More

    ಕೆಲಸ ಇಲ್ದೇ ಸಂಬಳ, ಪ್ರೊಫೆಸರ್‌ಗೆ ಹೆಮ್ಮೆ!

    ಮಂಗಳೂರು: ಶಿಕ್ಷಕರ ದಿನಾಚರಣೆಯಂದು ಹಲವು ಅರ್ಥ ಕೊಡುವಂತೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದ ಮಂಗಳೂರು ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕರೊಬ್ಬರಿಗೆ ವಿವಿ ಆಡಳಿತ ನೋಟಿಸ್ ನೀಡಿದೆ.

    ಪ್ರೊ.ಗೋವಿಂದರಾಜ್ ಎನ್ನುವವರು ಫೇಸ್‌ಬುಕ್‌ನಲ್ಲಿ ‘ಪ್ರೌಡ್ ಟು ಬಿ ಎ ಟೀಚರ್ ಬಿಕಾಸ್ ಡ್ರಾಯಿಂಗ್ ಎ ಗುಡ್ ಸ್ಯಾಲರಿ ವಿತೌಡ್ ವರ್ಕ್, ರಿಸ್ಕ್’ (ಕೆಲಸ, ಅಪಾಯವಿಲ್ಲದೆ ಉತ್ತಮ ಸಂಬಳ ಸಿಗುತ್ತಿದೆ, ಅದಕ್ಕೆ ಶಿಕ್ಷಕನಾಗಿರುವುದಕ್ಕೆ ಹೆಮ್ಮೆ ಇದೆ) ಎಂಬ ಪೋಸ್ಟ್ ಹಾಕಿದ್ದರು.
    ಇದನ್ನು ನೋಡಿದ ಕೆಲವರು ಟೀಕಿಸಿದ್ದಲ್ಲದೆ, ಇದನ್ನು ಟ್ವೀಟ್ ಹಾಗೂ ವಾಟ್ಸಾೃಪ್ ಮೂಲಕವೂ ಹಂಚಿಕೊಂಡಿದ್ದರು.

    ಶಿಕ್ಷಕರು ಒಂದೆಡೆ ಕರೊನಾದಿಂದ ಕೆಲಸ ಕಳೆದುಕೊಳ್ಳುತ್ತಿದ್ದಾರೆ, ಹಲವರಿಗೆ ಸಂಬಳ ಸಿಗುತ್ತಿಲ್ಲ ಅಥವಾ ಕಡಿಮೆ ಸಂಬಳ ಸಿಗುತ್ತಿದೆ, ಆದರೂ ಕಷ್ಟಪಟ್ಟು ಕೆಲಸ ಮಾಡುತ್ತಿರುವಾಗ ಈ ರೀತಿಯ ಪೋಸ್ಟ್ ಹಾಕುವುದು ಸರಿಯಲ್ಲ ಎಂಬ ಚರ್ಚೆಗಳಾಗಿದ್ದವು.

    ಈ ಬೆಳವಣಿಗೆ ಗಮನಕ್ಕೆ ಬಂದ ಬಳಿಕ ವಿವಿ ಆಡಳಿತ ಪ್ರಾಧ್ಯಾಪಕರಿಗೆ ನೋಟಿಸ್ ನೀಡಿದ್ದು, 7 ದಿನಗಳೊಳಗೆ ಉತ್ತರಿಸಲು ಸೂಚಿಸಲಾಗಿದೆ. ‘ಮುಂದೆ ಅಂತಹ ಪೋಸ್ಟ್ ಹಾಕಬಾರದು, ಹಾಕಿರುವ ಪೋಸ್ಟ್‌ಗಳನ್ನು ಅಳಿಸಬೇಕು ಎಂದು ಸೂಚನೆ ನೀಡಿದ್ದೇವೆ. ಓರ್ವ ಸ್ವಾಮೀಜಿಯ ಬಗ್ಗೆಯೂ ಅಪಹಾಸ್ಯಕರ ರೀತಿಯಲ್ಲಿ ಅವರು ಪೋಸ್ಟ್ ಹಾಕಿದ್ದಾರೆ. ಸಾರ್ವಜನಿಕವಾಗಿ ಜವಾಬ್ದಾರಿಯುತ ಹುದ್ದೆಯಲ್ಲಿರುವವರು ಅಂತಹ ಪೋಸ್ಟ್ ಹಾಕುವುದು ಸರಿಯಲ್ಲ’ ಎಂದು ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಪ್ರತಿಕ್ರಿಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts