ವಿಪ್ರೋ ಮತ್ತು ಟೆಕ್ ಮಹೀಂದ್ರಾ ಕುಸಿತವನ್ನು ಮುಂದುವರೆಸಿದವು. ಟಾಟಾ ಸ್ಟೀಲ್, ಜೆಎಸ್‌ಡಬ್ಲ್ಯೂ ಸ್ಟೀಲ್, ಟೈಟಾನ್, ಭಾರ್ತಿ ಏರ್‌ಟೆಲ್, ಆಕ್ಸಿಸ್ ಬ್ಯಾಂಕ್, ಕೊಟಕ್ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್, ಬಜಾಜ್ ಫೈನಾನ್ಸ್ ಮತ್ತು ಮಾರುತಿ ಇತರ ಷೇರುಗಳು ಕೂಡ ನಷ್ಟಕ್ಕೆ ಗುರಿಯಾದವು.
    ಮತ್ತೊಂದೆಡೆ, ಲಾರ್ಸೆನ್ ಆ್ಯಂಡ್​ ಟೂಬ್ರೊ ಶೇ.2.36 ರಷ್ಟು ಹೆಚ್ಚಿನ ಲಾಭ ಗಳಿಸಿತು. ಪವರ್ ಗ್ರಿಡ್, ಎಚ್‌ಯುಎಲ್ ಮತ್ತು ನೆಸ್ಲೆ ಷೇರುಗಳು ಸಹ ಲಾಭ ಗಳಿಸಿದವು.

    ಬಿಎಸ್‌ಇ ಮಿಡ್‌ಕ್ಯಾಪ್ ಶೇಕಡಾ 0.38 ರಷ್ಟು ಕುಸಿದರೆ, ಬಿಎಸ್‌ಇ ಸ್ಮಾಲ್‌ಕ್ಯಾಪ್ ಶೇಕಡಾ 0.06 ರಷ್ಟು ಕುಸಿದಿದೆ. ವಲಯವಾರು ಸೂಚ್ಯಂಕಗಳ ಪೈಕಿ ಬಿಎಸ್‌ಇ ಮೆಟಲ್ ಶೇ. 1.27ರಷ್ಟು ಕುಸಿದಿದೆ. ಬಿಎಸ್ಇ ಕನ್ಸ್ಯೂಮರ್ ಡ್ಯೂರಬಲ್ಸ್ ಶೇ. 1.25, ಬಿಎಸ್ಇ ಟೆಕ್ ಶೇ. 1.13 ಮತ್ತು ಬಿಎಸ್ಇ ಐಟಿ ಶೇ. 1.06ರಷ್ಟು ಕುಸಿದಿದೆ. ಮತ್ತೊಂದೆಡೆ, ಬಿಎಸ್‌ಇ ಯುಟಿಲಿಟೀಸ್ ಶೇಕಡಾ 1.41, ಬಿಎಸ್‌ಇ ಪವರ್ ಶೇಕಡಾ 1.01 ಮತ್ತು ಕ್ಯಾಪಿಟಾ ಗೂಡ್ಸ್ ಶೇಕಡಾ 0.84 ರಷ್ಟು ಹೆಚ್ಚಳ ಕಂಡವು.
    ಒಟ್ಟು ವಹಿವಾಟು ಕಂಡ 4,108 ಷೇರುಗಲ ಪೈಕಿ 2,268 ಷೇರುಗಳು ಕುಸಿತ ಕಂಡವು, 1,710 ಷೇರುಗಳು ಲಾಭ ಗಳಿಸಿದವು. 130 ಸ್ಟಾಕ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಅಗಲಿಲ್ಲ.

    ಏಷ್ಯಾದ ಮಾರುಕಟ್ಟೆಗಳು ಸೋಮವಾರ ಹೆಚ್ಚಾಗಿ ಕುಸಿದವು. ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ ಶೇಕಡಾ 0.5, ಶಾಂಘೈ ಕಾಂಪೋಸಿಟ್ ಶೇಕಡಾ 0.9 ಮತ್ತು ದಕ್ಷಿಣ ಕೊರಿಯಾದ ಕೋಸ್ಪಿ ಶೇಕಡಾ 0.8 ರಷ್ಟು ಕುಸಿಯಿತು. ಟೋಕಿಯೊ ನಿಕ್ಕಿ 225 ಸೂಚ್ಯಂಕವು ಶೇಕಡಾ 0.4 ರಷ್ಟು ಹೆಚ್ಚಳ ಕಂಡಿತು.

    ಐರೋಪ್ಯ ಮಾರುಕಟ್ಟೆಯಲ್ಲಿ ಯುರೋ ಸ್ಟಾಕ್ಸ್ 50 ಶೇಕಡಾ 0.22 ರಷ್ಟು ಇಳಿಯುವುದರೊಂದಿಗೆ ಕಡಿಮೆ ವ್ಯಾಪಾರ ಮಾಡಿತು. ಲಂಡನ್‌ನಲ್ಲಿ ಎಫ್‌ಟಿಎಸ್‌ಇ 100 ಶೇಕಡಾ 0.34 ರಷ್ಟು ಕುಸಿದರೆ, ಫ್ರಾನ್ಸ್‌ನಲ್ಲಿ ಸಿಎಸಿ 40 ಶೇಕಡಾ 0.45 ರಷ್ಟು ಕುಸಿತ ದಾಖಲಿಸಿತು.

    ಶುಕ್ರವಾರ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) 1,276.09 ರೂ. ಕೋಟಿ ಮೌಲ್ಯದ ಭದ್ರತೆಗಳನ್ನು ಖರೀದಿಸಿದ್ದರಿಂದ ನಿವ್ವಳ ಖರೀದಿದಾರರಾಗಿದ್ದಾರೆ.

    ಪೇಟಿಎಂ ಷೇರು ಅಪ್ಪರ್​ ಸರ್ಕ್ಯೂಟ್​ ಹಿಟ್​: ಪಾತಾಳ ಕಂಡ ಸ್ಟಾಕ್​ ಬೆಲೆ ಮತ್ತೆ ಏರುಗತಿಗೆ ಮರಳಲು 2 ಪ್ರಮುಖ ಕಾರಣ

    ರೂ. 1000 ಕೋಟಿ ತೆರಿಗೆ ವಂಚನೆ ಪತ್ತೆ, ಔಷಧಿಗಳ ಮಾರಾಟಕ್ಕೆ ವೈದ್ಯರಿಗೆ ಆಮಿಷ: ಫಾರ್ಮಾ ಕಂಷನಿ ಷೇರುಗಳ ಬೆಲೆ ಕುಸಿತ

    ರೂ. 1000 ಕೋಟಿ ತೆರಿಗೆ ವಂಚನೆ ಪತ್ತೆ, ಔಷಧಿಗಳ ಮಾರಾಟಕ್ಕೆ ವೈದ್ಯರಿಗೆ ಆಮಿಷ: ಫಾರ್ಮಾ ಕಂಷನಿ ಷೇರುಗಳ ಬೆಲೆ ಕುಸಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts